ಭ್ರಷ್ಟಾಚಾರ ಜೀವನದ ಒಂದು ಪದ್ಧತಿಯಾಗಿ ಬಿಟ್ಟಿದೆ !

‘ಸರ್ವೋಚ್ಚ ನ್ಯಾಯಾಲಯದಲ್ಲಿ ಭ್ರಷ್ಟಾಚಾರವಿದೆಯೇ ?’ ಎಂಬ ಪ್ರಶ್ನೆಗೆ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೋಗೋಯಿ ಉತ್ತರ

ಮಾಜಿ ಮುಖ್ಯನ್ಯಾಯಾಧೀಶರ ಈ ಹೇಳಿಕೆಯಿಂದ ‘ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಭ್ರಷ್ಟಾಚಾರ ಇದೆ’, ಎಂಬ ಅರ್ಥ ಬರುತ್ತದೆ. ಇದರಿಂದ ಭಾರತ ಯಾವ ದಿಕ್ಕಿನತ್ತ ಸಾಗುತ್ತಿದೆ, ಎಂಬುದು ಸ್ಪಷ್ಟವಾಗುತ್ತದೆ ! ಈ ಸ್ಥಿತಿ ಕೇವಲ ಧರ್ಮಾಚರಣೆ ಆಡಳಿತಗಾರರು ಮತ್ತು ಜನರ ಹಿಂದೂ ರಾಷ್ಟ್ರದಲ್ಲಿಯೇ ಬದಲಿಸಲು ಸಾಧ್ಯ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !- ಸಂಪಾದಕರು 

ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೋಗೋಯಿ

ನವ ದೆಹಲಿ – ‘ಸಮಾಜ ಎಷ್ಟು ಪ್ರಾಚೀನವಾಗಿದೆಯೋ ಅಷ್ಟೇ ಪ್ರಾಚೀನ ಭ್ರಷ್ಟಾಚಾರ ಇದೆ. ಇಂದು ಭ್ರಷ್ಟಾಚಾರ ಜೀವನದ ಒಂದು ಪದ್ಧತಿಯಾಗಿದ್ದು ಜನರು ಅದನ್ನು ಸ್ವೀಕರಿಸಿದ್ದಾರೆ, ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯನ್ಯಾಯಾಧೀಶ ರಂಜನ್ ಗೋಗೋಯಿ ಹೇಳಿದರು. ‘ಝೀ ನ್ಯೂಸ್’ ಈ ಹಿಂದಿ ವಾರ್ತಾವಾಹಿನಿಯ ಸಂಪಾದಕರಾದ ಶ್ರೀ. ಸುಧೀರ ಚೌಧರಿ ಇವರು ರಂಜನ ಗೊಗೋಯಿ ಇವರ ಸಂದರ್ಶನ ತೆಗೆದುಕೊಂಡರು. ಅದರಲ್ಲಿ ಶ್ರೀ. ಚೌಧರಿ ಇವರು `ಸರ್ವೋಚ್ಚ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಇದೆಯೇ ?’ ಎಂಬ ಪ್ರಶ್ನೆ ಕೇಳಿದಾಗ ಗೊಗೋಯಿ ಇವರು ಮೇಲಿನ ಹೇಳಿಕೆ ನೀಡಿದರು.

(ಸೌಜನ್ಯ : Zee News)

ಆ ಸಮಯದಲ್ಲಿ ರಂಜನ್ ಗೊಗೋಯಿ ಇವರು ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡಿದರು. ಶ್ರೀರಾಮಜನ್ಮಭೂಮಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, `ಶ್ರೀರಾಮಜನ್ಮಭೂಮಿ ಮೊಕದ್ದಮೆಯ ತೀರ್ಪಅನ್ನು ನಾನೊಬ್ಬನೇ ನೀಡಿಲ್ಲ, ನನ್ನ ಜೊತೆ ಇತರ 4 ನ್ಯಾಯಾಧೀಶರು ಇದ್ದರು ಮತ್ತು ನಾವು ಎಲ್ಲರೂ ಸೇರಿ ನೀಡಿದ್ದೇವೆ’, ಎಂದರು. ಗೊಗೋಯಿ ಅವರು ಮುಖ್ಯ ನ್ಯಾಯಾಧೀಶರಾಗಿರುವಾಗ ಮಹಿಳಾ ಸಿಬ್ಬಂದಿಗೆ ಲೈಂಗಿಕ ಶೋಷಣೆ ನೀಡಿರುವ ಆರೋಪ ಅವರ ಮೇಲಾಗಿತ್ತು. ಈ ವಿಷಯವಾಗಿ ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಾ `ಈ ಪ್ರಕರಣದ ವಿಚಾರಣೆ ನ್ಯಾಯಾಧೀಶರಾದ ಶರದ ಬೋಬಡೆ ಇವರಿಗೆ ನಾನೇ ನಡೆಸಲು ಹೇಳಿದ್ದೆ ಮತ್ತು ಅವರು ನನಗೆ ನಿರ್ಧೋಷಿ ಎಂದು ಖುಲಾಸೆಗೊಳಿಸಿದ್ದರು’, ಎಂದು ಸ್ಪಷ್ಟಪಡಿಸಿದರು.