ಜೂನ್ 23 ಮತ್ತು 24 ರಂದು ಮಂದಿರ ದರ್ಶನಕ್ಕೆ ಬಂದ್!
ಮೂರ್ತಿಗೆ ರಾಸಾಯನಿಕ ಲೇಪನ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬ ವಿಷಯದಲ್ಲಿ ಇನ್ನೂ ಅಸ್ಪಷ್ಟತೆ !

ಪಂಢರಪುರ – ಶ್ರೀ ವಿಠ್ಠಲ ರುಕ್ಮಿಣೀ ದೇವಿಯ ಮೂರ್ತಿಗಳ ದೀರ್ಘಕಾಲದ ಸಂರಕ್ಷಣೆ ಮತ್ತು ಸಂರಕ್ಷಣೆಯ ದೃಷ್ಟಿಯಿಂದ ಭಾರತೀಯ ಪುರಾತತ್ವ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ ಹಾಗೂ ಮೂರ್ತಿ ಸಂರಕ್ಷಣಾ ಕ್ಷೇತ್ರದ ತಜ್ಞರ ಮಾರ್ಗದರ್ಶನದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಲಭ್ಯವಿರುವ ತಾಂತ್ರಿಕ ಮಾರ್ಗದರ್ಶನ ಮತ್ತು ಶಿಫಾರಸುಗಳ ಆಧಾರದ ಮೇಲೆ ಜೂನ್ 22 ರಿಂದ 24 ರ ಅವಧಿಯಲ್ಲಿ ಶ್ರೀ ವಿಠ್ಠಲ-ರುಕ್ಮಿಣೀ ದೇವಿಯ ಮೂರ್ತಿಗಳ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳಲಾಗುವುದು. ಈ ಕಾರ್ಯಕ್ಕೆ ಅಗತ್ಯವಿರುವ ತಾಂತ್ರಿಕ ಪ್ರಕ್ರಿಯೆಯನ್ನು ಸುರಕ್ಷಿತವಾಗಿ ಪೂರ್ಣಗೊಳಿಸಲು ಹಾಗೂ ಮೂರ್ತಿಯ ಪಾವಿತ್ರ್ಯವನ್ನು ರಕ್ಷಿಸಲು, ಜೂನ್ 23 ಮತ್ತು 24 ಈ 2 ದಿನಗಳ ಕಾಲ ಶ್ರೀ ವಿಠ್ಠಲ ರುಕ್ಮಿಣಿ ಮಂದಿರವನ್ನು ಭಕ್ತರ ದರ್ಶನಕ್ಕಾಗಿ ಮುಚ್ಚಲಾಗುವುದು ಎಂದು ‘ಶ್ರೀ ವಿಠ್ಠಲ ರುಕ್ಮಿಣಿ ಮಂದಿರ ಸಮಿತಿ’ಯ ಸಹ-ಅಧ್ಯಕ್ಷರಾದ ಹ.ಭ.ಪ. ಗಹಿನಿನಾಥ ಮಹಾರಾಜ ಔಸೇಕರ್ ಅವರು ಮಾಹಿತಿ ನೀಡಿದ್ದಾರೆ. ಮೂರ್ತಿಯ ಮೇಲೆ ರಾಸಾಯನಿಕ ಲೇಪನ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬ ವಿಷಯದಲ್ಲಿ ಇನ್ನೂ ಅಸ್ಪಷ್ಟತೆ ಇದೆ. ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯ, ಮಹಾರಾಷ್ಟ್ರ ಮಂದಿರ ಮಹಾಸಂಘ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. (ಮೂರ್ತಿಯ ಸಂರಕ್ಷಣೆ ಎಂದರೆ ನಿಖರವಾಗಿ ಏನು ಮಾಡಲಾಗುವುದು? ಎಂಬ ಮಾಹಿತಿಯು ಭಕ್ತರಿಗೆ ಮೊದಲೇ ತಿಳಿಯಬೇಕು. ಹಾಗೆಯೇ ಸಂರಕ್ಷಣೆ ಮಾಡುವ ಮೊದಲು ಸರಕಾರವು ಧರ್ಮಾಚಾರ್ಯರ ಮಾರ್ಗದರ್ಶನವನ್ನು ಪಡೆದಿದೆಯೇ? ಎಂಬುದು ಸ್ಪಷ್ಟವಾಗಬೇಕು! – ಸಂಪಾದಕರು)
ಇದಕ್ಕೂ ಮುನ್ನ 1988, 2005, 2020 ಮತ್ತು 2022 ರ ಅವಧಿಯಲ್ಲಿ ಮೂರ್ತಿಗಳ ಸಂರಕ್ಷಣಾ ಕಾರ್ಯವನ್ನು ಮಾಡಲಾಗಿತ್ತು. ಹಿಂದಿನ ಸಂರಕ್ಷಣಾ ಕಾರ್ಯ ನಡೆದು ಸುಮಾರು 5 ವರ್ಷಗಳಾಗಿರುವುದರಿಂದ ಮೂರ್ತಿಯ ಕೆಲವು ಭಾಗಗಳು ನೈಸರ್ಗಿಕವಾಗಿ ಸವೆದಿರುವುದು ಕಂಡುಬಂದಿದೆ. ಮೂರ್ತಿಯಲ್ಲಿನ ಸೂಕ್ಷ್ಮ ರಂಧ್ರಗಳು ಮತ್ತು ಸವೆದುಹೋದ ಭಾಗಗಳನ್ನು ದುರಸ್ತಿ ಮಾಡಲು, ಹಾಗೂ ಮೂರ್ತಿಯ ಆಯುಷ್ಯವನ್ನು ಹೆಚ್ಚಿಸಲು ರಕ್ಷಣಾತ್ಮಕ ಕವಚವನ್ನು ನೀಡಲಾಗುವುದು. ಈ ಸಂಪೂರ್ಣ ಪ್ರಕ್ರಿಯೆಯು ಭಾರತೀಯ ಪುರಾತತ್ವ ಇಲಾಖೆ, ಛತ್ರಪತಿ ಸಂಭಾಜಿನಗರ ಮತ್ತು ರಾಜ್ಯ ಪುರಾತತ್ವ ಇಲಾಖೆ, ಪುಣೆ ಇವರ ಮಾರ್ಗದರ್ಶನದಲ್ಲಿ ನೆರವೇರಲಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !