ತೆಲಂಗಾಣ ಹೈಕೋರ್ಟ್ ಮಹಿಳೆಯೊಬ್ಬರ ವಿಚ್ಛೇದನ ಅರ್ಜಿಯನ್ನು ಸ್ವೀಕರಿಸುವಾಗ ನೀಡಿದ ಪ್ರಮುಖ ವೀಕ್ಷಣೆ

ಭಾಗ್ಯನಗರ (ತೆಲಂಗಾಣ) – ರಾಜ್ಯದ ವಿಚ್ಛೇದನ ಪ್ರಕರಣವೊಂದರಲ್ಲಿ ತೆಲಂಗಾಣ ಹೈಕೋರ್ಟ್ ಮಹತ್ವದ ವೀಕ್ಷಣೆಯನ್ನು ಮಾಡಿದೆ. ಪತಿಯು ವಯಸ್ಸಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿದ್ದರಿಂದ, ಪತ್ನಿಯು ವಯಸ್ಸಿನ ಹೊಂದಾಣಿಕೆ ಮತ್ತು ಜ್ಯೋತಿಷ್ಯಶಾಸ್ತ್ರದ (ಜಾತಕ) ಹೊಂದಾಣಿಕೆಯ ತಪ್ಪು ಕಲ್ಪನೆಯಿಂದ ಮದುವೆಗೆ ಒಪ್ಪಿಗೆ ನೀಡಿದ್ದರು ಎಂದು ನ್ಯಾಯಾಲಯ ಹೇಳಿದೆ. ಇದು ವಂಚನೆಯಾಗಿದೆ. ಈ ಪ್ರಕರಣದಲ್ಲಿ ಹೈಕೋರ್ಟ್ ಸಂಬಂಧಪಟ್ಟ ಮಹಿಳೆಯ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದೆ. ಪತಿಯು ತಪ್ಪು ಜನ್ಮದಿನಾಂಕವನ್ನು ಹೇಳಿದ್ದರಿಂದ ಜಾತಕ ಹೊಂದಾಣಿಕೆಯಲ್ಲಿ ತಪ್ಪಾಗಿತ್ತು ಎಂದು ಮಹಿಳೆ ವಾದಿಸಿದ್ದರು.
೧. ನ್ಯಾಯಮೂರ್ತಿ ಕೆ. ಲಕ್ಷ್ಮಣ್ ಮತ್ತು ನ್ಯಾಯಮೂರ್ತಿ ಬಿ.ಆರ್. ಮಧುಸೂದನ ರಾವ್ ಅವರ ಪೀಠವು, ‘ಹಿಂದೂ ವಿವಾಹ ಕಾಯ್ದೆ, 1955’ ರ ಸೆಕ್ಷನ್ 12(1)(ಸಿ) ಅಡಿಯಲ್ಲಿ ಪತ್ನಿಯ ಅರ್ಜಿಯನ್ನು ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು.
೨. ಈ ದಂಪತಿಗಳ ವಿವಾಹವು 2018 ರಲ್ಲಿ ನಡೆದಿತ್ತು. ಪತಿಯ ನಿಜವಾದ ಜನ್ಮದಿನಾಂಕ 9 ಫೆಬ್ರವರಿ 1974 ಆಗಿದ್ದರೂ, ಆತ 9 ಫೆಬ್ರವರಿ 1981 ಎಂದು ಸುಳ್ಳು ಹೇಳಿದ್ದನು. ಇದು ತನಗೆ ತಡವಾಗಿ ತಿಳಿಯಿತು ಎಂದು ಪತ್ನಿ ಹೇಳಿದ್ದಾರೆ.
೩. ವಿಚ್ಛೇದನ ಆದೇಶವನ್ನು ನೀಡುವಾಗ ಹೈಕೋರ್ಟ್, ಶಾಶ್ವತ ಜೀವನಾಂಶ, ಚಿನ್ನದ ಒಡವೆಗಳನ್ನು ಮರಳಿ ನೀಡುವುದು ಮತ್ತು ರಾಜಿ ಸಂಧಾನದಂತಹ ವಿಷಯಗಳ ಕುರಿತು ಸೂಕ್ತ ವೇದಿಕೆಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಇದರಲ್ಲಿ ಪತ್ನಿಯು ಪತಿಯ ವಿರುದ್ಧ ದಾಖಲಿಸಿರುವ ಕೌಟುಂಬಿಕ ದೌರ್ಜನ್ಯದ ಬಾಕಿ ಇರುವ ಪ್ರಕರಣವೂ ಸೇರಿದೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !