ಜನರ ಜ್ಞಾಪಕಶಕ್ತಿಯ ಮೇಲೆಯೂ ಕೆಟ್ಟ ಪರಿಣಾಮ !
ನವದೆಹಲಿ – ಬ್ರಿಟನ್‌ನಲ್ಲಿ ಕೈಕೊಂಡ ಒಂದು ಅಧ್ಯಯನದಲ್ಲಿ ವಾಯು ಮಾಲಿನ್ಯವು ಮಾನಸಿಕ ಆರೋಗ್ಯದೊಂದಿಗೆ ನೇರವಾಗಿ ಸಂಬಂಧವಿರುವುದು ಬೆಳಕಿಗೆ ಬಂದಿದೆ. ಅಧ್ಯಯನದ ಮೂಲಕ, ಮಾಲಿನ್ಯದಿಂದ ಮಾನಸಿಕ ಸಮಸ್ಯೆ ಹೆಚ್ಚು ಉದ್ಭವಿಸಬಹುದು. ಮಾಲಿನ್ಯದಿಂದ ಮಾನಸಿಕ ರೋಗ ಬಹಳ ಗಂಭೀರವಾಗಬಹುದು. ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ಜನರು ನಿರಾಸೆಗೆ ಒಳಗಾಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದ ಅನೇಕ ಜನರು ಆತ್ಮಹತ್ಯೆಯನ್ನೂ ಮಾಡಿಕೊಳ್ಳುತ್ತಾರೆ. ಕಲುಷಿತ ಸ್ಥಳಗಳಲ್ಲಿರುವ ಜನರಿಗೆ ಮಾನಸಿಕ ರೋಗವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಗಾಳಿಯ ಮಾಲಿನ್ಯದಿಂದ ಬುದ್ಧಿ ಮಾಂದ್ಯತೆದಂತಹ ಅಪಾಯಕಾರಿ ರೋಗದ ಕಾರಣವೂ ಆಗಬಹುದು.
೨. ವಾಯು ಮಾಲಿನ್ಯದಿಂದ ಮಾನಸಿಕ ಸಮಸ್ಯೆಗಳಿಗೆ ಒಳಗಾಗಿರುವ ಸುಮಾರು ಶೇ. ೩೨ ರಷ್ಟು ಜನರಿಗೆ ಚಿಕಿತ್ಸೆಯ ಆವಶ್ಯಕತೆಯಿದ್ದರೆ, ಶೇ. ೧೮ ರಷ್ಟು ಜನರಿಗೆ ಕಲುಷಿತ ಗಾಳಿಯಲ್ಲಿರುವ ‘ನೈಟ್ರೋಜಿನ ಡೈ ಆಕ್ಸೈಡ’ ಸಂಪರ್ಕದಲ್ಲಿ ಬರುವುದರಿಂದ ಆಸ್ಪತ್ರೆಗೆ ಸೇರಿಸಬೇಕಾಯಿತು. ಈ ಅಧ್ಯಯನವನ್ನು ೨೦೨೧ ರಲ್ಲಿ ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ್ದರು. ಈ ಅಧ್ಯಯನದಲ್ಲಿ ೧೩ ಸಾವಿರ ಜನರು ಒಳಗೊಂಡಿದ್ದರು.
೩. ೨೦೧೯ ರ ಜಾಗತಿಕ ಅವಲೋಕನೆಯಲ್ಲಿ, ವಾಯು ಮಾಲಿನ್ಯದಿಂದ ತಮ್ಮ ಶರೀರದ ಪ್ರತಿಯೊಂದು ಅವಯವಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇದರಿಂದ ಮಾಲಿನ್ಯವನ್ನು ದೂರಗೊಳಿಸಲು ಜನರು ಎಲ್ಲ ರೀತಿಯಿಂದಲೂ ಪ್ರಯತ್ನಿಸಬೇಕು.
೪. ‘ಅಮೇರಿಕನ್ ಸೈಕಾಲಜಿಕಲ್ ಅಸೋಸಿಯೇಷನ್’ನ ವರದಿಯನ್ವಯ, ಇಲ್ಲಿಯವರೆಗೆ ಅನೇಕ ಸಂಶೋಧನೆಗಳಲ್ಲಿ, ವಾಯು ಮಾಲಿನ್ಯದಿಂದ ಜನರ ಜ್ಞಾಪಕಶಕ್ತಿ ಕುಂಠಿತಗೊಳ್ಳಬಹುದು. ಅದರ ಅತ್ಯಧಿಕ ಪರಿಣಾಮ ಚಿಕ್ಕ ಮಕ್ಕಳು ಮತ್ತು ವೃದ್ಧರ ಮೇಲೆ ಆಗುತ್ತದೆ. ಇಷ್ಟೇ ಅಲ್ಲ, ಮಾಲಿನ್ಯದಿಂದ ನಿರಾಶೆಯ ಅಪಾಯವೂ ಹೆಚ್ಚಾಗುತ್ತದೆ. ವಿಷಕಾರಿ ವಾಯು ನಮ್ಮ ಪುಫ್ಫುಸ ಮತ್ತು ಹೃದಯಕ್ಕೆ ಮಾತ್ರವಲ್ಲ, ಮೆದುಳಿಗೂ ಅಪಾಯಕಾರಿಯಾಗಬಹುದು ಎಂಬುದು ಬೆಳಕಿಗೆ ಬಂದಿದೆ.
ಸಂಪಾದಕೀಯ ನಿಲುವು೧೦೦ ವರ್ಷಗಳ ಮೊದಲು ಮಾಲಿನ್ಯ ಎಂಬ ಹೆಸರು ಅಸ್ತಿತ್ವದಲ್ಲಿಯೇ ಇರಲಿಲ್ಲ; ಆದರೆ ವಿಜ್ಞಾನದ ಮೂಲಕ ಯಾವ ರೀತಿ ಅಭಿವೃದ್ಧಿ ಹೊಂದುತ್ತಿದೆಯೋ, ಹಾಗೆಯೇ ಮಾಲಿನ್ಯದಲ್ಲಿಯೂ ಹೆಚ್ಚಳವಾಗುತ್ತಿದ್ದು, ಅದರಿಂದ ಪೃಥ್ವಿ ಮತ್ತು ಪೃಥ್ವಿಯ ಮೇಲಿನ ಎಲ್ಲ ರೀತಿಯ ಸಂಪತ್ತಿನ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತಿದೆ ಎನ್ನುವ ಸತ್ಯವನ್ನು ಎಂದು ಸ್ವೀಕರಿಸಲಾಗುವುದು ? |