ಮತಾಂತರಗೊಂಡಿರುವ ಕ್ರೈಸ್ತರು ಮತ್ತು ಮುಸಲ್ಮಾನರಿಗೆ ಮೀಸಲಾತಿಯ ಲಾಭ ನೀಡಲು ಸಾಧ್ಯವಿಲ್ಲ !

ಮತಾಂತರ ಗೊಳಿಸಿ ಕ್ರೈಸ್ತ ಮತ್ತು ಮುಸಲ್ಮಾನರಾಗಿರುವ ದಲಿತರಿಗೆ ಪರಿಶಿಷ್ಟ ಜಾತಿಯ ಅನುಸೂಚಿಯಿಂದ ಹೊರಗಿಡುವುದು ಯೋಗ್ಯವಾಗಿದೆ ಎಂದು ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದೆ. ಈ ಕ್ರೈಸ್ತ ಮತ್ತು ಮುಸಲ್ಮಾನರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಿಗುವ ಲಾಭ ದೊರೆಯಬೇಕೆಂದು ಒತ್ತಾಯಿಸುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.

ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ದಾವೂದ್ ೧೩ ಕೋಟಿ ರೂಪಾಯಿ ಕಳುಹಿಸಿದ್ದ !

ಭಾರತದಲ್ಲಿ ಜಿಹಾದಿ ಭಯೋತ್ಪಾದಕ ದಾಳಿ ನಡೆಸಲು ಕುಖ್ಯಾತ ಅಂತರಾಷ್ಟ್ರೀಯ ಭಯೋತ್ಪಾದಕ ದಾವೂದ್ ಇಬ್ರಾಹಿಂ ಮತ್ತು ಅವನ ಸಹಚರ ಚೋಟಾ ಶಕೀಲ್ ಇವನು ಪಾಕಿಸ್ತಾನದಿಂದ ದುಬೈ ಮೂಲಕ ಸೂರತ್ ಮತ್ತು ಅಲ್ಲಿಂದ ಮುಂಬಯಿಯಲ್ಲಿ ಹವಾಲಾಮೂಲಕ (ಅಕ್ರಮ ಹಣದ ವರ್ಗಾವಣೆ) ೧೩ ಕೋಟಿ ರೂಪಾಯಿ ಕಳುಹಿಸಿದ್ದನು

ವಾಯು ಮಾಲಿನ್ಯದಿಂದ ನಿರಾಸೆಗೆ ಒಳಗಾಗುವ ರೋಗದಲ್ಲಿ ಏರಿಕೆ !

ಬ್ರಿಟನ್‌ನಲ್ಲಿ ಕೈಕೊಂಡ ಒಂದು ಅಧ್ಯಯನದಲ್ಲಿ ವಾಯು ಮಾಲಿನ್ಯವು ಮಾನಸಿಕ ಆರೋಗ್ಯದೊಂದಿಗೆ ನೇರವಾಗಿ ಸಂಬಂಧವಿರುವುದು ಬೆಳಕಿಗೆ ಬಂದಿದೆ. ಅಧ್ಯಯನದ ಮೂಲಕ, ಮಾಲಿನ್ಯದಿಂದ ಮಾನಸಿಕ ಸಮಸ್ಯೆ ಹೆಚ್ಚು ಉದ್ಭವಿಸಬಹುದು. ಮಾಲಿನ್ಯದಿಂದ ಮಾನಸಿಕ ರೋಗ ಬಹಳ ಗಂಭೀರವಾಗಬಹುದು.

ಚೀನಾದ ಬೇಹುಗಾರಿಕೆ ನೌಕೆಯ ಕಾರಣದಿಂದ ಭಾರತದ ‘ಅಗ್ನಿ’ ಕ್ಷಿಪಣಿಯ ಪರೀಕ್ಷಣೆ ರದ್ದು !

ಚೀನಾವು ಬೇಹುಗಾರಿಕೆ ಮಾಡುವ ತನ್ನ ‘ಯುಆನ್ ವಾಂಗ – ೬’ ಈ ನೌಕೆ ಹಿಂದೂ ಮಹಾಸಾಗರದಲ್ಲಿ ಕಳುಹಿಸಿದ್ದರಿಂದ ಭಾರತವು ಬಂಗಾಲದ ದ್ವೀಪದಲ್ಲಿ ಆಯೋಜಿಸಿರುವ ಅಗ್ನಿ ಕ್ಷಿಪಣಿಯ ಪರೀಕ್ಷಣೆ ರದ್ದುಗೊಳಿಸಿದೆ. ಬರುವ ನವಂಬರ್ ೧೦ ಮತ್ತು ೧೧ ರಂದು ಪರೀಕ್ಷಣೆ ನಡೆಯುವುದಿತ್ತು.

ಆರ್ಥಿಕ ದೃಷ್ಟಿಯಿಂದ ದುರ್ಬಲ ವರ್ಗದವರಿಗೆ ಶೇ. ೧೦ ರಷ್ಟು ಮೀಸಲಾತಿ ಮುಂದುವರಿಯಲಿದೆ

೫ ಎಕರೆಗಿಂತ ಕಡಿಮೆ ಭೂಮಿ, ೯೦೦ ಚದರ ಅಡಿಗಿಂತ ಸಣ್ಣ ಮನೆ ಮತ್ತು ೮ ಲಕ್ಷ ರೂಪಾಯಿಗಳಿಗಿಂತ ಕಡಿಮೆ ವಾರ್ಷಿಕ ಉತ್ಪನ್ನ ಇರುವವರಿಗೆ ಈ ಮೀಸಲಾತಿಯ ಲಾಭವಾಗಲಿದೆ.

‘ಜನ ಗಣ ಮನ’ ಮತ್ತು ‘ವಂದೇ ಮಾತರಂ’ ಇವುಗಳಿಗೆ ಸಮಾನ ಸ್ಥಾನ ಇರುವುದರಿಂದ ಅದನ್ನು ಗೌರವಿಸಿ ! – ಕೇಂದ್ರ ಸರಕಾರ

ರಾಷ್ಟ್ರಗೀತೆ ‘ಜನ ಗಣ ಮನ’ ಮತ್ತು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಇವೆರಡಕ್ಕೂ ಸಮಾನ ಸ್ಥಾನ ಇರುವುದರಿಂದ ದೇಶದಲ್ಲಿನ ಪ್ರತಿಯೊಬ್ಬ ನಾಗರೀಕನು ಎರಡನ್ನೂ ಗೌರವಿಸಬೇಕೆಂದು, ಕೇಂದ್ರ ಸರಕಾರ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಹೇಳಿದೆ.

ಪಾಕಿಸ್ತಾನದ ಸಿಂಧ್‌ನಲ್ಲಿ ಹಿಂದೂಗಳ ದೇವಸ್ಥಾನ ಧ್ವಂಸ

ಭಾರತದಲ್ಲಿರುವ ಬಹುಸಂಖ್ಯಾತ ಹಿಂದೂಗಳ ರಕ್ಷಣೆ ಎಲ್ಲಿ ಆಗುತ್ತಿಲ್ಲವೋ, ಅಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮುಂತಾದ ಮುಸ್ಲಿಂ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂ, ಹಾಗೆಯೇ ಅವರ ಧಾರ್ಮಿಕ ಸ್ಥಳಗಳ ರಕ್ಷಣೆಯನ್ನು ಯಾರು ಮಾಡುವರು ? ಇದು ಹಿಂದೂಗಳಿಗೆ ನಾಚಿಕೆಗೇಡು !

ಚೀನಾವು ಸೇತುವೆ ಮತ್ತು ಗ್ರಾಮಗಳಿಗೆ ಗಲ್ವಾನ ಕಣಿವೆಯಲ್ಲಿ ಹತರಾಗಿದ್ದ ಸೈನಿಕರ ಹೆಸರು ಇಟ್ಟಿದೆ !

ಚೀನಾವು ತನ್ನ ಶಿನಜಿಯಾಂಗ ಮತ್ತು ಟಿಬೇಟಗೆ ಸಂಪರ್ಕಿಸುವ ಹೆದ್ದಾರಿಯ ಮೇಲಿನ ಸೇತುವೆ ಮತ್ತು ಅಲ್ಲಿಯ ಗ್ರಾಮಗಳಿಗೆ ಎರಡು ವರ್ಷಗಳ ಹಿಂದೆ ಲಡಾಖನ ಗಲ್ವಾನ ಕಣಿವೆಯಲ್ಲಿ ಭಾರತೀಯ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಹತ್ಯೆಗೀಡಾದ ೪ ಸೈನಿಕರ ಹೆಸರನ್ನು ಇಟ್ಟಿದೆ.

‘ಕೇಂದ್ರ ಸರಕಾರವು ಮಧ್ಯಪ್ರವೇಶಿಸಿ ರಾಜಧಾನಿಯ ವಾಯು ಮಾಲಿನ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು !’ (ಅಂತೆ)

ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್

ದೆಹಲಿಯಲ್ಲಿ ವಾಯುಮಾಲಿನ್ಯದ ಹಾಹಾಕಾರ !

ಶಾಲೆಗೆ, ಸಾಧ್ಯವಾದರೆ, ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗಿನ ತರಗತಿಗಳನ್ನು ಸಹ ಆನ್‌ಲೈನ್‌ನಲ್ಲಿ ನಡೆಸಬೇಕು ಎಂದು ತಿಳಿಸಲಾಗಿದೆ. ಇದಲ್ಲದೆ, ಪ್ರಾರ್ಥನೆಗಳು, ಹೊರಾಂಗಣ ಆಟಮುಂತಾದ ಆಟಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.