|
ಶ್ರೀನಗರ (ಜಮ್ಮು-ಕಾಶ್ಮೀರ) – ಇಲ್ಲಿಯ ‘ಎನ್.ಐ.ಟಿ ಶ್ರೀನಗರ’ದಲ್ಲಿ ಕಲಿಯುವ ಓರ್ವ ಹಿಂದೂ ವಿದ್ಯಾರ್ಥಿಯು ಮಹಮ್ಮದ್ ಪೈಗಂಬರ್ ಇವರ ಬಗ್ಗೆ ಇಲ್ಲಸಲ್ಲದ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ಆರೋಪ ಮಾಡಲಾಗಿದೆ. ಇದರಿಂದ ವಿಶ್ವವಿದ್ಯಾಲಯದ ಪರಿಸರದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯಿತು. ಈ ಸಮಯದಲ್ಲಿ ‘ಲಬ್ಬೈಕ್ ಯಾ ರಸುಲ್ ಅಲ್ಲಾಹ'(ಅಲ್ಲಾ ನಾವು ನಿಮಗಾಗಿ ಉಪಸ್ಥಿತರಿದ್ದೇವೆ) ಮತ್ತು ‘ಅಲ್ಲಾಹು ಅಕ್ಬರ್’ (ಅಲ್ಲ ಮಹಾನನಾಗಿದ್ದಾನೆ) ಎಂದು ಘೋಷಣೆ ನೀಡಲಾದವು. ಈ ಆಂದೋಲನಕ್ಕೆ ಹಮಾಸ್ ಬೆಂಬಲಿಗರು ಹಾಗೂ ಪಾಕಿಸ್ತಾನ ಕ್ರಿಕೆಟ್ ಆಟಗಾರ ‘ಪ್ರೊಫೈಲ್ ಫೋಟೋ’ ಇರುವ ಸಾಮಾಜಿಕ ಜಾಲತಾಣದಲ್ಲಿನ ಖಾತೆಯಿಂದ ಕೂಡ ಪ್ರಸಾರ ಮಾಡಲಾಯಿತು. ಇದರಿಂದ ಪೊಲೀಸರು ಆರೋಪಿ ವಿದ್ಯಾರ್ಥಿಯ ವಿರುದ್ಧ ದೂರು ದಾಖಲಿಸಿದ್ದಾರೆ. ವಿಶ್ವವಿದ್ಯಾಲಯದ ಆಡಳಿತದಿಂದ ಆರೋಪಿ ವಿದ್ಯಾರ್ಥಿಯನ್ನು ಅಮಾನತುಗೊಳಿಸಿ ಮುಂದಿನ ಎಲ್ಲಾ ‘ಸೆಮಿಸ್ಟರ್’ ಗಾಗಿ (ಪರೀಕ್ಷೆಗಾಗಿ) ಅನರ್ಹ ಎಂದು ಘೋಷಿಸಿದೆ. ಈ ಸಂಪೂರ್ಣ ಘಟನೆ ನವಂಬರ್ ೨೮ ರಂದು ನಡೆದಿದೆ.
೧. ಸ್ಥಳೀಯ ಪ್ರಸಾರ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಸಂಬಂಧಿಸಿದ ಆರೋಪಿ ಹಿಂದೂ ವಿದ್ಯಾರ್ಥಿಯು ಅವನ ವಾಟ್ಸಪ್ ಮತ್ತು ಇನ್ಸ್ಟಾಗ್ರಾಮ್ ಖಾತೆಯ ‘ಸ್ಟೇಟಸ್’ನಲ್ಲಿ ಮಹಮ್ಮದ್ ಪೈಗಂಬರ್ ಇವರ ಸಂದರ್ಭದಲ್ಲಿ ಒಂದು ತಥಾಕಥಿತ ಆಕ್ಷೇಪಾರ್ಹ ವಿಡಿಯೋ ಪ್ರಸಾರ ಮಾಡಿದ್ದನು. ಅನೇಕರು ಮಾತ್ರ ಈ ವಿಡಿಯೋ ಹಮಾಸ್ ಸಂಸ್ಥಾಪಕನ ಮಗನದಾಗಿದೆ ಎಂದು ಹೇಳಿದ್ದಾರೆ.
೨. ‘ಹಿಂದೂ ವಿದ್ಯಾರ್ಥಿಯು ಕೇವಲ ಮೇಲಿನ ವೀಡಿಯೋ ಪ್ರಸಾರ ಮಾಡಿದ್ದಾನೆ ಎಂದು ಅಷ್ಟೇ ಅಲ್ಲದೆ ಅವನ ಪ್ರೇಯತಮೆ ಮುಸಲ್ಮಾನ ವಿದ್ಯಾರ್ಥಿನಿ ಇರುವುದರಿಂದ ಆರೋಪಿ ವಿದ್ಯಾರ್ಥಿಯ ಮೇಲೆ ಶ್ರೀನಗರದಲ್ಲಿನ ಕಟ್ಟರ ಮುಸಲ್ಮಾನರ ರೋಷವಿತ್ತು ಎಂದು ಹೇಳಲಾಗುತ್ತಿದೆ.
ಸಂಪಾದಕೀಯ ನಿಲುವುಮತಾಂಧ ಮುಸಲ್ಮಾನರಿಂದ ವಿರೋಧ ಆದ ನಂತರ ಆರೋಪಿ ಹಿಂದೂ ವಿದ್ಯಾರ್ಥಿಯನ್ನು ಅಮಾನತುಗೊಳಿಸುವುದು ಕಾಶ್ಮೀರ್ ಭಾರತದಲ್ಲಿ ಇದೆಯೇ ಅಥವಾ ಪಾಕಿಸ್ತಾನದಲ್ಲಿ ? ಹಿಂದುಗಳ ದೇವಿ ದೇವತೆಯರ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ ಮೌರ್ಯ ನಿರಂತರ ವಿಷ ಕಾರುತ್ತಿರುತ್ತಾರೆ, ಅವರ ವಿರುದ್ಧ ಈ ರೀತಿಯ ಯಾವುದೇ ಕ್ರಮ ಏಕೆ ಕೈಗೊಳ್ಳಲಾಗಿಲ್ಲ ? ‘ಹಿಂದೂಗಳಲ್ಲಿ ಅತಿ ಸಹಿಷ್ಣತೆಯ ಪರಿಣಾಮವಿದು ಎಂದು ಯಾರಿಗಾದರೂ ಅನಿಸಿದರೆ ಅವರು ಮುಸಲ್ಮಾನರ ಹಾಗೆ ಹಿಂಸಕವಾಗುವ ವಿಚಾರ ಮಾಡಿ ಅವರ ಕೃತ್ಯಕ್ಕೆ ಭಾರತೀಯ ವ್ಯವಸ್ಥೆಯಲ್ಲಿ ಯಾರನ್ನು ಹೊಣೆಗಾರರನ್ನಾಗಿ ಮಾಡಲಿದೆ ? |