ತಮ್ಮದೇ ಆದ 'ಸ್ಪೇಸ್‌ಎಕ್ಸ್' ಸಂಸ್ಥೆಯ ಯಶಸ್ವಿ 'ಐಪಿಒ' ನಿಂದ ಈ ಮೈಲಿಗಲ್ಲು ಸಾಧನೆ
(ಐಪಿಒ ಎಂದರೆ ಇನಿಶಿಯಲ್ ಪಬ್ಲಿಕ್ ಆಫರಿಂಗ್, ಅಂದರೆ ಯಾವುದೇ ಖಾಸಗಿ ಸಂಸ್ಥೆಯು ಮೊದಲ ಬಾರಿಗೆ ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಬಂಡವಾಳವನ್ನು ಸಂಗ್ರಹಿಸುವ ಪ್ರಕ್ರಿಯೆ.)
(ಟ್ರಿಲಿಯನೇರ್ ಎಂದರೆ ೧,೦೦೦ ಬಿಲಿಯನ್ ಅಂದರೆ ೧ ಸಾವಿರ ಅಬ್ಜ ಅಮೆರಿಕನ್ ಡಾಲರ್ ಹೊಂದಿರುವ ವ್ಯಕ್ತಿ.)

ನ್ಯೂಯಾರ್ಕ್ (ಅಮೆರಿಕ) – ‘ಸ್ಪೇಸ್‌ಎಕ್ಸ್’ ಸಂಸ್ಥೆಯ ಅತ್ಯಂತ ಯಶಸ್ವಿ ಇನಿಶಿಯಲ್ ಪಬ್ಲಿಕ್ ಆಫರಿಂಗ್ ನಿಂದಾಗಿ ಅದರ ಮಾಲೀಕ ಇಲಾನ್ ಮಸ್ಕ್ ಅವರ ವ್ಯಾಪಾರ ಸಾಮ್ರಾಜ್ಯದ ಮೌಲ್ಯವು ೧ ಟ್ರಿಲಿಯನ್ ಅಮೆರಿಕನ್ ಡಾಲರ್, ಅಂದರೆ ಸುಮಾರು ೯೫ ಲಕ್ಷ ಕೋಟಿ ರೂಪಾಯಿಗಳಾಗಿದೆ. ಇದರಿಂದಾಗಿ ಅವರು ವಿಶ್ವದ ಮೊದಲ ಟ್ರಿಲಿಯನೇರ್ ಆಗಿದ್ದಾರೆ. ೧,೦೦೦ ಬಿಲಿಯನೇರ್‌ಗಳು (೧ ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಹೊಂದಿರುವ ೧ ಸಾವಿರ ಜನರು) ಸೇರಿದರೆ ಒಬ್ಬ ಟ್ರಿಲಿಯನೇರ್ ಆಗುತ್ತಾರೆ.
ಜೂನ್ ೧೧ ರಂದು ೭೫ ಬಿಲಿಯನ್ ಡಾಲರ್ ಸಂಗ್ರಹಿಸಿದ ಈ ದಾಖಲೆಯ ಷೇರು ಮಾರಾಟದಿಂದಾಗಿ ಸ್ಪೇಸ್‌ಎಕ್ಸ್ ನ ಮೌಲ್ಯವು ಗಗನಕ್ಕೇರಿತು. ಈ ಸಂಸ್ಥೆಯು ಖಾಸಗಿ ರಾಕೆಟ್‌ಗಳು ಮತ್ತು ಸ್ಯಾಟಲೈಟ್ (ಉಪಗ್ರಹ) ಗಳನ್ನು ತಯಾರಿಸುತ್ತದೆ. ಸಂಸ್ಥೆಯ ಷೇರುಗಳ ನಿಜವಾದ ಖರೀದಿ ಮತ್ತು ಮಾರಾಟವು ಪ್ರಾರಂಭವಾದ ನಂತರ, ಮಸ್ಕ್ ಅವರ ಒಟ್ಟು ಸಂಪತ್ತು ೧.೧ ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚಾಗುವ ಸಾಧ್ಯತೆಯಿದೆ. ಐಪಿಒ ಗಿಂತ ಮೊದಲು ಮಸ್ಕ್ ಅವರ ಒಟ್ಟು ಆಸ್ತಿ ೭೮೦ ಬಿಲಿಯನ್ ಡಾಲರ್ ಆಗಿತ್ತು. ಅವರ ನಂತರದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಅಲ್ಫಾಬೆಟ್ ನ ಸಹ-ಸಂಸ್ಥಾಪಕ ಲ್ಯಾರಿ ಪೇಜ್ ಅವರ ಸಂಪತ್ತು ಸುಮಾರು ೩೦೦ ಬಿಲಿಯನ್ ಡಾಲರ್ ಆಗಿದೆ. ಇದರರ್ಥ ಮಸ್ಕ್ ಅವರು ಪೇಜ್ ಅವರಿಗಿಂತ ಮೂರು ಪಟ್ಟು ಹೆಚ್ಚು ಶ್ರೀಮಂತರಾಗಿದ್ದಾರೆ.
ಅಮೆರಿಕವು ಇರಾನ್ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ ಅಂತೆ!
ಶೀಘ್ರದಲ್ಲೇ ಶಾಂತಿ ಒಪ್ಪಂದ: ಇರಾನ್ ಯುದ್ಧ ಅಂತ್ಯ! – ಟ್ರಂಪ್ ಹೇಳಿಕೆ
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ಬ್ರಿಟನ್ : ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪಾಕಿಸ್ತಾನಿ ಪ್ರಜೆ ಶೇರಾಜ್ ಮಲಿಕ್ಗೆ 10 ವರ್ಷಗಳ ಜೈಲು ಶಿಕ್ಷೆ!
ಗ್ರಾಹಕರಿಗೆ ಪ್ರತಿದಿನ ಗರಿಷ್ಠ 200 ಲೀಟರ್ ಡೀಸೆಲ್ ಸಿಗಲಿದೆ !
ರಾವಲಕೋಟ್ (ಪಾಕ್ ಆಕ್ರಮಿತ ಕಾಶ್ಮೀರ) : ಪಾಕ್ ಸೇನೆಯು ಮತ್ತೆ 16 ನಾಗರಿಕರನ್ನು ಕೊಂದಿದೆ !