ತಂತ್ರಗಾರಿಕೆಯಲ್ಲಿ ಜಾಣರಿರುವ ಜಿಹಾದಿ ಸಂಘಟನೆ ! ಕೇಂದ್ರ ಸರಕಾರವು ಇದನ್ನು ಗಮನಿಸಿ ಶೀಘ್ರವಾಗಿ ರಾಷ್ಟ್ರಘತಕ ಚಟುವಟಿಕೆಗಳನ್ನು ನಡೆಸುವ ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು !- ಸಂಪಾದಕರು
ನವ ದೆಹಲಿ – ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.) ಈ ಜಿಹಾದಿ ಸಂಘಟನೆಯ ಮೇಲೆ ಗೂಢಚರ ವ್ಯವಸ್ಥೆಯು ನಿಗಾವಹಿಸಿದೆ. ಈ ಸಂಘಟನೆ ನಿಷೇಧಿಸುವಂತೆ ನಿರಂತರವಾಗಿ ಒತ್ತಾಯಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಕಾರ್ಯ ನಿರ್ವಿಘ್ನವಾಗಿ ನಡೆಸಲು ಪಿ.ಎಫ್.ಐ.ನಿಂದ ದೇಶದಾದ್ಯಂತ ಬೇರೆ ಬೇರೆ ಹೆಸರಿನ ಚಿಕ್ಕ ಚಿಕ್ಕ ಸಂಸ್ಥೆಗಳು ಸ್ಥಾಪಿಸುವ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿಯನ್ನು ಮೂಲಗಳು ನೀಡಿವೆ. ಈ ಸಂಸ್ಥೆಯ ನೋಂದಣಿ ಸ್ಥಳೀಯ ನೋಂದಣಿ ಕಾರ್ಯಾಲಯದಲ್ಲಿ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಈ ರೀತಿಯ ವ್ಯೂಹ ರಚಿಸುವ ನಿರ್ಣಯ ಪಿ.ಎಫ್.ಐ.ನ ಹಿರಿಯ ನಾಯಕರಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ. ರಾಷ್ಟ್ರೀಯ ತನಿಖಾ ದಳ, ಜಾರಿ ನಿರ್ದೆಶನಾಲಯ(ಇಡಿ), ರಾಜ್ಯ ಪೊಲೀಸ್ ದಳ ಇವರ ಜೊತೆ ವಿವಿಧ ಸರಕಾರಿ ಸಂಸ್ಥೆಗಳು ಪಿ.ಎಫ್.ಐ.ನ ವಿರುದ್ಧ ಅನೇಕ ಅಪರಾಧಗಳನ್ನು ಮತ್ತು ಮೊಕದ್ದಮೆಗಳನ್ನು ನೋಂದಾಯಿಸಿದ್ದಾರೆ. ಆದ್ದರಿಂದ ಭವಿಷ್ಯದಲ್ಲಿ ಈ ಸಂಘಟನೆಯ ಮೇಲೆ ನಿಷೇಧ ಹೇರುವ ಸಾಧ್ಯತೆಯಿದೆ.