‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!

ಹಿಂದೂ ಹುಡುಗಿಯ ಮೇಲೆ ಅತ್ಯಾಚಾರ ಮಾಡುವುದರಿಂದ ‘ಜನ್ನತ್’ (ಸ್ವರ್ಗ) ಸಿಗುತ್ತದೆ ಎಂದು ಮೌಲ್ವಿ ಹಾಗೂ ಇತರ ಅತ್ಯಾಚಾರಿಗಳ ದಾವೆ!

ನವದೆಹಲಿ / ಮೀರತ್ – ಇಲ್ಲಿನ 32 ವರ್ಷದ ಫಹೀಮ್ ಎಂಬ ಮುಸ್ಲಿಂ ಯುವಕ ತನ್ನನ್ನು ತಾನು ಸಾಹಿಲ್ ಎಂದು ನಂಬಿಸಿ, ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದೂ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಲ್ಲದೆ, ಆಕೆಯನ್ನು ಮೀರತ್‌ನಲ್ಲಿರುವ ತನ್ನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ, ಆತನ ತಂದೆ, ಸಹೋದರ ಮತ್ತು ಒಬ್ಬ ಮೌಲ್ವಿ ಸೇರಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಹಿಂದೂ ಹುಡುಗಿಯ ಅತ್ಯಾಚಾರ ಮಾಡುವುದರಿಂದ ಜನ್ನತ್ (ಸ್ವರ್ಗ) ಸಿಗುತ್ತದೆ ಎಂದು ಅವರು ಹೇಳುತ್ತಿದ್ದರು. ಯುವತಿ ಮತಾಂತರಗೊಳ್ಳಲು, ಬುರ್ಖಾ ಧರಿಸಲು ಮತ್ತು ಗೋಮಾಂಸ ತಿನ್ನಲು ಇಡೀ ಕುಟುಂಬ ಒತ್ತಡ ಹೇರಿತು. ಅವರಿಂದ ತಪ್ಪಿಸಿಕೊಳ್ಳಲು ತನಗೆ 5 ವರ್ಷಗಳು ಬೇಕಾಯಿತು ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

1. ಇನ್‌ಸ್ಟಾಗ್ರಾಮ್ ಮೂಲಕ ನವೆಂಬರ್ 2021 ರಲ್ಲಿ ತನಗೆ ಸಾಹಿಲ್ ಜೊತೆ ಸ್ನೇಹವಾಯಿತು ಎಂದು ಸಂತ್ರಸ್ತೆ ತಿಳಿಸಿದ್ದಾಳೆ. ಮಾರ್ಚ್ 2022 ರಲ್ಲಿ ಸಾಹಿಲ್ ಆಕೆಯನ್ನು ದೆಹಲಿಯ ಬಾಟ್ಲಾ ಹೌಸ್‌ಗೆ ಕರೆದೊಯ್ದಿದ್ದನು. ಅಲ್ಲಿ ಸಾಹಿಲ್ ಮತ್ತು ಆತನ ಸ್ನೇಹಿತ ಅಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಅದರ ವಿಡಿಯೋ ಮಾಡಿಕೊಂಡಿದ್ದರು.

2. ಸಾಹಿಲ್ ಬೆದರಿಕೆ ಹಾಕಿ ಆಕೆಯನ್ನು ಮತ್ತೆ ಬಾಟ್ಲಾ ಹೌಸ್‌ಗೆ ಕರೆಸಿಕೊಂಡಿದ್ದನು. ಪಿಸ್ತೂಲ್ ತೋರಿಸಿ ಹೆದರಿಸಿ, ಆಕೆಯನ್ನು ಮೀರತ್‌ನ ಸಾಥ್ಲಾ ಗ್ರಾಮದಲ್ಲಿದ್ದ ತನ್ನ ಮನೆಗೆ ಕರೆದೊಯ್ದನು. ಅಲ್ಲಿ ತಲುಪಿದ ನಂತರ ಆತ ಮುಸ್ಲಿಂ ಎಂಬುದು ಆಕೆಗೆ ತಿಳಿಯಿತು. ಆತನ ನಿಜವಾದ ಹೆಸರು ಫಹೀಮ್. ಅದೇ ರಾತ್ರಿ ಫಹೀಮ್ ಮತ್ತು ನಂತರ ಆತನ ತಂದೆ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದರು. ಫಹೀಮ್‌ನ ತಾಯಿ ತಸ್ಲಿಮಾ ಮತ್ತು ಸಹೋದರಿ ಇಕ್ರಾ ಯುವತಿಯನ್ನು ಥಳಿಸಿದ್ದರು.

3. ಕೆಲವು ದಿನಗಳ ನಂತರ ಫಹೀಮ್‌ನ ತಾಯಿ ಮತ್ತು ಸಹೋದರಿ ಆಕೆಯನ್ನು ಅಗವಾನ್‌ಪುರದ ಮದರಸಾವೊಂದಕ್ಕೆ ಕರೆದೊಯ್ದರು. ಫಹೀಮ್‌ನ ಸೋದರಮಾವ ಹಾಫಿಜ್ ಮಂಜೂರ್ ಅಲ್ಲಿ ಮೌಲ್ವಿಯಾಗಿದ್ದನು. ಆತ ಫಹೀಮ್ ಜೊತೆಗೆ ಆಕೆಯ ನಿಕಾಹ್ (ವಿವಾಹ) ಮಾಡಿಸಿದನು.

4. ನಿಕಾಹ್ ನಂತರ ಫಹೀಮ್ ಕುಟುಂಬದವರು ಆಕೆಯನ್ನು ಒಬ್ಬ ಮೌಲ್ವಿ ಬಳಿ ಕರೆದೊಯ್ದರು. ಅಲ್ಲಿ ಆ ಮೌಲ್ವಿ ಆಕೆಯ ಮೇಲೆ ಅತ್ಯಾಚಾರ ಮಾಡಿದನು. ನಂತರ ಆ ಮೌಲ್ವಿ ಪ್ರತಿದಿನ ಆಕೆಯ ಮನೆಗೆ ಬರಲು ಪ್ರಾರಂಭಿಸಿದನು. ಕುಟುಂಬದವರು ಆತನನ್ನು ಆಕೆಯ ಕೋಣೆಗೆ ಕಳುಹಿಸುತ್ತಿದ್ದರು. ಮುಂದೆ ಆ ಮೌಲ್ವಿ ತನ್ನೊಂದಿಗೆ ಇನ್ನುಳಿದ ಜನರನ್ನು ಕರೆತರಲು ಪ್ರಾರಂಭಿಸಿದನು. ಆಕೆ ಇದನ್ನು ವಿರೋಧಿಸಿದಾಗ, “ನಾವು ಇದನ್ನೆಲ್ಲ ಉಚಿತವಾಗಿ ಮಾಡುತ್ತಿಲ್ಲ, ನಿನ್ನ ಅತ್ತೆಗೆ ಹಣ ನೀಡುತ್ತಿದ್ದೇವೆ” ಎಂದು ಮೌಲ್ವಿ ಹೇಳುತ್ತಿದ್ದನು.

5. ನವೆಂಬರ್ 2024 ರಲ್ಲಿ ಫಹೀಮ್‌ ತನ್ನ ಕುಟುಂಬದೊಂದಿಗೆ ಕೆಲವು ವಿವಾದದಲ್ಲಿ ಸಿಲುಕಿದನು ಎಂದು ಸಂತ್ರಸ್ತೆ ತಿಳಿಸಿದ್ದಾಳೆ. ಆತ ಆಕೆಯನ್ನು ಮತ್ತು ಆಕೆಯ ಮಗಳನ್ನು ಕರೆದುಕೊಂಡು ಮತ್ತೆ ಬಾಟ್ಲಾ ಹೌಸ್‌ಗೆ ಬಂದನು. ಅಲ್ಲಿ ಫಹೀಮ್‌ನನ್ನು ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಯಿತು.

6. ಇದರ ನಂತರ, ಆಕೆ ತನ್ನ ಸಹೋದರನ ಸಹಾಯದಿಂದ ಆರೋಪಿ ಫಹೀಮ್ ಮತ್ತು ಆತನ ಕುಟುಂಬದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಈ ಪ್ರಕರಣದಲ್ಲಿ ಫಹೀಮ್ ಸೇರಿದಂತೆ 5 ಜನರನ್ನು ಬಂಧಿಸಿದ್ದಾರೆ.