ಮಂಡಿಯಲ್ಲಿ (ಹಿಮಾಚಲ ಪ್ರದೇಶ) ಮಸೀದಿಯ ಅಕ್ರಮ ಕಟ್ಟಡ ಕೆಡವಲು ತಡೆ

ಮಂಡಿ (ಹಿಮಾಚಲ ಪ್ರದೇಶ) – ಇಲ್ಲಿನ ಮಸೀದಿಯ ಅಕ್ರಮ ಭಾಗವನ್ನು ಸೆ.13ರಂದು ಕೆಡವಲು ಮಹಾನಗರಪಾಲಿಕೆ ಆಯುಕ್ತರು ನೀಡಿದ್ದ ಆದೇಶವನ್ನು ನಗರ ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೇವಶ ಕುಮಾರ್ ಅವರು ಸ್ಥಗಿತಗೊಳಿಸಿದ್ದಾರೆ. ಮಸೀದಿಯ 2 ಮಹಡಿಗಳನ್ನು ಕೆಡವಲು ಪಾಲಿಕೆ ಆಯುಕ್ತರು ಆದೇಶ ನೀಡಿದ್ದರು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 20 ರ ನಂತರ ಪ್ರಧಾನ ಕಾರ್ಯದರ್ಶಿಗಳ ಸಭಾಂಗಣದಲ್ಲಿ ನಡೆಯಲಿದೆ. ಆಯುಕ್ತರ ಆದೇಶವನ್ನು ಪ್ರಶ್ನಿಸಿ ಮುಸಲ್ಮಾನ ಪಕ್ಷವು ನೀಡಿದ ಮನವಿಯ ನಂತರ ಸ್ಥಗಿತ ನೀಡಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಹಿಂದೂ ಸಂಘಟನೆಗಳು ಈ ಮಸೀದಿ ಕೆಡುವುದಕ್ಕಾಗಿ ಆಂದೋಲನ ಮಾಡುತ್ತಿವೆ.

ದೇವೇಶ ಕುಮಾರ್ ಅವರು ಮಂಡಿ ಮಹಾನಗರ ಪಾಲಿಕೆಗೆ ತಮ್ಮ ದಾಖಲೆಗಳೊಂದಿಗೆ ಕಛೇರಿಗೆ ಹಾಜರುಪಡಿಸುವಂತೆ ಹೇಳಿದ್ದಾರೆ. ಈ ದಾಖಲೆಗಳ ಆಧಾರದ ಮೇಲೆ ಮಂಡಿ ಮಸೀದಿ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.