ಶಿಮ್ಲಾ : ಮಸೀದಿಯ ಸಮಿತಯಿಂದ ಮಸೀದಿಯ ೩ ಅಕ್ರಮ ಅಂತಸ್ತುಗಳನ್ನು ಕೆಡವಲು ಆರಂಭ !

ಹಿಂದುಗಳ ಒತ್ತಡದಿಂದ ಮಣಿದ ಹಿಮಾಚಲ ಪ್ರದೇಶದಲ್ಲಿನ ಕಾಂಗ್ರೆಸ್ ಸರಕಾರ, ಮಹಾನಗರ ಪಾಲಿಕೆ ಆಡಳಿತ ಮತ್ತು ವಕ್ಫ್ ಬೋರ್ಡ್ ಮತ್ತು ಮಸೀದಿ ಸಮಿತಿ !

ಶಿಮ್ಲಾ (ಹಿಮಾಚಲಪ್ರದೇಶ) – ಇಲ್ಲಿಯ ಸಂಜೌಲಿ ಮಸೀದಿಯ ಅಕ್ರಮ ಕಾಮಗಾರಿ ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ಮಸೀದಿಯ ಮೇಲಿನ ೩ ಅಂತಸ್ತು ತೆರೆವುಗೊಳಿಸಲು ಮಹಾಪಾಲಿಕೆ ಆಯುಕ್ತರು ಅಕ್ಟೋಬರ್ ೫ ರಂದು ಆದೇಶ ನೀಡಿತ್ತು. ಸಂಜೌಲಿ ಮಸೀದಿ ಸಮಿತಿಗೆ ಈ ಕೆಲಸ ಸ್ವಂತ ಖರ್ಚಿನಿಂದ ಮಾಡಲು ಹೇಳಲಾಗಿದೆ. ವಕ್ಫ್ ಬೋರ್ಡ್ ನ ಅನುಮತಿ ಪಡೆದ ನಂತರ ಮಸೀದಿ ಸಮಿತಿಯು ಅಕ್ಟೋಬರ್ ೨೧ ರಂದು ಅಕ್ರಮ ಭಾಗ ತೆರವುಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದೆ.

ಶಿಮ್ಲಾದಲ್ಲಿನ ಈ ಮಸೀದಿ ೧೯೪೭ ಹಿಂದೆಯೇ ಕಟ್ಟಲಾಗಿತ್ತು. ಆಗ ಅದರ ಎರಡೇ ಅಂತಸ್ತು ಇತ್ತು. ಅದರ ನಂತರ ಅದರ ಮೇಲೆ ಅಕ್ರಮವಾಗಿ ಇನ್ನೂ ೩ ಅಂತಸ್ತುಗಳು ಕಟ್ಟಲಾಗಿದ್ದವು. ಇದರ ವಿರುದ್ಧ ೧೪ ವರ್ಷಗಳಿಂದ ಮಹಾಪಾಲಿಕೆ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿತ್ತು. ಕಳೆದ ಒಂದುವರೆ ತಿಂಗಳಿಂದ ಹಿಂದುಗಳು ಈ ಅಂಶವನ್ನು ಎತ್ತಿ ಹಿಡಿದಿದ್ದರು. ಮಸೀದಿಯ ವಿರುದ್ಧ ಸಾವಿರಾರು ಹಿಂದುಗಳು ಒಟ್ಟಾಗಿ ಸೇರಿ ಅಕ್ರಮ ಕಟ್ಟಡ ಕೆಡವಲು ಆಗ್ರಹಿಸಿದ್ದರು. ಪರಿಣಾಮವಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ, ಮಹಾಪಾಲಿಕೆ ಆಡಳಿತ ಮತ್ತು ಸಮಿತಿ ಇವರು ಬಗ್ಗಲೇ ಬೇಕಾಯಿತು. ಪ್ರಖರ ಹಿಂದುತ್ವನಿಷ್ಠ ಕಮಲ್ ಗೌತಮ್ ಇವರ ನೇತೃತ್ವದಲ್ಲಿ ಈ ಐತಿಹಾಸಿಕ ಹಿಂದೂ ಸಂಘಟಿತರಾಗಲು ಸಾಧ್ಯವಾಯಿತು. ಈ ಪ್ರಕರಣದಲ್ಲಿ ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದಲ್ಲಿ ಕೂಡ ವಿಚಾರಣೆ ನಡೆಯಲಿದೆ. ಸ್ಥಳೀಯರು ಈ ಅರ್ಜಿ ದಾಖಲಿಸಿದ್ದಾರೆ. ೧೪ ವರ್ಷಗಳಿಂದ ಮಹಾಪಾಲಿಕೆ ನ್ಯಾಯಾಲಯದಲ್ಲಿ ಇಲ್ಲಿಯವರೆಗೆ ನಿರ್ಣಯ ಆಗಿಲ್ಲ, ಎಂದು ಅವರ ಅಭಿಪ್ರಾಯವಾಗಿದೆ. ಮಸೀದಿ ಕೆಡವುವ ಬಗ್ಗೆ ಆಯುಕ್ತರ ಮಧ್ಯಂತರ ಆದೇಶ ಕೂಡ ಇದೆ. ‘ಉಚ್ಚ ನ್ಯಾಯಾಲಯವು ಮಹಾಪಾಲಿಕೆ ಆಯುಕ್ತರಿಗೆ ಬೇಗನೆ ಸಂಪೂರ್ಣ ನಿರ್ಣಯ ತೆಗೆದುಕೊಳ್ಳಬೇಕು, ಎಂದು ಹೇಳಬೇಕು’, ಎಂದು ಹಿಂದುಗಳು ಆಗ್ರಹಿಸಿದ್ದಾರೆ.

ಮಸೀದಿ ಸಮಿತಿಯ ಅಧ್ಯಕ್ಷ ಮಹಮ್ಮದ ಲತೀಫ್ ಇವರು, ಮಸೀದಿ ಕೆಡವುವ ಕಾರ್ಯ ಆರಂಭಿಸಿದ್ದು ಈ ಕಾರ್ಯಕ್ರಮಕ್ಕೆ ಸ್ಥಳೀಯ ಮುಸಲ್ಮಾನ ವ್ಯಾಪಾರಸ್ಥರಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಮಹಾನಗರ ಪಾಲಿಕೆಯ ಆದೇಶದ ನಂತರ ವಕ್ಫ್ ಬೋರ್ಡ್ ನಿಂದ ಕೂಡ ಅದರ ಅನುಮತಿ ಪಡೆಯಲಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ‘ಸಂಘೆ ಶಕ್ತಿ ಕಾಲೌ ಯುಗೇ’ಯಂತೆ ಹಿಂದುಗಳು ಸಂಘಟಿತರಾದರೆ ಮತ್ತು ಸಂಘಟನೆಯ ದಿಕ್ಕು ಯೋಗ್ಯವಾಗಿದ್ದರೆ, ಆಗ ಏನಾಗಬಹುದು ? ಇದೇ ಇದರಿಂದ ತಿಳಿದು ಬರುತ್ತದೆ.