Himachal Pradesh Masjid Dispute : ಹಿಮಾಚಲ ಪ್ರದೇಶ : ಶೇ. 100 ರಷ್ಟು ಹಿಂದೂಗಳಿರುವ ಬಸೋಲಿ ಗ್ರಾಮದಲ್ಲಿ ಮಸೀದಿ ನಿರ್ಮಾಣ !

ಮಸೀದಿ ತೆರವಿಗೆ ಆಕ್ರೋಶಿತ ಹಿಂದೂಗಳಿಂದ ಆಗ್ರಹ !

ಶಿಮ್ಲಾ (ಹಿಮಾಚಲ ಪ್ರದೇಶ) – ರಾಜ್ಯದ ಉನಾ ಜಿಲ್ಲೆಯಲ್ಲಿ ಶೇ. 100 ರಷ್ಟು ಹಿಂದೂಗಳಿರುವ ಗ್ರಾಮವಾದ ಬಸೋಲಿಯಲ್ಲಿ ರಹಸ್ಯವಾಗಿ ಮಸೀದಿಯನ್ನು ನಿರ್ಮಿಸಲಾಗಿದೆ. ಗ್ರಾಮದಲ್ಲಿ ಮುಸ್ಲಿಮರೇ ಇಲ್ಲದಿದ್ದಾಗ ಮಸೀದಿ ನಿರ್ಮಿಸುತ್ತಿರುವುದನ್ನು ಕಂಡು ಬೆಚ್ಚಿಬಿದ್ದ ಜನರು ಮಸೀದಿಯನ್ನು ತೆಗೆಯುವಂತೆ ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದಾರೆ. ರಾಜಧಾನಿ ಶಿಮ್ಲಾದ ಸಂಜೌಲಿ ಪ್ರದೇಶದಲ್ಲಿ ಹಾಗೂ ರಾಜ್ಯದ ಇತರ ಹಲವು ನಗರಗಳಲ್ಲಿ ಅಕ್ರಮ ಮಸೀದಿಗಳ ವಿಚಾರವಾಗಿ ಹಿಂದೂಗಳು ಮತ್ತು ಮುಸ್ಲಿಮರು ಈಗಾಗಲೇ ಪರಸ್ಪರ ಮುಖಾಮುಖಿಯಾಗಿದ್ದಾರೆ. ಇದೀಗ ಈ ಘಟನೆಯಿಂದ ಉನಾ ಜಿಲ್ಲೆಯಲ್ಲಿ ವಿವಾದ ಭುಗಿಲೆದ್ದಿದೆ.

ಇಲ್ಲಿ ನಮಾಜ್ ಮಾಡಲು ಯಾರೂ ಇಲ್ಲದಿರುವಾಗ ಇದನ್ನು ನಿರ್ಮಿಸುವ ಉದ್ದೇಶವೇನು ಎಂದು ಬಸೋಲಿ ಗ್ರಾಮದ ಹಿಂದೂಗಳು ಕೇಳಿದರು. ಉನಾದ ಜನಸಂಖ್ಯೆಯನ್ನು ಬದಲಾಯಿಸುವ ಷಡ್ಯಂತ್ರವಿದೆಯೇ? ವಾಸ್ತವವಾಗಿ ಈ ಭೂಮಿಯನ್ನು 2010 ರಲ್ಲಿ ಮಾರಾಟ ಮಾಡಲಾಗಿದೆ. ಆ ಸಮಯದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಈ ಜಮೀನನ್ನು ಖರೀದಿಸಿದ್ದರು. ಅದರ ನಂತರ, ಈ ಭೂಮಿಯಲ್ಲಿ ನಿರ್ಮಾಣ ಪ್ರಾರಂಭವಾಯಿತು. ರಸ್ತೆಯಿಂದ ದೂರದಲ್ಲಿರುವ ಈ ಕಟ್ಟಡ ಕಾಮಗಾರಿ ನಿರ್ಮಾಣವಾಗಿದ್ದರೂ ಯಾರೂ ಗಮನಹರಿಸಿಲ್ಲ. ಈಗ ನಿರ್ಮಾಣ ಪೂರ್ಣಗೊಂಡು ಅಲ್ಲಿ ಮಸೀದಿ ನಿರ್ಮಾಣವಾದರೂ ವಿಷಯ ಬಿಸಿ ಮುಟ್ಟಿದೆ. ಮಸೀದಿಯನ್ನು ತೆಗೆಯುವಂತೆ ಜನರು ಜಿಲ್ಲಾಡಳಿತಕ್ಕೆ 7 ದಿನಗಳ ಎಚ್ಚರಿಕೆ ನೀಡಿದ್ದರು; ಆದರೆ ಇದೀಗ ಈ ಅವಧಿ ಮುಗಿದ ಬಳಿಕ ಜನರ ಆಕ್ರೋಶ ಮುಗಿಲು ಮುಟ್ಟಿದೆ.

ಜಿಲ್ಲಾಡಳಿತವು ಮಸೀದಿಯ ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಅದರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು.

ಸಂಪಾದಕೀಯ ನಿಲುವು

ಮೊದಲು ಮಸೀದಿ ನಿರ್ಮಿಸಿ, ನಂತರ ನಮಾಜ್ ಮಾಡಲು ಮತ್ತು ವಕ್ಫ್ ಕಾಯ್ದೆಯ ನೆಪದಲ್ಲಿ ಭೂಮಿ ಮೇಲೆ ಅಕ್ರಮ ನಿಯಂತ್ರಣ ಸಾಧಿಸಲು ಮತ್ತು ಅದನ್ನು ಸಕ್ರಮಗೊಳಿಸಲು ಅದರ ಸುತ್ತಲೂ ಮನೆಗಳನ್ನು ನಿರ್ಮಿಸುವ ಭಯಾನಕ ರೂಪವಾಗಿದೆ. ಈ ಭೂಮಿ ಜಿಹಾದ್ ನಿರ್ಮೂಲನೆಗಾಗಿ ಇಂದು ಹಿಂದುತ್ವನಿಷ್ಠ ಕಮಲ್ ಗೌತಮ್ ನೇತೃತ್ವದಲ್ಲಿ ಹಿಮಾಚಲ ಪ್ರದೇಶದ ಲಕ್ಷಾಂತರ ಹಿಂದೂಗಳು ಹೋರಾಡುತ್ತಿದ್ದಾರೆ. ಎಲ್ಲೆಡೆ ಇರುವ ಹಿಂದೂಗಳು ಇವರ ಆದರ್ಶವನ್ನು ತೆಗೆದುಕೊಳ್ಳಬೇಕು !