ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ದಾವೂದ್ ೧೩ ಕೋಟಿ ರೂಪಾಯಿ ಕಳುಹಿಸಿದ್ದ !

ನವ ದೆಹಲಿ – ಭಾರತದಲ್ಲಿ ಜಿಹಾದಿ ಭಯೋತ್ಪಾದಕ ದಾಳಿ ನಡೆಸಲು ಕುಖ್ಯಾತ ಅಂತರಾಷ್ಟ್ರೀಯ ಭಯೋತ್ಪಾದಕ ದಾವೂದ್ ಇಬ್ರಾಹಿಂ ಮತ್ತು ಅವನ ಸಹಚರ ಚೋಟಾ ಶಕೀಲ್ ಇವನು ಪಾಕಿಸ್ತಾನದಿಂದ ದುಬೈ ಮೂಲಕ ಸೂರತ್ ಮತ್ತು ಅಲ್ಲಿಂದ ಮುಂಬಯಿಯಲ್ಲಿ ಹವಾಲಾಮೂಲಕ (ಅಕ್ರಮ ಹಣದ ವರ್ಗಾವಣೆ) ೧೩ ಕೋಟಿ ರೂಪಾಯಿ ಕಳುಹಿಸಿದ್ದನು ಎಂದು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.’) ದಾಖಲಿಸಿರುವ ಆರೋಪ ಪತ್ರದಲ್ಲಿ ತಿಳಿಸಿದೆ. ಕಳೆದ ೪ ವರ್ಷಗಳಲ್ಲಿ ಈ ಹಣ ಕಳುಹಿಸಲಾಗಿದೆ. ಮುಂಬಯಿಯಲ್ಲಿನ ಆರೀಫ್ ಶೇಖ ಮತ್ತು ಶಬ್ಬೀರ್ ಶೇಖ ಇವರಿಗೆ ಇತ್ತಿಚೆಗೆ ೨೫ ಲಕ್ಷ ರೂಪಾಯ ಕಳುಹಿಸಿದ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಯಿತು. ರಷಿದ್ ಮರಫಾನಿ ಅಲಿಯಾಸ್ ರಾಷಿದ ಭಾಯಿ ದುಬೈನಿಂದ ಹಣ ಕಳುಹಿಸುವ ಕೆಲಸ ಮಾಡುತ್ತಿದ್ದನು.

ಎನ್.ಐ.ಎ.ಯ ಆರೋಪ ಪತ್ರದಲ್ಲಿ, ದಾವೂದ್ ನ ಗುರಿ ಭಾರತದಲ್ಲಿನ ದೊಡ್ಡ ರಾಜಕೀಯ ಮುಖಂಡರು ಮತ್ತು ಕೆಲವು ಹೆಸರಾಂತ ಜನರ ಸಮಾವೇಶವಿದೆ. ಆತ ಬೇರೆ ಬೇರೆ ನಗರಗಳಲ್ಲಿ ಗಲಭೆ ನಡೆಸುವುದಕ್ಕಾಗಿ ಸಹ ಹಣ ಕಳುಹಿಸಿದ್ದನು. ಇದರಲ್ಲಿ ನವದೆಹಲಿ ಮತ್ತು ಮುಂಬಯಿಯ ಸಮಾವೇಶವಿದೆ.

ಸಂಪಾದಕೀಯ ನಿಲುವು

ದಾವೂದ್ ಈಗಲೂ ಕೂಡ ಪಾಕಿಸ್ತಾನದಲ್ಲಿ ಕುಳಿತು ಭಾರತದಲ್ಲಿ ಚಟುವಟಿಕೆ ನಡೆಸುವ ಶಕ್ತಿ ಹೊಂದಿದ್ದಾನೆ ಎಂದರೆ ಭಾರತೀಯ ಸುರಕ್ಷಾ ವ್ಯವಸ್ಥೆಗೆ ಲಜ್ಜಾಸ್ಪದವಾಗಿದೆ !

ಇಲ್ಲಿಯವರೆಗೆ ದಾವುದನನ್ನು ಭಾರತಕ್ಕೆ ಕರೆತರಲು ಸಾಧ್ಯವಾಗಿಲ್ಲ ಮತ್ತು ಅವನಿಗೆ ಶಿಕ್ಷೆ ನೀಡಲು ಸಾಧ್ಯವಾಗದೇ ಇರುವುದು ಕೂಡ ಭಾರತಕ್ಕೆ ಲಜ್ಜಾಸ್ಪದವಾಗಿದೆ !