ಅಶ್ಲೀಲ ಟಿಪ್ಪಣಿಗಳಿಗೆ ಪ್ರೋತ್ಸಾಹ;

ಮುಂಬಯಿ – ತನ್ನ ಕಾರ್ಯಕ್ರಮದಲ್ಲಿ ಅಶ್ಲೀಲ ಟಿಪ್ಪಣಿಗಳಿಗೆ ಪ್ರೋತ್ಸಾಹ ನೀಡಿದ್ದ ಹಾಸ್ಯನಟ ಪ್ರಣೀತ್ ಮೋರೆ ಕ್ಷಮೆಯಾಚಿಸಿದ್ದಾನೆ. ಪ್ರಣೀತ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಆತ ತನ್ನ ‘ಇನ್‌ಸ್ಟಾಗ್ರಾಮ್’ ಖಾತೆಯನ್ನು ಮುಚ್ಚಿದ್ದನು. ಮಹಾರಾಷ್ಟ್ರ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ ನಂತರ, ಪ್ರಣೀತ್ ತನ್ನ ಖಾತೆಯಲ್ಲಿ, “ನಾನು ಭಾವೋದ್ರೇಕಕ್ಕೆ ಒಳಗಾಗಿದ್ದೆ. ನಾನು ಅದನ್ನು ತಡೆಯಬಹುದಿತ್ತು; ಆದರೆ ಆಗ ನನಗೆ ಆ ರೀತಿ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಯಾರಿಗೆಲ್ಲಾ ನೋವಾಗಿದೆಯೋ, ಅವರೆಲ್ಲರ ಕ್ಷಮೆ ಕೇಳುತ್ತೇನೆ. ನಾನು ಒಬ್ಬ ಒಳ್ಳೆಯ ಮನುಷ್ಯನಾಗಿ ಬದುಕಿ ತೋರಿಸುತ್ತೇನೆ” ಎಂದು ಆತ ಬರೆದಿದ್ದಾನೆ. ಮೋರೆ ಆಸ್ತಿ ಸುಮಾರು 4 ರಿಂದ 8 ಕೋಟಿ ರೂಪಾಯಿಗಳಷ್ಟಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.
ಹಿಮಾಂಶು ಜಾಂಗಡಾ ಎಂಬವರು ‘ಗೆಳತಿಯಿಂದ ಬಿರಿಯಾನಿ ಹಣ ವಸೂಲಿ ಮಾಡುವ’ ದ್ವಂದ್ವಾರ್ಥದ ಅಶ್ಲೀಲ ಟಿಪ್ಪಣಿಗೆ ಮೋರೆ ತನ್ನ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ್ದರು. ಈಗ ಆ ಹಿಮಾಂಶು ತನ್ನ ಕೆಲಸ ಕಳೆದುಕೊಂಡಿದ್ದಾನೆ. “ಕಾಲೇಜಿನಲ್ಲಿದ್ದಾಗ ದೇಹದಾನ ಮಾಡುವ ಪುರುಷರ ಅಂಗಾಂಗಗಳ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿದ್ದೆ” ಎಂದು ಹೇಳಿದ್ದ ಡಾ. ಸೆಜಲ್ ಪವಾರ್ ವಿರುದ್ಧವೂ ಕೂಡ ಮಹಾರಾಷ್ಟ್ರ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗವು ಈ ಇಡೀ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ.
ಡಾ. ಸೆಜಲ್ ಪವಾರ್ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿದ್ದಾರೆ. ಕೆ.ಇ.ಎಮ್. ಆಸ್ಪತ್ರೆಯು ಆಕೆಯನ್ನು 15 ದಿನಗಳ ಕಾಲ ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯು 5 ಸದಸ್ಯರ ಸಮಿತಿ ರಚಿಸಿದೆ. ಆಕೆಗೆ ತನ್ನ ಪರ ವಾದ ಮಂಡಿಸಲು ಅವಕಾಶ ನೀಡಲಾಗುವುದು ಎಂದೂ ಸ್ಪಷ್ಟಪಡಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರ, ವಿದ್ಯಾರ್ಥಿನಿಯ ನಡವಳಿಕೆ, ಸಂಸ್ಥೆಯ ಪ್ರತಿಷ್ಠೆ ಮತ್ತು ಸಂಬಂಧಿತ ದೂರುಗಳು—ಇವೆಲ್ಲವನ್ನೂ ತನಿಖೆ ನಡೆಸಲಾಗುವುದು.
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ
ಈಗ ಶತ್ರುಗಳ ಕ್ಷಿಪಣಿಗಳು ಗಾಳಿಯಲ್ಲೇ ನಾಶ !
ಹೊಸ ಸ್ನಾನ ಘಟ್ಟಗಳ ಕಾಮಗಾರಿಗಳನ್ನು ಜನವರಿ 2027 ರೊಳಗೆ ಪೂರ್ಣಗೊಳಿಸುವಂತೆ ಆದೇಶ
ಉತ್ತರ ಪ್ರದೇಶ: ಶ್ರೀ ಚಾಮುಂಡಾ ದೇವಸ್ಥಾನದ ಜಾಗದಲ್ಲಿದ್ದ ಧಾರ್ಮಿಕ ಸ್ಥಳದ ಅತಿಕ್ರಮಣ ತೆರವು!