1 ವಿಷಯಕ್ಕೆ 6 ಸಾವಿರ ರೂಪಾಯಿ ನೀಡಿದರೆ ಪದವಿ ತೇರ್ಗಡೆ ಪ್ರಮಾಣಪತ್ರ ಲಭ್ಯ !

ಬಳ್ಳಾರಿ – ಇಲ್ಲಿನ ಪ್ರತಿಷ್ಠಿತ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಹಣ ಪಡೆದು ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವ ದೊಡ್ಡ ದಂಧೆ (ರಾಕೆಟ್) ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಈ ‘ಪಾಸ್ ಮಾಡುವ ಧಂಧೆ’ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಒಂದು ವಿಷಯಕ್ಕೆ 6 ಸಾವಿರ ರೂಪಾಯಿ ವಸೂಲಿ ಮಾಡಿ ಅವರನ್ನು ಅಕ್ರಮವಾಗಿ ತೇರ್ಗಡೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ‘ಯುನಿವರ್ಸಿಟಿ ಕಂಪ್ಯೂಟರ್ ಮೇಂಟೆನೆನ್ಸ್ ಸೆಲ್’ (ಯು.ಸಿ.ಎಂ.ಸಿ.) ಈ ವಿಭಾಗದ ಉದ್ಯೋಗಿಗಳೇ ಈ ‘ರಾಕೆಟ್’ನ ಮುಖ್ಯ ಸೂತ್ರಧಾರರಾಗಿದ್ದಾರೆ. ಈ ವಿಭಾಗದ ರಿಯಾಜ್ ಮತ್ತು ವೆಂಕಟೇಶ್ ಎಂಬ ಉದ್ಯೋಗಿಗಳು ವಿದ್ಯಾರ್ಥಿಗಳೊಂದಿಗೆ ಹಣದ ವ್ಯವಹಾರದ ಕುರಿತು ನಡೆಸಿದ ಸಂಭಾಷಣೆಯ ಧ್ವನಿಮುದ್ರಣ (ಆಡಿಯೋ ಕ್ಲಿಪ್) ಬಹಿರಂಗವಾಗಿದೆ.
🚨 Ballari, Karnataka: Degree Certificates Sold for Cash!
A pass certificate for ₹6,000 per subject? Serious corruption allegations have emerged against staff at Sri Krishnadevaraya University.
✊ ABVP activists staged protests on campus demanding accountability and strict… pic.twitter.com/YsJ8qXfMoE
— Sanatan Prabhat (@SanatanPrabhat) June 13, 2026
ಎಬಿವಿಪಿಯಿಂದ ಪ್ರತಿಭಟನೆ!
ವಿಶ್ವವಿದ್ಯಾಲಯದ ಈ ಭ್ರಷ್ಟಾಚಾರವನ್ನು ಖಂಡಿಸಿ ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ (ಎಬಿವಿಪಿ) ಸಂಘಟನೆಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!