ಪರಿಸರದ ಸರೋವರಕ್ಕೆ ಮುಸ್ಲಿಮರೂ ಭೇಟಿ ನೀಡುತ್ತಿರುವುದರಿಂದ ಹಿಂದೂಗಳಿಂದ ಆಕ್ರೋಶ ವ್ಯಕ್ತ
ಇಲ್ಲಿಗೆ ಬರುವ ಮುಸ್ಲಿಮರಿಗೆ ಗೋಮೂತ್ರದಿಂದ ಸ್ನಾನ ಮಾಡುವುದನ್ನು ಕಡ್ಡಾಯಗೊಳಿಸುವ ಎಚ್ಚರಿಕೆ

ಸಹಾರನ್‌ಪುರ (ಉತ್ತರ ಪ್ರದೇಶ) – ಇಲ್ಲಿನ ಹಿಂದೂಗಳ ಧಾರ್ಮಿಕ ಸ್ಥಳವಾದ ‘ಶ್ರೀ ಗೋಗಾ ಮಢಿ’ಯನ್ನು ಮನೋರಂಜನಾ ಸ್ಥಳವನ್ನಾಗಿ ಪರಿವರ್ತಿಸಿರುವುದಕ್ಕೆ ಹಿಂದೂಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಗೋಗಾ ಮಢಿ ಸಂಕೀರ್ಣದಲ್ಲಿರುವ ‘ಗೋರಕ್ಷ ಗಂಗಾ ಸರೋವರ’ವನ್ನು ‘ಫನ್ ಪಾಯಿಂಟ್’ (ಮನೋರಂಜನೆಯ ಸ್ಥಳ) ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ಹಿಂದೂಗಳ ಈ ತೀರ್ಥಕ್ಷೇತ್ರದಲ್ಲಿ ಮುಸ್ಲಿಮರ ಓಡಾಟ ಭಾರಿ ಪ್ರಮಾಣದಲ್ಲಿ ಹೆಚ್ಚಿರುವುದರಿಂದ ಇಲ್ಲಿನ ಧಾರ್ಮಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ‘ಗೋಗಾ ಮಢಿ ಸುಧಾರಣಾ ಸಭೆ’ಯ ಅಧ್ಯಕ್ಷ ಅನಿಲ್ ಪ್ರತಾಪ ಸೈನಿ ಆರೋಪಿಸಿದ್ದಾರೆ.
🕉️ Sacred Site Under Threat? Anger Erupts at Shri Goga Madhi 🚨
Saharanpur (Uttar Pradesh): Hindu organisations have opposed the conversion of the revered Shri Goga Madhi pilgrimage site into a recreational "fun point."
Devotees allege that the religious sanctity of the… pic.twitter.com/hYP7IiStYs
— Sanatan Prabhat (@SanatanPrabhat) June 13, 2026
ಈ ಬಗ್ಗೆ ಆಡಳಿತ ಮಂಡಳಿಯಿಂದ ಇದುವರೆಗೆ ಯಾವುದೇ ನಿಲುವು ತಳೆದಿಲ್ಲ. ಈ ಕುರಿತು ‘ಸನಾತನ ಪ್ರಭಾತ’ದ ಪ್ರತಿನಿಧಿಯು ಸಹಾರನ್‌ಪುರದ ಜಿಲ್ಲಾಧಿಕಾರಿ ಅರವಿಂದ ಕುಮಾರ್ ಚೌಹಾಣ್ ಅವರನ್ನು ಸಂಪರ್ಕಿಸಲು ಯತ್ನಿಸಿದರಾದರೂ ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ.
ಹಿಂದುತ್ವವಾದಿಗಳಿಂದ ಶುದ್ಧೀಕರಣ ವಿಧಿ!
ಮುಸ್ಲಿಮರು ಈ ಪ್ರದೇಶಕ್ಕೆ ಪ್ರವೇಶಿಸಿದ ನಂತರ ಅಲ್ಲಿ ಪ್ರತಿಷ್ಠಾಪಿಸಲಾದ ‘ಜಾಹರವೀರ್ ಗೋಗಾಜಿ ಮಹಾರಾಜ್’ ಅವರ ಮೂರ್ತಿಯ ಶುದ್ಧೀಕರಣ ಮತ್ತು ಪೂಜಾ ವಿಧಿಗಳನ್ನು ಮಾಡಲಾಯಿತು. ಈ ಕುರಿತು ಅನಿಲ ಪ್ರತಾಪ ಸೈನಿ ಮಾತನಾಡಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಳೆದ ವರ್ಷ ಇಲ್ಲಿ ‘ಗೋರಕ್ಷ ಗಂಗಾ ಸರೋವರ’ವನ್ನು ಉದ್ಘಾಟಿಸಿದ್ದರು. ಈ ಸ್ಥಳವು ಲಕ್ಷಾಂತರ ಭಕ್ತರ ಶ್ರದ್ಧೆಯ ಕೇಂದ್ರವಾಗಿದೆ. ನಮ್ಮ ಸಮಿತಿಯೊಂದಿಗೆ ಯಾವುದೇ ಚರ್ಚೆ ನಡೆಸದೆ ಈ ಸರೋವರದ ಸ್ವರೂಪವನ್ನು ಬದಲಾಯಿಸಲಾಗಿದ್ದು, ಈಗ ಇದು ಧಾರ್ಮಿಕ ಸ್ಥಳದ ಬದಲಾಗಿ ಮನೋರಂಜನಾ ಕೇಂದ್ರದಂತೆ ಕಾಣುತ್ತಿದೆ. ಇದಕ್ಕೆ ಇಲ್ಲಿನ ಮಹಾನಗರ ಪಾಲಿಕೆ ಆಡಳಿತವೇ ಕಾರಣ ಎಂದು ಹೇಳಿದರು.
ಎರಡೂ ಪ್ರವೇಶ ದ್ವಾರಗಳಲ್ಲಿ ‘ಗೋಮೂತ್ರ ಯೋಜನೆ’ ಆರಂಭಿಸಲಾಗುವುದು!
ಈ ಧಾರ್ಮಿಕ ಸ್ಥಳಕ್ಕೆ ಪ್ರವೇಶವನ್ನು ಕೇವಲ ಸನಾತನ ಧರ್ಮದ ಅನುಯಾಯಿಗಳಿಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಸೈನಿ ಆಡಳಿತ ಮಂಡಳಿಯನ್ನು ಒತ್ತಾಯಿಸಿದರು. ತಮ್ಮ ಬೇಡಿಕೆಗಳ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದರು. ಈ ಧಾರ್ಮಿಕ ಸ್ಥಳದ ಎರಡೂ ಪ್ರವೇಶ ದ್ವಾರಗಳಲ್ಲಿ ‘ಗೋಮೂತ್ರ ಯೋಜನೆ’ ರೂಪಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಪ್ರವೇಶ ದ್ವಾರಗಳ ಮೂಲಕ ಒಳಗೆ ಬರುವ ಯಾವುದೇ ಮುಸ್ಲಿಂ ವ್ಯಕ್ತಿಗೆ ಗೋಮೂತ್ರದಿಂದ ಸ್ನಾನ ಮಾಡುವುದು ಕಡ್ಡಾಯವಾಗಿರುತ್ತದೆ. ಈ ಅಭಿಯಾನಕ್ಕಾಗಿ ನಾವು ಹಳ್ಳಿ ಹಳ್ಳಿಗಳಲ್ಲಿ ಸಂಪರ್ಕ ಸಾಧಿಸಲಿದ್ದೇವೆ. ಅಗತ್ಯ ಬಿದ್ದರೆ ನಾವು ಬಂಧನಕ್ಕೊಳಗಾಗಲೂ ಸಿದ್ಧರಿದ್ದೇವೆ ಎಂದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ