ಭಾರತವು ಅತ್ಯಧಿಕ ಅಸಮಾನತೆಯಿರುವ ದೇಶಗಳ ಪಟ್ಟಿಯಲ್ಲಿ ಸಮಾವೇಶ
* ಹಾಗಿದ್ದರೆ, ಇದನ್ನು ನಾವು `ಸ್ವಾತಂತ್ರ್ಯದ 74 ವರ್ಷಗಳಿಂದ ಭಾರತವು ಮಾಡಿದ ಪ್ರಗತಿ’ ಎಂದು ಹೇಳಬೇಕೇ ?- ಸಂಪಾದಕರು * ವಿದೇಶದಲ್ಲಿನ ಸಂಸ್ಥೆಗಳು ಪ್ರಕಟಿಸಿದ ಇಂತಹ ವರದಿಯ ಮೇಲೆ ಎಷ್ಟು ವಿಶ್ವಾವಿಡುವುದು?, ಎಂಬ ಬಗ್ಗೆ ಕೂಡ ವಿಚಾರ ಮಾಡುವುದು ಅಗತ್ಯ ! ಅದರ ಜೊತೆಗೆ ಸರಕಾರವು ಈ ವರದಿಯನ್ನು ಪರಿಶೀಲಿಸಿ ಅದರ ಸತ್ಯವನ್ನು ಜನತೆಯ ಮುಂದೆ ತರಬೇಕು !- ಸಂಪಾದಕರು |
ನವ ದೆಹಲಿ – ‘ಭಾರತವು ಒಂದು ಬಡ ಮತ್ತು ಅಸಮಾನತೆಯಿರುವ ದೇಶವಾಗಿದೆ’, ಎಂದು `ಜಾಗತಿಕ ವಿಷಮತೆ ವರದಿ 2022‘ರಲ್ಲಿ ಹೇಳಿದೆ. ಈ ವರದಿಯು 2021 ನೇ ವರ್ಷದ ವರದಿಯ ಮಾಹಿತಿಯ ಮೇಲೆ ಆಧಾರಿತವಾಗಿದೆ. ವರ್ಷ 2020 ರಲ್ಲಿ ಜಾಗತಿಕ ಉತ್ಪನ್ನತೆಯಲ್ಲಿ ಗಮನಾರ್ಹ ಇಳಿಕೆಯಾಗಿರುವುದಾಗಿ ಈ ವರದಿಯಲ್ಲಿ ನಮೂದಿಸಲಾಗಿದೆ. ಈ ವರದಿಯು `ವಲ್ರ್ಡ್ ಇನ್‍ಕ್ವಾಲಿಟೀ ಲ್ಯಾಬ್’ನ ಸಹ-ಸಂಚಾಲಕ ಲುಕಾಸ ಚ್ಯಾನ್ಸೆಲರವರು ಸಿದ್ಧ ಪಡಿಸಿದ್ದಾರೆ. ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ ಪಿಕೆಟ್ಟೀಯವರೂ ಸೇರಿದಂತೆ ಅನೇಕ ತಜ್ಞರು ಈ ವರದಿಯನ್ನು ತಯಾರಿಸಲು ಸಹಾಯ ಮಾಡಿದ್ದಾರೆ.
#ExpressFrontPage | The report has also flagged a drop in global income during 2020.https://t.co/2gSfcdLLDv
— The Indian Express (@IndianExpress) December 8, 2021
ಈ ವರದಿಯಲ್ಲಿ ಮುಂದಿನಂತೆ ಹೇಳಲಾಗಿದೆ,
1. ಭಾರತವು ಎಂತಹ ದೇಶವೆಂದರೆ ಅಲ್ಲಿನ ಶೇಕಡಾ 10 ರಷ್ಟು ಜನಸಂಖ್ಯೆಯ ರಾಷ್ಟ್ರೀಯ ಉತ್ಪನ್ನದಲ್ಲಿ ಶೇಕಡಾ 57 ರಷ್ಟು ಪಾಲಿದೆ ಹಾಗೂ ಕೆಳಗಿನ ಮಟ್ಟದಲ್ಲಿರುವ ಜನಸಂಖ್ಯೆ (ಶೇಕಡಾ 50 ರಷ್ಟು) ಘಟಕಗಳ ಪಾಲು ಕೇವಲ ಶೇಕಡಾ 13 ರಷ್ಟು ಪಾಲಿದೆ.
2. ಭಾರತದಲ್ಲಿನ ವಯಸ್ಕ (ಯುವ) ಜನಸಂಖ್ಯೆಯ ಸರಾಸರಿ ರಾಷ್ಟ್ರೀಯ ಉತ್ಪನ್ನವು 2 ಲಕ್ಷ 4 ಸಾವಿರ 200 ರೂಪಾಯಿಗಳಾಗಿದೆ ಮತ್ತು ಕೆಳ ಮಟ್ಟದ (ಶೇಕಡಾ 50 ರಷ್ಟು) ಉತ್ಪನ್ನವು 53 ಸಾವಿರ 610 ರೂಪಾಯಿಗಳಿವೆ ಮತ್ತು ಜನಸಂಖ್ಯೆಯು ಶೇಕಡಾ 10 ರಷ್ಟು ಜನರ ಉತ್ಪನ್ನವು ಹೆಚ್ಚುಕಡಿಮೆ 20 ಪಟ್ಟು, ಅಂದರೆ 11 ಲಕ್ಷ 66 ಸಾವಿರ 520 ರೂಪಾಯಿಗಳಿಗಿಂತ ಹೆಚ್ಚಾಗಿದೆ.
3. ಶೇಕಡಾ 10 ರಷ್ಟು ಜನಸಂಖ್ಯೆಯ ಬಳಿ ರಾಷ್ಟ್ರೀಯ ಉತ್ಪನ್ನತೆಯು ಶೇಕಡಾ 57 ರಷ್ಟು ಪಾಲಿದೆ ಹಾಗೂ ಶೇಕಡಾ ಒಂದರಷ್ಟು ಜನಸಂಖ್ಯೆಯ ಬಳಿ ಶೇಕಡಾ 22 ರಷ್ಟಿದೆ. ಅದೇ ಸಮಯದಲ್ಲಿ ಕೆಳ ಮಟ್ಟದ ಶೇಕಡಾ 50 ರಷ್ಟು ಜನಸಂಖ್ಯೆಯ ಪಾಲು ಕೇವಲ ಶೇಕಡಾ 13 ರಷ್ಟಿದೆ.
4. ಭಾರತದಲ್ಲಿನ ಸರಾಸರಿ ಗೃಹಬಳಕೆಯ ಆಸ್ತಿಯು 9 ಲಕ್ಷ 83 ಸಾವಿರ 10 ರೂಪಾಯಿಗಳಿವೆ. ಭಾರತವು ಒಂದು ಬಡ ಮತ್ತು ಉನ್ನತ ವರ್ಗದವರಿಂದ ತುಂಬಿರುವಂತಹ ಅತ್ಯಂತ ಅಸಮಾನ ದೇಶವಾಗಿದೆ.
5. ಭಾರತದಲ್ಲಿ ಲೈಂಗಿಕ ಅಸಮಾನತೆಯು ಅತ್ಯಾಧಿಕವಾಗಿದೆ. ಮಹಿಳಾ ಕೆಲಸಗಾರರ ಉತ್ಪನ್ನದ ಪಾಲು ಶೇಕಡಾ 18 ರಷ್ಟಿದೆ. ಏಷಿಯಾದಲ್ಲಿನ ಇತರ ದೇಶಗಳಿಗೆ ಹೋಲಿಸಿದರೆ ಈ ಪ್ರಮಾಣವು ಅತ್ಯಲ್ಪವಾಗಿದೆ.