ಆರ್ಥಿಕ ದೃಷ್ಟಿಯಿಂದ ದುರ್ಬಲ ವರ್ಗದವರಿಗೆ ಶೇ. ೧೦ ರಷ್ಟು ಮೀಸಲಾತಿ ಮುಂದುವರಿಯಲಿದೆ

ಸರ್ವೋಚ್ಚ ನ್ಯಾಯಾಲಯದ ೫ ನ್ಯಾಯಾಧೀಶರ ಪೀಠದ ನಿರ್ಣಯ

ನವದೆಹಲಿ– ಕೇಂದ್ರಸರಕಾರವು ೨೦೧೯ರಲ್ಲಿ ಆರ್ಥಿಕದೃಷ್ಟಿಯಿಂದ ದುರ್ಬಲ ವರ್ಗದವರಿಗೆ ಸಾಧಾರಣ ಪ್ರವರ್ಗದ ಶೇ. ೧೦ ರಷ್ಟು ಮೀಸಲಾತಿ ನೀಡುವ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ಖಾಯಂಗೊಳಿಸಿದೆ. ಈ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಲಾಗಿತ್ತು. ಈ ವಿಷಯದ ಬಗ್ಗೆ ೫ ನ್ಯಾಯಾಧೀಶರ ಪೀಠದ ಮುಂದೆ ನಡೆದ ಆಲಿಸುವಿಕೆಯ ಬಳಿಕ ನವೆಂಬರ ೭ ರಂದು ತೀರ್ಪು ನೀಡಲಾಯಿತು. ಇದರಲ್ಲಿ ೫ ರಲ್ಲಿ ೪ ನ್ಯಾಯಾಧೀಶರು ಮೀಸಲಾತಿಯ ಪರವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇಬ್ಬರು ನ್ಯಾಯಾಧೀಶರು ಮೀಸಲಾತಿಯ ವಿರುದ್ಧ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ನ್ಯಾಯಮೂರ್ತಿ ದಿನೇಶ ಮಾಹೇಶ್ವರಿ, ನ್ಯಾಯಮೂರ್ತಿ ಬೇಲಾ ತ್ರಿವೇದಿ ಹಾಗೂ ನ್ಯಾಯಮೂರ್ತಿ ಜೆಬಿ ಪಾರಡಿವಾಲಾ ಇವರು ಮೀಸಲಾತಿಯ ಪರವಾಗಿ, ನ್ಯಾಯಮೂರ್ತಿ ರವೀಂದ್ರ ಭಟ್ಟ ಮತ್ತು ಉದಯ ಲಲಿತ್ ಇವರು ವಿರುದ್ಧವಾಗಿ ತೀರ್ಪು ನೀಡಿದರು. ಕೇಂದ್ರಸರಕಾರವು ೧೦೩ನೇ ಸಂವಿಧಾನದ ತಿದ್ದುಪಡಿಯಲ್ಲಿಜನವರಿ ೨೦೧೯ ರಲ್ಲಿ ಶಿಕ್ಷಣ ಮತ್ತು ಸರಕಾರಿ ನೌಕರಿಗಳಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ವರ್ಗದವರಿಗೆ ಮೀಸಲಾತಿ ಜಾರಿಗೊಳಿಸಿತ್ತು. ತಮಿಳುನಾಡಿನ ಆಡಳಿತಾಧಿಕಾರಿ ದ್ರಾವಿಡ ಮುನ್ನೇತ್ರ ಕಳಗಂ(ದ್ರವಿಡ ಪ್ರಗತಿ ಸಂಘ) ಪಕ್ಷ ಸಹಿತ ಇತರೆ ೩೦ ಕ್ಕಿಂತ ಅಧಿಕ ದೂರುದಾರರು ಸರ್ವೋಚ್ಚ ನ್ಯಾಯಾಲಯದಲ್ಲಿ ಈ ನಿರ್ಣಯದ ವಿರುದ್ಧ ದೂರನ್ನು ದಾಖಲಿಸಿದ್ದರು. ಈ ಪ್ರಕರಣದ ಮೇಲೆ ನ್ಯಾಯಪೀಠವು ಸಪ್ಟೆಂಬರ ೨೭ ರಂದು ತೀರ್ಪು ಕಾಯ್ದಿರಿಸಿತ್ತು.

೧. ಈ ದೂರಿನಲ್ಲಿ ಸಂವಿಧಾನದ ಕಲಂ ೧೫ ಮತ್ತು ೧೬ರಲ್ಲಿ ಬದಲಾವಣೆಗೆ ಕೋರಲಾಗಿತ್ತು. ‘ಆರ್ಥಿಕ ಆಧಾರದ ಮೇಲೆ ಮೀಸಲಾತಿ ಇದು ಸಂವಿಧಾನಬಾಹಿರವಾಗಿದೆ. ಸರಕಾರವು ಆವಶ್ಯಕ ಮಾಹಿತಿಯನ್ನು ಸಂಗ್ರಹಿಸದೇ ಮೀಸಲಾತಿಯ ಕಾನೂನು ರಚಿಸಿತು. ಸರ್ವೋಚ್ಚ ನ್ಯಾಯಾಲಯವು ಮೀಸಲಾತಿಯನ್ನು ಶೇ. ೫೦ರ ವರೆಗೆ ಸೀಮಿತಗೊಳಿಸುವ ನಿರ್ಣಯವನ್ನು ನೀಡಿತ್ತು. ಈ ನಿಯಮದ ಉಲ್ಲಂಘನೆಯಾಗಿದೆಯೆಂದು’ ಅವರು ಇದರಲ್ಲಿ ಹೇಳಲಾಗಿತ್ತು.

೨.ಇದರ ಮೇಲೆ ಪ್ರತಿವಾದ ಮಂಡಿಸುವಾಗ ಕೇಂದ್ರಸರಕಾರವು ನ್ಯಾಯಾಲಯದಲ್ಲಿ, ಒಟ್ಟು ಮೀಸಲಾತಿ ಶೇ. ೫೦ ರಷ್ಟು ಸೀಮಿತಗೊಳಿಸಿರುವುದು, ಸಂವಿಧಾನಾತ್ಮಕ ಏರ್ಪಾಡಲ್ಲ, ಅದು ಕೇವಲ ಸರ್ವೋಚ್ಚ ನ್ಯಾಯಾಲಯದ ನಿರ್ಣಯವಾಗಿದೆ. ತಮಿಳುನಾಡಿನಲ್ಲಿ ಶೇ. ೬೮ ರಷ್ಟು ಮೀಸಲಾತಿಯಿದೆ. ಇದಕ್ಕೆ ಉಚ್ಚ ನ್ಯಾಯಾಲಯವು ಒಪ್ಪಿಗೆಯನ್ನು ನೀಡಿದೆ. ಸರ್ವೋಚ್ಚ ನ್ಯಾಯಾಲಯವೂ ಸ್ಥಗಿತದ ಆದೇಶವನ್ನು ನೀಡಿಲ್ಲ. ಮೀಸಲಾತಿಯ ಕಾನೂನು ರಚಿಸುವ ಮೊದಲು ಸಂವಿಧಾನದ ಕಲಂ ೧೫ ಮತ್ತು ೧೬ ರಲ್ಲಿ ಆವಶ್ಯಕ ಬದಲಾವಣೆಗಳನ್ನು ಮಾಡಲಾಗಿತ್ತು. ಆರ್ಥಿಕದೃಷ್ಟಿಯಿಂದ ದುರ್ಬಲರಾಗಿರುವ ಪಂಗಡದವರಿಗೆ ಸಮಾನತೆಯ ದರ್ಜೆಯನ್ನು ನೀಡಲು ಈ ವ್ಯವಸ್ಥೆ ಆವಶ್ಯಕವಿದೆ. ಸರಕಾರವು ಮೀಸಲಾತಿಯ ಶೇ. ೫೦ ರಷ್ಟು ಮಿತಿಯನ್ನು ದಾಟಿಲ್ಲ. ೧೯೯೨ ರಲ್ಲಿ ಸರ್ವೋಚ್ಚ ನ್ಯಾಯಾಲಯವೇ ಶೇ.೫೦ಕ್ಕಿಂತ ಅಧಿಕ ಮೀಸಲಾತಿ ನೀಡಬಾರದು’ ಎಂದು ತೀರ್ಪು ನೀಡಿತ್ತು. ಒಟ್ಟಾರೆ ಇನ್ನುಳಿದ ಶೇ. ೫೦ ರಷ್ಟು ಸ್ಥಾನ ಸಾಮಾನ್ಯ ವರ್ಗದ ಜನರಿಗೆ ಮೀಸಲಿಡಲಾಗಿತ್ತು. ಈ ಮೀಸಲಾತಿ ಕೇವಲ ಶೇ. ೫೦ ರಲ್ಲಿ ಬರುವ ಸಾಮಾನ್ಯ ವರ್ಗದ ಜನರಿಗಾಗಿ ಇದೆ. ಸಾಮಾಜಿಕ ಭೇದಭಾವ ದೂರಗೊಳಿಸಲು ಮೀಸಲಾತಿಯ ಪರ್ಯಾಯ ವ್ಯವಸ್ಥೆ ಒದಗಿಸಿ ಕೊಡಲಾಗಿದೆ. ಬಡತನವನ್ನು ದೂರಗೊಳಿಸುವ ದೃಷ್ಟಿಯಿಂದ ಮೀಸಲಾತಿ ನೀಡಲಾಗಿರಲಿಲ್ಲ ಎಂದು ಹೇಳಿದೆ.

ನ್ಯಾಯಾಧೀಶರು ಏನು ಹೇಳಿದರು?

೧.ನ್ಯಾಯಮೂರ್ತಿ ಬೇಲಾ ತ್ರಿವೇದಿ: ಸಂಸತ್ತಿನ ನಿರ್ಣಯವನ್ನು ಸಕಾರಾತ್ಮಕವಾಗಿ ನೋಡಬೇಕು. ಸಂವಿಧಾನದಲ್ಲಿ ಸಮಾನತೆಯ ಅಧಿಕಾರ ನೀಡಲಾಗಿದೆ. ಈ ನಿರ್ಣಯವನ್ನು ಆ ದೃಷ್ಟಿಯಿಂದ ನೋಡಿರಿ. ೧೦೩ನೇ ಸಂವಿಧಾನದ ತಿದ್ದುಪಡಿ ಸಮರ್ಪಕವಾಗಿದೆ. ಸ್ವಾತಂತ್ರ್ಯ ಪಡೆದು ೭೫ ವರ್ಷಗಳು ಪೂರ್ಣಗೊಳ್ಳುತ್ತಿರುವಾಗ ನಾವು ಸಮಾಜದ ಹಿತವನ್ನು ಗಮನಕ್ಕೆ ತೆಗೆದುಕೊಂಡು ನಮ್ಮ ಮೀಸಲಾತಿ ಪದ್ಧತಿಯ ಬಗ್ಗೆ ಪುನಃ ಹೊಸದಾಗಿ ವಿಚಾರ ಮಾಡಬೇಕಾಗಿದೆ.

೨.ನ್ಯಾಯಮೂರ್ತಿ ಪಾದರಿವಾಲಾ: ಅನಿಗದಿತ ಕಾಲಾವಧಿಗಾಗಿ ಮೀಸಲಾತಿ ಮುಂದುವರಿಸಬಾರದು. ಹೀಗೆ ಮಾಡಿದರೆ ಅದು ಎಲ್ಲ ರೀತಿಯಿಂದಲೂ ಸ್ವಾರ್ಥದ ಉದ್ದೇಶದಿಂದ ಉಪಯೋಗಿಸಲ್ಪಡುವುದು.

೩.ನ್ಯಾಯಮೂರ್ತಿ ದಿನೇಶ ಮಾಹೇಶ್ವರಿ: ಆರ್ಥಿಕದೃಷ್ಟಿಯಿಂದ ದುರ್ಬಲ ವರ್ಗದವರಿಗೆ ಮೀಸಲಾತಿಯಿ ಮೂಲಭೂತ ಅಧಿಕಾರದ ಉಲ್ಲಂಘನೆಯಲ್ಲ.

೪.ನ್ಯಾಯಮೂರ್ತಿ ರವೀಂದರ ಭಟ್ಟ: ಎಲ್ಲ ವರ್ಗದವರಿಗೆ ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿಯನ್ನು ನೀಡಬೇಕು. ಸರಕಾರದ ನಿರ್ಣಯದಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡದವರನ್ನು ಸೇರಿಸಲಾಗಿಲ್ಲ. ನಾನು ಈ ಮೀಸಲಾತಿಯನ್ನು ಒಪ್ಪುವುದಿಲ್ಲ.

ಮೀಸಲಾತಿಯಿಂದ ಯಾರಿಗೆ ಲಾಭವಾಗಲಿದೆ?

೫ ಎಕರೆಗಿಂತ ಕಡಿಮೆ ಭೂಮಿ, ೯೦೦ ಚದರ ಅಡಿಗಿಂತ ಸಣ್ಣ ಮನೆ ಮತ್ತು ೮ ಲಕ್ಷ ರೂಪಾಯಿಗಳಿಗಿಂತ ಕಡಿಮೆ ವಾರ್ಷಿಕ ಉತ್ಪನ್ನ ಇರುವವರಿಗೆ ಈ ಮೀಸಲಾತಿಯ ಲಾಭವಾಗಲಿದೆ.