ಕರಾಚಿ (ಪಾಕಿಸ್ತಾನ)ಯಲ್ಲಿ ಶ್ರೀ ಗಣಪತಿ ದೇವಾಲಯದ ಧ್ವಂಸದ ವಿರುದ್ಧ ಹಿಂದೂಗಳ ಪ್ರತಿಭಟನೆ !
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕೆಲವು ದಿನಗಳ ಹಿಂದೆ ಶ್ರೀ ಗಣಪತಿ ದೇವಸ್ಥಾನವನ್ನು ಧ್ವಂಸ ಮಾಡಿರುವುದನ್ನು ವಿರೋಧಿಸಿ ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುತ್ತಿದ್ದ ಅಲ್ಪಸಂಖ್ಯಾತ ಹಿಂದೂಗಳು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ, ಅವರು ‘ಜೈ ಶ್ರೀರಾಮ್’ ಮತ್ತು ‘ಹರ್ ಹರ್ ಮಹದೇವ್’ ಘೋಷಣೆಯನ್ನೂ ಕೂಗಿದರು.