ಕೆನಡಾದ ಮಹಿಳೆಯಿಂದ ‘ಓಪನ್ಎಐ’ ಸಂಸ್ಥೆಯ ವಿರುದ್ಧ ಮೊಕದ್ದಮೆ ದಾಖಲು
(ಚಾಟ್‌ಜಿಪಿಟಿ ಎಂದರೆ ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಳಸಿ ಸಿದ್ಧಪಡಿಸಲಾದ ಕಂಪ್ಯೂಟರ್ ವ್ಯವಸ್ಥೆ)

ವಾಷಿಂಗ್ಟನ್ (ಅಮೆರಿಕ) – ‘ಚಾಟ್‌ಜಿಪಿಟಿ’ಯಿಂದಾಗಿ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಕೆನಡಾದ ಮಹಿಳೆಯೊಬ್ಬರು ‘ಓಪನ್ಎಐ’ ಸಂಸ್ಥೆ ಮತ್ತು ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸ್ಯಾಮ್ ಆಲ್ಟ್‌ಮನ್ ಅವರ ವಿರುದ್ಧ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಈ ಮೊಕದ್ದಮೆಯ ಪ್ರಕಾರ, 24 ವರ್ಷದ ಆಲಿಸ್ ಕ್ಯಾರಿಯರ್ ಆತ್ಮಹತ್ಯೆಯ ಆಲೋಚನೆಗಳೊಂದಿಗೆ ಹೋರಾಡುತ್ತಿದ್ದಾಗ, ಚಾಟ್‌ಬಾಟ್ ಅವಳಿಗೆ ‘ಬಹುಶಃ ಇದೇ ಕೊನೆಯಿರಬಹುದು’ ಎಂದು ಹೇಳಿತ್ತು. ಈ ಹಿಂದೆಯೂ ವಿವಿಧ ಜನರಿಂದ ಈ ರೀತಿಯ ಹಲವು ಮೊಕದ್ದಮೆಗಳು ದಾಖಲಾಗಿವೆ.
ಆಲಿಸ್ ಅವರ ತಾಯಿ ಕ್ರಿಸ್ಟಿ ಕ್ಯಾರಿಯರ್ ಮಾತನಾಡಿ, ಆಲಿಸ್ ತನ್ನ ಸಾವಿಗೆ ಮುನ್ನ ಹಲವು ಬಾರಿ ‘ಚಾಟ್‌ಜಿಪಿಟಿ’ಯೊಂದಿಗೆ ತನ್ನ ಆತ್ಮಹತ್ಯೆಯ ಆಲೋಚನೆಗಳ ಬಗ್ಗೆ ಮಾತನಾಡಿದ್ದಳು; ಆದರೆ ‘ಓಪನ್ಎಐ’ನ ಭದ್ರತಾ ವ್ಯವಸ್ಥೆಯು ಆ ಸಂಭಾಷಣೆಗಳನ್ನು ಮಾನವ ಪರಿಶೀಲನೆಗಾಗಿ (ಹ್ಯೂಮನ್ ರಿವ್ಯೂ) ಎಂದಿಗೂ ಗುರುತಿಸಲಿಲ್ಲ ಅಥವಾ ಅವುಗಳನ್ನು ತಡೆಯಲಿಲ್ಲ. ಇಂತಹ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವಿಲ್ಲದಿದ್ದರೂ, ‘ಚಾಟ್‌ಜಿಪಿಟಿ’ಯು ಅವಳೊಂದಿಗೆ ಈ ವಿಷಯದ ಬಗ್ಗೆ ಮಾರ್ಗದರ್ಶಕನ ಪಾತ್ರದಲ್ಲಿ ಸಂವಾದ ನಡೆಸಿತು. ಇದೇ ಅವಳು ಆತ್ಮಹತ್ಯೆಗೆ ಪ್ರೇರೇಪಿತಳಾಗಲು ಕಾರಣವಾಯಿತು ಎಂದು ಹೇಳಿದ್ದಾರೆ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’