ಆರ್ಥಿಕ ಹಗರಣದ ಪ್ರಕರಣದಲ್ಲಿ ಕ್ರಮ
ತಕ್ಷಣವೇ ಸಹಾಯಕ್ಕಾಗಿ ಧಾವಿಸಿದ ಮಮತಾ ಬ್ಯಾನರ್ಜಿ

ಕೊಲಕಾತಾ (ಬಂಗಾಳ) – ಬಂಗಾಳ ಪೊಲೀಸರ ದೊಡ್ಡ ತಂಡವೊಂದು ತೃಣಮೂಲ ಕಾಂಗ್ರೆಸ್ಸಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ ಅವರ ಕಾಲಿಘಾಟ್ (ಪಟುಆಪಾಡಾ) ನಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದೆ. ಜೂನ 12 ರ ಮಧ್ಯರಾತ್ರಿ 2.30 ಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ದಾಳಿ ನಡೆಸಲು ಬಂದ ಪೊಲೀಸ್ ಅಧಿಕಾರಿಗಳು ಆರಂಭದಲ್ಲಿ ದೀರ್ಘಕಾಲದವರೆಗೆ ಅಭಿಷೇಕ ಬ್ಯಾನರ್ಜಿ ಅವರ ಮನೆಯ ಬಾಗಿಲು ತಟ್ಟಿದರು; ಆದರೆ ಬಾಗಿಲು ತೆರೆಯದ ಕಾರಣ ಪೊಲೀಸರು ಚಿಲಕವನ್ನು ಮುರಿದು ಮನೆಗೆ ಪ್ರವೇಶಿಸಿದರು ಮತ್ತು ಸುಮಾರು 5 ಗಂಟೆಗಳ ಕಾಲ ಮನೆಯನ್ನು ತೀವ್ರವಾಗಿ ಶೋಧಿಸಿದರು. ಈ ಕಾರ್ಯಾಚರಣೆಯ ಸಮಯದಲ್ಲಿ ಕೇಂದ್ರ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸೀಲ್ ಮಾಡಿದ್ದವು.
🚨 Bengal: Late-night police raid at the residence of Abhishek Banerjee in connection with an alleged financial scam.
🔹 Mamata Banerjee reportedly rushed to the spot soon after the action began.
⚖️ Allegations of corruption linked to the TMC regime are gradually surfacing.… pic.twitter.com/DUo23KO83A
— Sanatan Prabhat (@SanatanPrabhat) June 13, 2026
ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮಮತಾ ಬ್ಯಾನರ್ಜಿ ಅವರು ಮುಂಜಾನೆ ಸೋದರಳಿಯ ಅಭಿಷೇಕ ಬ್ಯಾನರ್ಜಿ ಅವರ ಮನೆಗೆ ತಲುಪಿದರು. ಇದರಿಂದಾಗಿ ವಾತಾವರಣ ಮತ್ತಷ್ಟು ಉದ್ವಿಗ್ನಗೊಂಡಿತು. ಈ ವೇಳೆ ಅಭಿಷೇಕ ಬ್ಯಾನರ್ಜಿ ಅವರು ಮಾತನಾಡಿ, ಪೊಲೀಸರು ಚಿಲಕ ಮುರಿದು ಇಡೀ ಮನೆಯನ್ನು ಶೋಧಿಸಿದ್ದಾರೆ. ನಮ್ಮ ಬಳಿ ಇದರ ಸಂಪೂರ್ಣ ಚಿತ್ರೀಕರಣವಿದೆ. ಆದಾಗ್ಯೂ ನಾವು ತನಿಖಾ ಸಂಸ್ಥೆಗಳಿಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದರು. ರಾಜ್ಯ ಅಪರಾಧ ತನಿಖಾ ಇಲಾಖೆಯು ಇತ್ತೀಚೆಗಷ್ಟೇ ನಕಲಿ ಸಹಿ ಪ್ರಕರಣದಲ್ಲಿ ಅಭಿಷೇಕ ಅವರನ್ನು 5 ಗಂಟೆ 30 ನಿಮಿಷಗಳ ಕಾಲ ವಿಚಾರಣೆ ನಡೆಸಿತ್ತು. ಇದೇ ಪ್ರಕರಣದ ವಿಚಾರಣೆಗಾಗಿ ಅವರನ್ನು ಜೂನ್ 14 ರಂದು ಮತ್ತೊಮ್ಮೆ ಕರೆಯಲಾಗಿದೆ.
ತೃಣಮೂಲ ಕಾಂಗ್ರೆಸ್ ನಾಯಕನ ದೂರಿನ ಮೇರೆಗೆ ಕ್ರಮ!
ಶಾಲಬನಿಯ ತೃಣಮೂಲ ಕಾಂಗ್ರೆಸ್ಸಿನ ಸ್ಥಳೀಯ ನಾಯಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ದೂರಿನಲ್ಲಿ ಅಭಿಷೇಕ ಬ್ಯಾನರ್ಜಿ ಅವರ ವೈಯಕ್ತಿಕ ಸಹಾಯಕ ಸುಮಿತ ರಾಯ್ ಅವರು ಚುನಾವಣಾ ಟಿಕೆಟ್ ಕೊಡಿಸುವ ಹೆಸರಿನಲ್ಲಿ ಆರ್ಥಿಕ ಹಗರಣ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ
ಈಗ ಶತ್ರುಗಳ ಕ್ಷಿಪಣಿಗಳು ಗಾಳಿಯಲ್ಲೇ ನಾಶ !
ಹಾಸ್ಯನಟ ಪ್ರಣೀತ್ ಮೋರೆ ಕ್ಷಮೆಯಾಚನೆ; ಸೆಜಲ್ ಪವಾರ್ಗೆ 15 ದಿನಗಳ ಕಡ್ಡಾಯ ರಜೆ!
ಹೊಸ ಸ್ನಾನ ಘಟ್ಟಗಳ ಕಾಮಗಾರಿಗಳನ್ನು ಜನವರಿ 2027 ರೊಳಗೆ ಪೂರ್ಣಗೊಳಿಸುವಂತೆ ಆದೇಶ