ಧರ್ಮಶಾಳಾ (ಹಿಮಾಚಲ ಪ್ರದೇಶ)ದಲ್ಲಿನ ವಿಧಾನಭವನದ ಮೇಲೆ ಅಜ್ಞಾತರು ಖಲಿಸ್ತಾನದ ಧ್ವಜಗಳನ್ನು ಹಚ್ಚಿದ್ದಾರೆ

ಇಲ್ಲಿನ ವಿಧಾನಸಭಾ ಭವನದ ಮುಖ್ಯ ಪ್ರವೇಶದ್ವಾರದ ಮೇಲೆ ರಾತ್ರಿಯ ಸಮಯದಲ್ಲಿ ಅಜ್ಞಾತರು ಖಲಿಸ್ತಾನಿ ಧ್ವಜವನ್ನು ಹಚ್ಚಿರುವ ಹಾಗೆಯೇ ಭವನದ ಗೋಡೆಗಳ ಹೊರಗಿನ ಬದಿಯಲ್ಲಿ ಖಲಿಸ್ತಾನಿ ಸಮರ್ಥನೆಯ ಘೋಷಣೆಗಳನ್ನು ಬರೆದಿರುವುದು ಕಂಡುಬಂದಿದೆ.

ಊನಾ (ಹಿಮಾಚಲ ಪ್ರದೇಶ)ದಲ್ಲಿ ಮತಾಂಧನಿಂದ ೧೫ ವರ್ಷದ ಹುಡುಗಿಯ ಹತ್ಯೆ

ಇಲ್ಲಿ ಓರ್ವ ೧೫ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡುವ ಪ್ರಯತ್ನದಿಂದ ಆಕೆಯ ಹತ್ಯೆ ಮಾಡಿರುವ ಪ್ರಕರಣದಲ್ಲಿ ಮಹಮ್ಮದ ಆಸೀಫನನ್ನು ಬಂಧಿಸಲಾಗಿದೆ. ಸ್ಥಳೀಯರು ಆಸೀಫನಿಗೆ ಗಲ್ಲು ಶಿಕ್ಷೆ ನೀಡಬೇಕಾಗಿ ಮನವಿ ಮಾಡಿದ್ದಾರೆ.

ಸಂಸ್ಕೃತ ಭಾಷೆಯನ್ನು ಪ್ರೋತ್ಸಾಹಿಸಲು ಮತ್ತು ಅದರ ಪ್ರಚಾರಕ್ಕಾಗಿ ಹೆಜ್ಜೆಯಿಡುವುದು ಆವಶ್ಯಕವಾಗಿದೆ ! – ಭಾಜಪದ ಸರಕಾರವಿರುವ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜಯರಾಮ ಠಾಕೂರ

ಸಂಸ್ಕೃತವು ಪ್ರಾಚೀನ ಭಾಷೆಯಾಗಿದೆ ಹಾಗೂ ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಒಂದಾಗಿದೆ. ಭಾರತವು ಜಗತ್ತಿಗೇ ನೀಡಿರುವ ಅತ್ಯಂತ ಮಹತ್ವದ ಕೊಡುಗೆಯಾಗಿದೆ. ಸಂಸ್ಕೃತ ಭಾಷೆಯು ಸಾಹಿತ್ಯದ ಮಹಾಸಾಗರವಾಗಿದೆ.

ಹಿಮಾಚಲ ಪ್ರದೇಶದಲ್ಲಿರುವ ದೇವಸ್ಥಾನಗಳ ಹಣ ಕೇವಲ ಹಿಂದೂಗಳಿಗಾಗಿ ವಿನಿಯೋಗ ! – ರಾಜ್ಯದ ಭಾಜಪ ಸರಕಾರದ ಅಭಿನಂದನೀಯ ನಿರ್ಣಯ

ಹಿಮಾಚಲ ಪ್ರದೇಶ ಸರಕಾರವು ಕೈಗೊಂಡ ಈ ನಿರ್ಣಯವನ್ನು ಭಾಜಪ ಅಧಿಕಾರ ಇರುವ ಎಲ್ಲ ಸರ್ಕಾರಗಳು ತೆಗೆದುಕೊಳ್ಳಬೇಕು, ಹಾಗೆಯೇ ಕೇಂದ್ರ ಸರಕಾರವೂ ಇದಕ್ಕಾಗಿ ಪ್ರಯತ್ನಿಸಬೇಕು, ಎಂದು ಹಿಂದೂಗಳ ಅನ್ನಿಸುತ್ತದೆ !