ನವ ದೆಹಲಿ – ಚೀನಾವು ಬೇಹುಗಾರಿಕೆ ಮಾಡುವ ತನ್ನ ‘ಯುಆನ್ ವಾಂಗ – ೬’ ಈ ನೌಕೆ ಹಿಂದೂ ಮಹಾಸಾಗರದಲ್ಲಿ ಕಳುಹಿಸಿದ್ದರಿಂದ ಭಾರತವು ಬಂಗಾಲದ ದ್ವೀಪದಲ್ಲಿ ಆಯೋಜಿಸಿರುವ ಅಗ್ನಿ ಕ್ಷಿಪಣಿಯ ಪರೀಕ್ಷಣೆ ರದ್ದುಗೊಳಿಸಿದೆ. ಬರುವ ನವಂಬರ್ ೧೦ ಮತ್ತು ೧೧ ರಂದು ಪರೀಕ್ಷಣೆ ನಡೆಯುವುದಿತ್ತು. ಸರಿಯಾಗಿ ಅದಕ್ಕೆ ಮೊದಲೇ ಚೀನಾ ಇಂಡೋನೇಷಿಯಾದ ಹತ್ತಿರದ ಸಮುದ್ರದಲ್ಲಿರುವ ಈ ನೌಕೆ ಹಿಂದೂ ಮಹಾಸಾಗರಕ್ಕೆ ಕಳುಹಿಸಿತು. ಈ ನೌಕೆಯ ಮೂಲಕ ಭಾರತೀಯ ಕ್ಷಿಪಣಿಯ ವಿಷಯವಾಗಿ ಮಾಹಿತಿ ಕಲೆ ಹಾಕುವುದು ಸಾಧ್ಯತೆ ಇರುವುದರಿಂದ ಪರೀಕ್ಷಣೆ ರದ್ದುಗೊಳಿಸಲಾಯಿತು. ಇದರ ಜೊತೆಗೆ ಈ ಪರೀಕ್ಷಣೆಯ ಸಂಬಂಧಿತ ಪ್ರಸಾರಿತಗೊಳಿಸಲಾದ ಸೂಚನೆ ಕೂಡ ರದ್ದುಪಡಿಸಲಾಗಿದೆ.
चीन के जासूसी जहाज का खतरा, भारत ने टाला अग्नि मिसाइल का परीक्षण, हिंद महासागर में यूं बड़ा सिरदर्द बना ड्रैगन https://t.co/NHjegozAej via @NavbharatTimes
— Shailesh Shukla (@ShaileshShuklaa) November 8, 2022
‘ಯುಆನ್ ವಾಂಗ – ೬’ ನೌಕೆಯಲ್ಲಿ ಆಂಟೇನ, ಅತ್ಯಾಧುನಿಕ ನಿರೀಕ್ಷಣೆ ನಡೆಸುವ ಉಪಕರಣಗಳು ಮತ್ತು ‘ಸೆನ್ಸರ್’ ಅಳವಡಿಸಲಾಗಿದೆ. ಈ ನೌಕೆಯಲ್ಲಿ ಎಲೆಕ್ಟ್ರಾನಿಕ್ ಬೇಹುಗಾರಿಕೆ ನಡೆಸುವ, ಉಪಗ್ರಹ ಪ್ರಕ್ಷೇಪಣದ ಮೇಲೆ ನಿಗಾ ವಹಿಸುವ ಹಾಗೂ ಹೆಚ್ಚು ಅಂತರದ ಕ್ಷಿಪಣಿಯ ಕಕ್ಷೆಯ ಮಾರ್ಗ ಗುರುತಿಸುವ ಕ್ಷಮತೆ ಇದೆ. ಈ ನೌಕೆಯಲ್ಲಿ ಚೀನಾದ ೪೦೦ ಸದಸ್ಯರು ಕಾರ್ಯನಿರತವಾಗಿದ್ದಾರೆ.
ಸಂಪಾದಕೀಯ ನಿಲುವುಚೀನಾದ ಈ ವರ್ತನೆಯಿಂದ ಭಾರತಕ್ಕೆ ಹಿಂದೆ ಸರಿಯಬೇಕಾಯಿತು. ಇದರ ಬಗ್ಗೆ ಭಾರತ ಸೇಡು ತೀರಿಸಿಕೊಳ್ಳುವುದು ಅವಶ್ಯಕವಾಗಿದೆ, ಇಲ್ಲದಿದ್ದರೆ ಚೀನಾ ಭಾರತಕ್ಕೆ ಈ ರೀತಿಯಾಗಿ ಅಡ್ಡ ಬರುತ್ತಲೇ ಇರುತ್ತದೆ ಮತ್ತು ಭಾರತ ಹಿಂದೆ ಸರಿಯಬೇಕಾಗಬಹುದು ! |