ದೆಹಲಿಯಲ್ಲಿ ವಾಯುಮಾಲಿನ್ಯದ ಹಾಹಾಕಾರ !

  • ಶಾಲೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲು ಆದೇಶ

  • ಡೀಸೆಲ್ ಚಾಲಿತ ವಾಹನಗಳಿಗೆ ನಿಷೇಧ

  • ಉಸಿರಾಟದ ತೊಂದರೆ ಇರುವ ರೋಗಿಗಳಲ್ಲಿ ಹೆಚ್ಚಳ

ನವದೆಹಲಿ – ದೇಶದ ರಾಜಧಾನಿ ಪ್ರದೇಶದಲ್ಲಿ ಹವಾಮಾನದ ಗುಣಮಟ್ಟವು ನಿರಂತರವಾಗಿ ಕುಸಿಯುತ್ತಿದೆ. ಪ್ರಸ್ತುತ, ರಾಜಧಾನಿ ಪ್ರದೇಶದ ನೋಯ್ಡಾದಲ್ಲಿ ‘ವಾಯು ಗುಣಮಟ್ಟ ಸೂಚ್ಯಂಕ’ ೫೬೨ (ತೀವ್ರ ವರ್ಗ), ಗುರುಗ್ರಾಮದಲ್ಲಿ ಇದು ೫೩೯ (ತೀವ್ರ ವರ್ಗ) ಆಗಿದೆ. ದೆಹಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಸಂಖ್ಯೆ ೫೬೩ ಕ್ಕಿಂತ ಹೆಚ್ಚಾಗಿದೆ. ದೆಹಲಿಯ ಒಟ್ಟು ‘ವಾಯು ಗುಣಮಟ್ಟ ಸೂಚ್ಯಂಕ’ ಸಹ ಪ್ರಸ್ತುತ ೪೭೨ ಕ್ಕಿಂತ ಹೆಚ್ಚಾಗಿದೆ. ಅಂದರೆ ಗಂಭೀರ ಶ್ರೇಣಿಯಲ್ಲಿದೆ.

೧. ಗೌತಮ್ ಬುದ್ಧ ನಗರ ಜಿಲ್ಲಾ ಶಾಲಾ ನಿರೀಕ್ಷಕ ಧರ್ಮವೀರ್ ಸಿಂಗ್ ಅವರ ಆದೇಶದ ಪ್ರಕಾರ, ಜಿಲ್ಲೆಯಲ್ಲಿ ೧ ರಿಂದ ೮ ನೇ ತರಗತಿಯವರೆಗೆ ತರಗತಿಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುವುದು. ಈ ವ್ಯವಸ್ಥೆ ನವೆಂಬರ್ ೮ ರವರೆಗೆ ಕಡ್ಡಾಯವಾಗಿ ಜಾರಿಯಲ್ಲಿರುತ್ತದೆ.

೨. ಶಾಲೆಗೆ, ಸಾಧ್ಯವಾದರೆ, ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗಿನ ತರಗತಿಗಳನ್ನು ಸಹ ಆನ್‌ಲೈನ್‌ನಲ್ಲಿ ನಡೆಸಬೇಕು ಎಂದು ತಿಳಿಸಲಾಗಿದೆ. ಇದಲ್ಲದೆ, ಪ್ರಾರ್ಥನೆಗಳು, ಹೊರಾಂಗಣ ಆಟಮುಂತಾದ ಆಟಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

೩. ಶ್ರೇಣಿಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ ಅಡಿಯಲ್ಲಿ, ಡೀಸೆಲ್‌ನಿಂದ ಚಲಿಸುವ ವಾಹನಗಳನ್ನು ನಿಷೇಧಿಸಲಾಗಿದೆ ಮತ್ತು ಟ್ರಕ್ಕುಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

೪. ಮತ್ತೊಂದೆಡೆ, ದೂಷಿತ ವಾಯುವಿನಿಂದ, ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ