Shimla Masjid Case : ಮಸೀದಿಯ ಮೇಲಿನ ಅಕ್ರಮವಾಗಿ ಕಟ್ಟಲಾದ 3 ಮಹಡಿಗಳನ್ನು 2 ತಿಂಗಳಿನಲ್ಲಿ ತಮ್ಮ ಖರ್ಚಿನಲ್ಲೇ ಕೆಡವಬೇಕು !

ಮಸೀದಿ ಸಮಿತಿಗೆ ಶಿಮ್ಲಾ ನ್ಯಾಯಾಲಯದ ಆದೇಶ

ಶಿಮ್ಲಾ (ಹಿಮಾಚಲ ಪ್ರದೇಶ) – ಇಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 5 ಅಂತಸ್ತಿನ ಸಂಜೌಲಿ ಮಸೀದಿಯ ಮೂರು ಮಹಡಿಗಳನ್ನು ಮುಂದಿನ 2 ತಿಂಗಳೊಳಗೆ ಕೆಡವಬೇಕು ಎಂದು ಶಿಮ್ಲಾ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 21 ರಂದು ನಡೆಯಲಿದೆ. ‘ಮಸೀದಿ ಸಮಿತಿ ಮತ್ತು ವಕ್ಫ್ ಬೋರ್ಡ್ ಮಸೀದಿಯ ಮೇಲಿನ 3 ಮಹಡಿಗಳನ್ನು ಸ್ವಂತ ವೆಚ್ಚದಲ್ಲಿ ಕೆಡವಬೇಕು’ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ. `ಕಟ್ಟಡದ ಇನ್ನುಳಿಕ ಅನಧಿಕೃತ ಭಾಗಗಳ ವಿಷಯದಲ್ಲಿ ನಂತರ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಂಜೌಲಿ ಮಸೀದಿಯ ನಿರ್ಮಾಣವು 2009 ರಲ್ಲಿ ಪ್ರಾರಂಭವಾಗಿತ್ತು. 2010ರ ವರೆಗೆ ಮಸೀದಿಯ ನಿರ್ಮಾಣದ ಬಗ್ಗೆ ತಗಾದೆ ಪ್ರಾರಂಭವಾಯಿತು. ಅಕ್ರಮ ಕಟ್ಟಡವನ್ನು ತಡೆಯಲು ಮಹಾನಗರಪಾಲಿಕೆಯು ಮಸೀದಿಗೆ ಒಟ್ಟು 38 ನೋಟಿಸ್‌ಗಳನ್ನು ನೀಡಿತ್ತು. (‘ಕ್ರಮ ಕೈಗೊಳ್ಳುವ ಬದಲು ನಗರಸಭೆಯವರು ‘ನಾವು ಏನಾದ್ರೂ ಮಾಡುತ್ತಿದ್ದೇವೆ’ ಎಂದು ತೋರಿಸಲು ಪ್ರಯತ್ನಿಸಿರುತ್ತಿರುವುದು ಇದರಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಇದನ್ನು ನ್ಯಾಯಾಲಯಕ್ಕೆ ಏಕೆ ಹೇಳಬೇಕಾಗುತ್ತದೆ ? ಸರಕಾರ ಮತ್ತು ಆಡಳಿತ ಅಕ್ರಮವಾಗಿ 3 ಮಹಡಿ ಕಟ್ಟುತ್ತಿರುವಾಗ ಏನು ಮಾಡುತ್ತಿತ್ತು ? ನ್ಯಾಯಾಲಯವು ಇದಕ್ಕೆ ಜವಾಬ್ದಾರರಾಗಿರುವ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಬೇಕು ಮತ್ತು ನಿರ್ಮಿಸಿರುವವರಿಗೆ ಶಿಕ್ಷೆ ವಿಧಿಸಬೇಕು ಎನ್ನುವುದು ಲಕ್ಷಾಂತರ ಹಿಂದೂಗಳ ಆಗ್ರಹವಾಗಿದೆ !