|
ಶಿಮ್ಲಾ (ಹಿಮಾಚಲ ಪ್ರದೇಶ) – ಹಿಮಾಚಲ ಪ್ರದೇಶದ ಸ್ಥಿತಿ ಅತ್ಯಂತ ಭಯಾನಕವಾಗಿದೆ. ಅಲ್ಲಿ ಕೇವಲ ರಾಜಧಾನಿ ಶಿಮ್ಲಾದಲ್ಲಿನ ಸಂಜೌಲಿ ಮಸೀದಿಯ ಪ್ರಶ್ನೆ ಅಷ್ಟೇ ಅಲ್ಲ, ರಾಜ್ಯಾದ್ಯಂತ ಈ ರೀತಿಯ ಅನೇಕ ಅಕ್ರಮ ಮಸೀದಿಗಳು ಕಟ್ಟಲಾಗಿವೆ ಎಂದು ಪ್ರಖರ ಹಿಂದುತ್ವನಿಷ್ಠ ನಾಯಕ ಮತ್ತು ಹಿಂದೂ ಜಾಗರಣ ಮಂಚ್‌ನ ಮಾಜಿ ಮಹಾಸಚಿವ ಕಮಲ ಗೌತಮ್ ಇವರು ಹೇಳಿಕೆ ನೀಡಿದರು. ‘ಸನಾತನ ಪ್ರಭಾತ’ಗೆ ಗೌತಮ ಅವರು ಇತ್ತೀಚಿಗೆ ದೂರವಾಣಿಯಲ್ಲಿ ಸಂದರ್ಶನ ನೀಡಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಗೌತಮ್ ಇವರು ಮಾಜಿ ಸರಕಾರಿ ಶಿಕ್ಷಕರಾಗಿದ್ದು ಅವರ ನೇತೃತ್ವದಲ್ಲಿ ಮಸೀದಿಯ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ಅವರು, ಕೊರೊನಾ ಮಹಾಮಾರಿಯ ಕಾಲದಲ್ಲಿ ರಾಜ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ಅಕ್ರಮ ಮಸೀದಿಗಳ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಕೋರೋನಾ ಮಹಾಮಾರಿಯ ಮೊದಲು ೩೯೩ ಮಸೀದಿಗಳು ಇದ್ದವು ಅದರ ನಂತರ ಅದರ ಸಂಖ್ಯೆ ೫೫೦ ಕ್ಕಿಂತಲೂ ಹೆಚ್ಚಾಗಿದೆ. ಜಿಲ್ಲಾವಾರು ಮಸೀದಿಯ ಸಂಖ್ಯೆ ನಮ್ಮ ಬಳಿ ಲಭ್ಯವಿದೆ. (ಈ ಸಮಯದಲ್ಲಿ ಗೌತಮ್ ಇವರು ಈ ಪಟ್ಟಿ ‘ಸನಾತನ ಪ್ರಭಾತ’ಗೆ ಕಳುಹಿಸಿದ್ದಾರೆ.)
ಹಿಂದೂ ಜಾಗರಣ ಮಂಚ್‌ನ ಮಾಜಿ ಮಹಾಸಚಿವ ಕಮಲ ಗೌತಮ್ ಮಾತು ಮುಂದುವರೆಸಿ,
೧. ರಾಜ್ಯದಲ್ಲಿ ನಡೆದಿರುವ ಲವ್ ಜಿಹಾದ್ ಘಟನೆಗಳಿಂದ ನಾವು ಹಿಂದುತ್ವನಿಷ್ಠರು ಕಳೆದ ಕೆಲವು ವರ್ಷಗಳಲ್ಲಿ ೯೦೦ ಹಿಂದೂ ಹುಡುಗಿಯರನ್ನು ಬಿಡಿಸಿಕೊಂಡು ಮನೆಗೆ ಕ್ಷೇಮವಾಗಿ ಕರೆತಂದಿದ್ದೇವೆ.
೨. ನಾವು ‘ಆರ್.ಟಿ.ಟಿ. ಅಭಿಯಾನ’ ನಡೆಸಲು ಆರಂಭಿಸಿದ್ದೇವೆ. ಇದರ ಅರ್ಥ ‘ರೋಕೊ, ಟೋಕೋ’ ಠೂಕೋ, ಅಭಿಯಾನ ! ಇದರ ಅರ್ಥ ಏನೆಂದರೆ ರಾಜ್ಯದಲ್ಲಿನ ಯಾವುದೇ ಗ್ರಾಮದ ಹೊರಗೆ ಯಾರಾದರೂ ಮುಸಲ್ಮಾನ ಅಥವಾ ರೋಹಿಂಗ್ಯ ಬಂದರೆ ಅವನನ್ನು ತಡೆಯುವುದು, ಅವನು ಕೇಳಲಿಲ್ಲ ಎಂದರೆ ಬಯ್ಯುವುದು ಮತ್ತು ಗ್ರಾಮಕ್ಕೆ ಬರಲು ನಿಷೇಧಿಸುವುದು. ಆಗಲೂ ಅವನು ಕೇಳಲಿಲ್ಲ ಅಂದರೆ ಅವನಿಗೆ ಹೊಡೆಯುವುದು. ಈ ರೀತಿಯ ಕೆಲವು ಘಟನೆಗಳು ಕೂಡ ನಡೆದಿದೆ. ಇದರಿಂದ ನನ್ನ ವಿರುದ್ಧ ೨-೩ ದೂರಗಳು ಕೂಡ ದಾಖಲಾಗಿವೆ.
೩. ನಮ್ಮ ಮುಂದಿನ ಹೆಜ್ಜೆ ‘ಜನತಾ ಎನ್.ಆರ್.ಸಿ.’ (ರಾಷ್ಟ್ರೀಯ ನಾಗರೀಕ ನೊಂದಣಿ) ಆಗಿದೆ. ಇದೂ ಆರಂಭವಾಗಿ ಹಿಮಾಚಲ ಪ್ರದೇಶದಲ್ಲಿ ಅನೇಕ ಗ್ರಾಮದ ಹೊರಗೆ ಹೊರಗಿನ ಮುಸಲ್ಮಾನ ಅಥವಾ ರೋಹಿಂಗ್ಯಗಳು ಗ್ರಾಮದಲ್ಲಿ ಪ್ರವೇಶಿಸಬಾರದೆಂದು’, ಅನೇಕ ರೀತಿಯ ಫಲಕಗಳು ಹಾಕಲಾಗಿದೆ. ನಮ್ಮ ತಾಯಂದಿರ ಸಹೋದರಿಯರ ಮಾನ ರಕ್ಷಣೆಗಾಗಿ ನಾವು ಈ ಹೆಜ್ಜೆ ಎತ್ತುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಇಷ್ಟ ದೊಡ್ಡ ಸಂಘಟನೆ ನಿರ್ಮಿಸುವುದು, ಇದು ಭಗವಂತನ ಕೃಪೆ ! – ಕಮಲ ಗೌತಮ
ಈ ಸಮಯದಲ್ಲಿ ಗೌತಮ್ ಇವರು, ಈಗ ನಾನು ಯಾವುದೇ ಸಂಘಟನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಸಂಘಟನೆ ಇರುವುದರಿಂದ ಕಾರ್ಯಕ್ಕೆ ಮಿತಿ ಇರುತ್ತದೆ. ನಾವು ಸಂಕುಚಿತರಾಗುತ್ತೇವೆ. ಈಗ ನಾನು ಸಂಪೂರ್ಣ ಹಿಂದೂ ಸಮಾಜದವನಾಗಿದ್ದೇನೆ. ಭಗವಂತನ ಪ್ರೇರಣೆಯಿಂದ ಇಂದು ರಾಜ್ಯದಲ್ಲಿ ಬೃಹತ್ ಸಂಘಟನೆ ರೂಪಗೊಂಡಿದೆ. ಇಷ್ಟೊಂದು ಬೃಹತ್ ಪ್ರಮಾಣದ ಹಿಂದೂ ಸಂಘಟನೆ ರೂಪಗೊಳ್ಳುವುದು ಇದು ಭಗವಂತನ ಕೃಪೆಯೇ ಆಗಿದೆ ಎಂದು ಹೇಳಿದರು.
ಹಿಮಾಚಲ ಪ್ರದೇಶದ ಲಕ್ಷಾಂತರ ಹಿಂದೂ ಜನರು ಜಾಗೃತರಾಗಿ ಸಂಘಟಿತ ಹೇಗೆ ಆದರು ?
ಇಂದು ಭಾರತಾದ್ಯಂತ ಸಾಮಾನ್ಯ ಹಿಂದುಗಳು ನಿದ್ರಿಸಿದ್ದಾರೆ. ಹಿಂದುಗಳ ಮೇಲೆ ಎಲ್ಲಿಯೇ ಆಘಾತವಾದರೂ ಕೂಡ ಹಿಂದುಗಳಿಂದ ಇದರ ವಿರುದ್ಧ ಸಂಘಟಿತವಾಗಿ ಪ್ರತ್ಯುತ್ತರ ನೋಡಲು ಸಿಗುವುದಿಲ್ಲ. ಇದರಿಂದ ನಿಮ್ಮ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ವ್ಯಾಪಕ ಸಂಘಟನೆ ಹೇಗೆ ರೂಪಗೊಂಡಿದೆ, ಎಂದು ಗೌತಮ್ ಇವರಿಗೆ ಕೇಳಿದಾಗ ಅವರು, ನನ್ನ ಬಲಿದಾನದಿಂದ ರಾಜ್ಯದಲ್ಲಿ ಹಿಂದುಗಳ ಮೇಲೆ ದೊಡ್ಡ ಆಘಾತವಾಯಿತು. ನಾನು ಹಿಂದುತ್ವಕ್ಕೆ ಸಂಬಂಧಿಸಿದ ವಿವಿಧ ಕಾರ್ಯಗಳು ಮಾಡುತ್ತಿರುವಾಗ ನನಗೆ ನನ್ನ ಸರಕಾರಿ ಶಾಲೆಯ ನೌಕರಿಯಿಂದ ೧೧ ತಿಂಗಳು ಅಮಾನತು ಗೊಳಿಸಲಾಗಿತ್ತು. ಈ ಘಟನೆ ಜುಲೈ ೨೦೨೩ ರಲ್ಲಿ ನಡೆದಿದ್ದು ಕೆಲವು ಮುಸಲ್ಮಾನರು ಮನೋಹರ ಈ ಹಿಂದೂ ಯುವಕನ ಹತ್ಯೆ ಮಾಡಿದ್ದರು. ಅದಕ್ಕೆ ನಾನು ತೀವ್ರ ವಿರೋಧ ವ್ಯಕ್ತಪಡಿಸಿ ನಾವು ಅನೇಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದೆವು. ಅದರ ನಂತರ ನನ್ನನ್ನು ಕಾಯಂ ಆಗಿ ಅಮಾನತಗೊಳಿಸಲಾಯಿತು. ಇದರಿಂದ ರಾಜ್ಯದಲ್ಲಿನ ಹಿಂದುಗಳು ಜಾಗೃತರಾದರು ಮತ್ತು ಇಂದು ನಮ್ಮ ಬೃಹತ್ ಸಂಘಟನೆ ರೂಪಗೊಳ್ಳಲು ಸಾಧ್ಯವಾಯಿತು. ಇದೆಲ್ಲವೂ ಈಶ್ವರನ ಪ್ರೇರಣೆಯಿಂದಲೇ ಸಾಧ್ಯವಾಗಿದೆ ಎಂದು ನಾನು ನಂಬುತ್ತೇನೆ, ಹೀಗೆ ಗೌತಮ್ ಅತ್ಯಂತ ನಮ್ರತೆಯಿಂದಲೇ ಹೇಳಿದರು.
ಶಿಮ್ಲಾ : ಅಕ್ರಮ ಸಂಜೌಲಿ ಮಸೀದಿಯ ವಿರುದ್ಧ ನಡೆದಿರುವ ಐತಿಹಾಸಿಕ ರಾಷ್ಟ್ರವ್ಯಾಪಿ ಪ್ರತಿಭಟನೆ !
ಸಂಪಾದಕೀಯ ನಿಲುವುಭಾರತದಲ್ಲಿನ ಒಂದೊಂದು ರಾಜ್ಯ ತಮ್ಮ ವಶಕ್ಕೆ ತೆಗೆದುಕೊಳ್ಳುವುದಕ್ಕಾಗಿ ಮುಸಲ್ಮಾನರ ಇದು ಒಂದು ಪ್ರಯತ್ನವಾಗಿದೆ. ಅಕ್ರಮ ಮಸೀದಿ ಕಟ್ಟುವುದು ಸರಕಾರಿ ಹಾಗೂ ಆಡಳಿತ ಮಟ್ಟದಲ್ಲಿ ಸಹಾಯ ಪಡೆಯದೆ ಸಾಧ್ಯವಿಲ್ಲ. ಆದ್ದರಿಂದ ಇದಕ್ಕೆ ಜವಾಬ್ದಾರ ಆಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! |