ಭ್ರಷ್ಟಾಚಾರ ಜೀವನದ ಒಂದು ಪದ್ಧತಿಯಾಗಿ ಬಿಟ್ಟಿದೆ !

ಮಾಜಿ ಮುಖ್ಯನ್ಯಾಯಾಧೀಶರ ಈ ಹೇಳಿಕೆಯಿಂದ `ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಭ್ರಷ್ಟಾಚಾರ ಇದೆ’, ಎಂಬ ಅರ್ಥ ಬರುತ್ತದೆ. ಇದರಿಂದ ಭಾರತ ಯಾವ ದಿಕ್ಕಿನತ್ತ ಸಾಗುತ್ತಿದೆ, ಎಂಬುದು ಸ್ಪಷ್ಟವಾಗುತ್ತದೆ ! ಈ ಸ್ಥಿತಿ ಕೇವಲ ಧರ್ಮಾಚರಣೆ ಆಡಳಿತಗಾರರು ಮತ್ತು ಜನರ ಹಿಂದೂ ರಾಷ್ಟ್ರದಲ್ಲಿಯೇ ಬದಲಿಸಲು ಸಾಧ್ಯ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಕೇಂದ್ರ ಸರಕಾರದ ‘ಬೇಟಿ ಬಚಾವೋ-ಬೇಟಿ ಪಢಾವೋ’ ಯೋಜನಗಾಗಿ ಶೇ. ೭೯ ರಷ್ಟು ಹಣ ಕೇವಲ ಜಾಹೀರಾತಿಗಾಗಿ ವಿನಿಯೋಗ ! – ಸಂಸದೀಯ ಸಮಿತಿಯ ವರದಿಯಲ್ಲಿ ಮಾಹಿತಿ

‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಗಾಗಿ ಖರ್ಚು ಮಾಡಿರುವ ೪೪೬ ಕೋಟಿ ೭೨ ಲಕ್ಷ ರೂಪಾಯಿಗಳ ಪೈಕಿ ಶೇ. ೭೮.೧೧ ರಷ್ಟು ಹಣ ಜಾಹೀರಾತಿಗಾಗಿ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ.

ಬಿಪಿನ ರಾವತರವರ ಪಾರ್ಥಿಕ ಶರೀರಕ್ಕೆ ದೆಹಲಿಯಲ್ಲಿ ಅಂತ್ಯಸಂಸ್ಕಾರ

ಬಿಪಿನ ರಾವತ ಮತ್ತು ಅವರ ಪತ್ನಿ ಮಧುಲಿಕಾರಾವತರವರ ಪಾರ್ಥಿಕ ಶರೀರಕ್ಕೆ ಕಂಟೋಂಮೆಂಟ ಪರಿಸರದಲ್ಲಿ ಬ್ರರಾರ ಸ್ವೆಅರನಲ್ಲಿ ಸರಕಾರಿ ಗೌರವದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಆಗ ಅವರ ಗೌರವದಲ್ಲಿ ೧೭ ಸುತ್ತು ತೋಫಿನ ವಂದನೆ ಸಲ್ಲಿಸಲಾಯಿತು.

ದೆಹಲಿಯ ಗಡಿಯಲ್ಲಿನ ರೈತರ ಆಂದೋಲನ ಹಿಂದಕ್ಕೆ !

’ಸಂಯುಕ್ತ ಕಿಸಾನ ಮೋರ್ಚಾ’ ದೆಹಲಿಯ ಗಡಿಯಲ್ಲಿ 378 ದಿನಗಳಿಂದ ನಡೆಯುತ್ತಿದ್ದ ರೈತರ ಆಂದೋಲನವನ್ನು ಹಿಂದೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿದೆ. ಈ ಘೊಷಣೆಯನ್ನು ರೈತ ಸಂಘಟನೆಗಳ ಸಭೆಯ ಬಳಿಕ ಮಾಡಲಾಯಿತು. ಡಿಸಂಬರ 11 ರವರೆಗೂ ರೈತರು ದೆಹಲಿಯ ಗಡಿಯನ್ನು ಬಿಟ್ಟು ಹೋಗುವುದಾಗಿ ಸಂಯುಕ್ತ ಕಿಸಾನ ಮೋರ್ಚಾ ಹೇಳಿಕೆ ನೀಡಿದೆ.

ಹಿಂದೂಗಳಿಗೆ ದೇವತೆಗಳ ಮೂರ್ತಿಯನ್ನು ಸ್ಥಾಪಿಸಿ ಅವುಗಳಿಗೆ ಪೂಜಿಸುವ ಅಧಿಕಾರ ನೀಡುವ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾಯಾಲಯ

ದೆಹಲಿಯಲ್ಲಿನ ಕುತುಬ ಮಿನಾರದಲ್ಲಿ 27 ಹಿಂದೂ ಮತ್ತು ಜೈನ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅಧಿಕಾರವನ್ನು ಕೇಳುವ ಅರ್ಜಿಯನ್ನು ಸಾಕೇತ ನ್ಯಾಯಾಲಯವು ‘ಪ್ಲೇಸ್ಸ್ ಅಫ್ ವರ್ಷಿಪ್ 1991’ ನ ಕಾನೂನಿನ ಆಧಾರದಲ್ಲಿ ತಿರಸ್ಕರಿಸಿದೆ.

ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ನಾಡ ಬಾಂಬ್ ಸ್ಫೋಟ

ರೋಹಿಣಿ ನ್ಯಾಯಾಲಯದಲ್ಲಿನ ‘ಕೋರ್ಟ್ ರೂಮ್ 102’ರಲ್ಲಿ ಬೆಳಿಗ್ಗೆ ಕಡಿಮೆ ತೀವ್ರತೆಯ ಸ್ಫೋಟ ನಡೆದಿದೆ. ಇದರಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.

ಭಾರತದಲ್ಲಿ ಶೇಕಡಾ ಒಂದರಷ್ಟು ಜನರ ಬಳಿ ದೇಶದ ಶೇಕಡಾ 22 ರಷ್ಟು ಸಂಪತ್ತು ! – ಜಾಗತಿಕ ಅಸಮತೋಲನೆಯ ವರದಿ

`ಭಾರತವು ಒಂದು ಬಡ ಮತ್ತು ಅಸಮಾನತೆಯಿರುವ ದೇಶವಾಗಿದೆ’, ಎಂದು `ಜಾಗತಿಕ ವಿಷಮತೆ ವರದಿ 2022’ರಲ್ಲಿ ಹೇಳಿದೆ. ಈ ವರದಿಯು 2021 ನೇ ವರ್ಷದ ವರದಿಯ ಮಾಹಿತಿಯ ಮೇಲೆ ಆಧಾರಿತವಾಗಿದೆ. ವರ್ಷ 2020 ರಲ್ಲಿ ಜಾಗತಿಕ ಉತ್ಪನ್ನತೆಯಲ್ಲಿ ಗಮನಾರ್ಹ ಇಳಿಕೆಯಾಗಿರುವುದಾಗಿ ಈ ವರದಿಯಲ್ಲಿ ನಮೂದಿಸಲಾಗಿದೆ.

ನಿಷೇಧದ ಸಾಧ್ಯತೆಯಿಂದ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ವಿವಿಧ ಹೆಸರಿನಿಂದ ಚಿಕ್ಕ ಸಂಸ್ಥೆಗಳನ್ನು ಸ್ಥಾಪಿಸಿ ಸಕ್ರಿಯವಿರಲು ಪ್ರಯತ್ನ !

ತಂತ್ರಗಾರಿಕೆಯಲ್ಲಿ ಜಾಣರಿರುವ ಜಿಹಾದಿ ಸಂಘಟನೆ ! ಕೇಂದ್ರ ಸರಕಾರವು ಇದನ್ನು ಗಮನಿಸಿ ಶೀಘ್ರವಾಗಿ ರಾಷ್ಟ್ರಘತಕ ಚಟುವಟಿಕೆಗಳನ್ನು ನಡೆಸುವ ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು !

ಜೆ.ಎನ್.ಯು.ನಲ್ಲಿ ಬಾಬ್ರಿಯ ಬೆಂಬಲಕ್ಕಾಗಿ ಕಮ್ಯುನಿಸ್ಟ ವಿಚಾರ ಸರಣಿಯ ವಿದ್ಯಾರ್ಥಿಗಳ ಸಂಘಟನೆಯಿಂದ ಆಂದೋಲನ

ವಿವಾದಿತ ಜವಾಹರಲಾಲ್ ನೆಹರು ವಿದ್ಯಾಪೀಠ ಅಂದರೆ ಜೆ.ಎನ್.ಯು.ನಲ್ಲಿ ಡಿಸೆಂಬರ್ ೬ ರ ರಾತ್ರಿ ಜೆ.ಎನ್.ಯು.ನ ವಿದ್ಯಾರ್ಥಿ ಸಂಘಟನೆ ಬಾಬ್ರಿಯನ್ನು ಬೆಂಬಲಿಸಲು ಆಂದೋಲನ ನಡೆಸಿದರು.

ಸಂವಿಧಾನದ ಪ್ರಸ್ತಾವನೆಯಿಂದ ‘ಜಾತ್ಯಾತೀತ’ ಮತ್ತು ‘ಸಮಾಜವಾದ’ ಶಬ್ದವನ್ನು ತೆಗೆಯಲು ರಾಜ್ಯಸಭೆಯಲ್ಲಿ ಖಾಸಗಿ ವಿಧೇಯಕ ಮಂಡನೆ !

ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಿರುವ ‘ಧರ್ಮನಿರಪೇಕ್ಷ’ (ಸೆಕ್ಯುಲರ್) ಮತ್ತು ‘ಸಮಾಜವಾದ’ (ಸೋಶಿಯಲಿಸ್ಟ್) ಶಬ್ದಗಳನ್ನು ತೆಗೆದುಹಾಕುವ ಬಗ್ಗೆ ಖಾಸಗಿ ವಿಧೇಯಕವನ್ನು ಭಾಜಪದ ರಾಜ್ಯಸಭೆಯಲ್ಲಿನ ಸಂಸದರಾದ ಕೆ. ಜೆ. ಅಲ್ಫೊಂಸರವರು ಸಾದರಪಡಿಸಿದ್ದಾರೆ.