ಶಿಮ್ಲಾದ ಒಂದು ಹೋಟೆಲ್‌ನಲ್ಲಿ ನವರಾತ್ರಿಯಂದು ಗೋಮಾಂಸದ ಊಟ; ಹಿಂದೂ ಸಂಘಟನೆಗಳ ಆಕ್ರೋಶ !

  • ಕಾಶ್ಮೀರದ ರಯೀಸ್ ಖಾನ್ ಮತ್ತು ರಿಜ್ವಾನ್ ವಿರುದ್ಧ ಆರೋಪ !

  • ಹಿಂದೂಗಳಲ್ಲಿರುವ ಅತಿಯಾದ ಸಹಿಷ್ಣು ಮನೋಭಾವದ ಪರಿಣಾಮ !

ಶಿಮ್ಲಾ (ಹಿಮಾಚಲ ಪ್ರದೇಶ) – ಇಲ್ಲಿನ ಅಕ್ರಮ ಮಸೀದಿ ವಿಷಯದ ವಾದ ಇನ್ನೂ ಬಗೆಹರಿದಿಲ್ಲ. ಈಗ ಇಲ್ಲಿನ ಒಂದು ಹೋಟೆಲನಲ್ಲಿ ಗ್ರಾಹಕರಿಗೆ ದನದ ಮಾಂಸ ಸೇವಿಸುವಂತೆ ಮಾಡಿರುವ ಆರೋಪದಿಂದ ವಾತಾವರಣ ಮತ್ತಷ್ಟು ಹೆಚ್ಚು ಉದ್ವಿಗ್ನಗೊಂಡಿದೆ. ಅಕ್ಟೋಬರ 5 ರಂದು ಪ್ರಖರ ಹಿಂದುತ್ವನಿಷ್ಠ ನಾಯಕ ಕಮಲ ಗೌತಮ ಇವರು `ಎಕ್ಸ’ ಮೂಲಕ 2 ವಿಡಿಯೋ ಪ್ರಸಾರ ಮಾಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಶಿಮ್ಲಾದ ‘ಹೋಮ್ ಸ್ಟೇ ರಾಜ್ ವಿಲ್ಲಾ’ ಹೋಟೆಲ್‌ನಲ್ಲಿ ನವರಾತ್ರಿ ಸಂದರ್ಭದಲ್ಲಿ ಗೋಮಾಂಸವನ್ನು ಬೇಯಿಸಿ ಸೇವಿಸಿರುವುದಾಗಿ ಅವರು ಹೇಳಿದ್ದರು. ಮುಸಲ್ಮಾನ ಸಮುದಾಯದ ರಯಿಸ ಖಾನ ಮತ್ತು ರಿಜ್ವಾನ ಈ ವ್ಯಕ್ತಿ ಅಲ್ಲಿನ ನೌಕರರಾಗಿದ್ದು, ಅವರ ಮೇಲೆ ಈ ಆರೋಪ ಮಾಡಲಾಗಿದೆ. ಇವರಿಬ್ಬರೂ ಕಾಶ್ಮೀರ ನಿವಾಸಿಯಾಗಿದ್ದರೆಂದು ಹೇಳಲಾಗುತ್ತಿದೆ. ಈ ಘಟನೆಯಿಂದ ಹಿಂದೂ ಸಂಘಟನೆ ಆಕ್ರೋಶಗೊಂಡಿದೆ. ಹೆಚ್ಚುತ್ತಿರುವ ವಿರೋಧವನ್ನು ನೋಡಿ ರಯಿಸ ಮತ್ತು ರಿಜ್ವಾನ ಇವರನ್ನು ಹೊಟೆಲ ಮಾಲೀಕನು ನೌಕರಿಯಿಂದ ವಜಾ ಮಾಡಿದ್ದಾನೆ.

ಕಮಲ್ ಗೌತಮ್ ಇವರು ಮಾತನಾಡಿ, ಹೋಟೆಲ್ ‘ಹೋಮ್ ಸ್ಟೇ ರಾಜ್ ವಿಲ್ಲಾ’ ಶಿಮ್ಲಾದ ಹಳೆಯ ಬಸ್ ನಿಲ್ದಾಣದ ಬಳಿ ಇದೆ. ಈ ಹೋಟೆಲ್‌ನಲ್ಲಿನ ಓರ್ವ ಹಿಂದೂ ನೌಕರನು ಪೊಲೀಸರಲ್ಲಿ ದೂರು ದಾಖಲಿಸಿದ್ದಾನೆ. ಮುಸ್ಲಿಂ ಸಮುದಾಯದ ಕೆಲವು ಜನರು ಹೋಟೆಲ್‌ಗಳಲ್ಲಿ ಗೋಮಾಂಸವನ್ನು ತಂದು ತಿನ್ನುತ್ತಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.