
ಮುಂಬಯಿ – ‘ಔಷಧ ಖರೀದಿ’ ಎನ್ನುವುದು ರೋಗಿಯ ಕಾನೂನುಬದ್ಧ ಹಕ್ಕಾಗಿದೆ. ರೋಗಿಯು ಆಸ್ಪತ್ರೆಯ ಔಷಧಾಲಯದಿಂದಲೇ ಔಷಧಗಳನ್ನು ಖರೀದಿಸಬೇಕು ಎಂದು ಕಾನೂನಿನಲ್ಲಿ ಯಾವುದೇ ಕಡ್ಡಾಯವಿಲ್ಲ. ಔಷಧಗಳನ್ನು ಎಲ್ಲಿಂದ ಖರೀದಿಸಬೇಕು?, ಎನ್ನುವುದು ಸಂಪೂರ್ಣವಾಗಿ ರೋಗಿ ಮತ್ತು ಅವರ ಸಂಬಂಧಿಕರ ಹಕ್ಕಾಗಿದೆ. ಎಲ್ಲಾ ಆಸ್ಪತ್ರೆಗಳು ಈ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ. ಆಸ್ಪತ್ರೆಗಳು ತಮ್ಮಲ್ಲಿಂದಲೇ ಔಷಧಗಳನ್ನು ಖರೀದಿಸುವಂತೆ ಒತ್ತಾಯಿಸಿದರೆ, ನಾಗರಿಕರು ಅದರ ವಿರುದ್ಧ ಆಹಾರ ಮತ್ತು ಔಷಧ ಆಡಳಿತ ಇಲಾಖೆಗೆ ನೇರವಾಗಿ ದೂರನ್ನು ದಾಖಲಿಸಬಹುದು. ಪ್ರತಿಯೊಂದು ದೂರನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಆಸ್ಪತ್ರೆಯ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರಾದ ತುಕಾರಾಂ ಮುಂಡೆ ಅವರು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಆಯುಕ್ತರಾದ ತುಕಾರಾಂ ಮುಂಡೆ ಅವರು ಮಾತನಾಡುತ್ತಾ, ಹಲವಾರು ಕಡೆಗಳಿಂದ ನಮಗೆ ಇಂತಹ ದೂರುಗಳು ಬರುತ್ತಿವೆ. ರೋಗಿಗಳಿಗೆ ಆಸ್ಪತ್ರೆಯ ಔಷಧಾಲಯದಿಂದಲೇ ಔಷಧಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ; ಆದರೆ ಔಷಧಗಳನ್ನು ಎಲ್ಲಿಂದ ತರಬೇಕು ಎನ್ನುವುದು ರೋಗಿಯ ವೈಯಕ್ತಿಕ ಆಯ್ಕೆ ಮತ್ತು ಮೂಲಭೂತ ಹಕ್ಕಾಗಿದೆ. ನೀವು ಯಾರನ್ನೂ ಒತ್ತಾಯಿಸಲು ಸಾಧ್ಯವಿಲ್ಲ. ಆಧುನಿಕ ವೈದ್ಯರು ರೋಗಿಗೆ ಅಗತ್ಯವಿರುವ ಔಷಧಗಳ ‘ಪ್ರಿಸ್ಕ್ರಿಪ್ಷನ್’ (ಔಷಧಗಳ ಪಟ್ಟಿ) ಅನ್ನು ಸಂಬಂಧಿಕರ ಕೈಗೆ ನೀಡುವುದು ಕಡ್ಡಾಯವಾಗಿದೆ. ಸಂಬಂಧಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮತ್ತು ಕೈಗೆಟುಕುವ ದರಕ್ಕೆ ಅನುಗುಣವಾಗಿ ಹೊರಗಿನ ಯಾವುದೇ ನೋಂದಾಯಿತ ಔಷಧಾಲಯದಿಂದ ಔಷಧಗಳನ್ನು ತರಬಹುದು. ಒಂದು ವೇಳೆ ಯಾವುದಾದರೂ ಔಷಧದ ನಿರ್ದಿಷ್ಟ ‘ಬ್ರ್ಯಾಂಡ್’ ಲಭ್ಯವಿಲ್ಲದಿದ್ದರೆ, ಅವರು ‘ಜೆನೆರಿಕ್’ (ಉತ್ಪಾದನಾ ದರದಲ್ಲಿ ಸಿಗುವ ಔಷಧಗಳು) ಆಯ್ಕೆಯನ್ನೂ ಮಾಡಿಕೊಳ್ಳಬಹುದು’’ಎಂದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”