ಪಾಕಿಸ್ತಾನದ ಸಿಂಧ್‌ನಲ್ಲಿ ಹಿಂದೂಗಳ ದೇವಸ್ಥಾನ ಧ್ವಂಸ

ಸಾಂದರ್ಭಿಕ ಛಾಯಾಚಿತ್ರ

ನವ ದೆಹಲಿ – ಪಾಕಿಸ್ತಾನದ ಸಿಂಧನಲ್ಲಿರುವ ತಲಾಹಿ ಹತ್ತಿರದ ಗ್ರಾಮದಲ್ಲಿದ್ದ ಹಿಂದೂ ಮಂದಿರ ರಾಮಾಪೀರವನ್ನು ಜೆಸಿಬಿ ಯಂತ್ರದ ಮೂಲಕ ಕೆಡವಲಾಯಿತು. ಈ ಘಟನೆಯ ವಿಡಿಯೋ ಪಾಕಿಸ್ತಾನದಲ್ಲಿರುವ ‘ಹಿಂದೂ ಆರ್ಗನೈಸೇಶನ್ ಆಫ್ ಸಿಂಧ’ಈ ಸಂಘಟನೆಯ ಸಂಸ್ಥಾಪಕ-ಅಧ್ಯಕ್ಷ ನರೇನ ದಾಸ ಭೀಲ ಇವರು ತಮ್ಮ ಟ್ವಿಟರ ಖಾತೆಯಿಂದ ಪ್ರಸಾರ ಮಾಡಿದ್ದಾರೆ. ಅವರು, ಹಿಂದೂಗಳನ್ನು ಒಂದು ದಿನವೂ ಶಾಂತಿಯಿಂದ ಇರಲು ಬಿಡುವುದಿಲ್ಲ. ಬಲವಂತವಾಗಿ ಮತಾಂತರಕ್ಕಾಗಿ ಗುರಿ ಮಾಡಿ ಕೊಲ್ಲಲಾಗುತ್ತಿದೆ. ಅಪಹರಣ ಮತ್ತು ಇತರೆ ಅನೇಕ ಸಮಸ್ಯೆಗಳೂ ಇದೆ ಎಂದು ಅವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿರುವ ಬಹುಸಂಖ್ಯಾತ ಹಿಂದೂಗಳ ರಕ್ಷಣೆ ಎಲ್ಲಿ ಆಗುತ್ತಿಲ್ಲವೋ, ಅಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮುಂತಾದ ಮುಸ್ಲಿಂ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂ, ಹಾಗೆಯೇ ಅವರ ಧಾರ್ಮಿಕ ಸ್ಥಳಗಳ ರಕ್ಷಣೆಯನ್ನು ಯಾರು ಮಾಡುವರು ? ಇದು ಹಿಂದೂಗಳಿಗೆ ನಾಚಿಕೆಗೇಡು !