ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರು ಪರಮವೀರ ಚಕ್ರದಿಂದ ಗೌರವಿಸಲ್ಪಟ್ಟ ಸೇನಾಧಿಕಾರಿಗಳ ಪತ್ನಿಯರ ಕಾಲು ಮುಟ್ಟಿ ನಮಸ್ಕರಿಸಿದರು!

ರಾಜನಾಥ ಸಿಂಗ್ ಇವರು 14 ಡಿಸೆಂಬರರಂದು ನವ ದೆಹಲಿಯಲ್ಲಿ `ವಿಜಯ ಪರ್ವ ಸಂಕಲ್ಪ’ ಸಮಾರಂಭದಲ್ಲಿ ಪರಮವೀರ ಚಕ್ರದಿಂದ ಗೌರವಿಸಲ್ಪಟ್ಟ ಸೇನಾಧಿಕಾರಿಗಳ ಪತ್ನಿಅವರನ್ನು ಭೇಟಿಯಾದ ಸಮಯದಲ್ಲಿ ಅವರ ಕಾಲು ಮುಟ್ಟಿ ನಮಸ್ಕರಿಸಿದರು

ಕಲಂ 370 ಅನ್ನು ರದ್ದುಗೊಳಿಸಿದ ನಂತರ ಕಳೆದ 2 ವರ್ಷಗಳಲ್ಲಿ ರಾಜ್ಯದ ಹೊರಗಿನ ಜನರು ಕೇವಲ 7 ಭೂಖಂಡಗಳನ್ನು ಖರೀದಿಸಿದ್ದಾರೆ !

ಇದರಿಂದ ಸ್ಪಷ್ಟವಾಗುವುದೇನೆಂದರೆ ಕಲಮ್ 370ನ್ನು ರದ್ದುಗೊಳಿಸಿದ ನಂತರವೂ ಮತ್ತು ಪ್ರತಿದಿನ ಜಿಹಾದಿ ಭಯೋತ್ಪಾದಕರನ್ನು ಸುರಕ್ಷಾ ದಳಗಳು ಕೊಂದು ಹಾಕುತ್ತಿದ್ದರೂ ‘ಇಂದಿಗೂ ಕಾಶ್ಮೀರವು ಭಾರತೀಯರಿಗೆ ವಾಸಿಸಲು ಸುರಕ್ಷಿತವಲ್ಲ’ ಎಂಬ ಭಾವನೆಯು ನಾಗರೀಕರಲ್ಲಿ ಇರುವುದರಿಂದ ಯಾರು ಇಲ್ಲಿನ ಸಂಪತ್ತಿನ ಖರೀದಿಗೆ ಇಚ್ಛಿಸುತ್ತಿಲ್ಲ.

ಡಾ. ಝಾಕಿರ್ ನಾಯಕ್ ಈತನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ ಮೇಲೆ ವಿಧಿಸಲಾದ ನಿಷೇಧದ ಕಾರಣ ಯೋಗ್ಯವೋ ಅಯೋಗ್ಯವೋ ಎಂಬುದನ್ನು ನಿರ್ಧರಿಸಲು ಪ್ರಾಧಿಕರಣ ಸ್ಥಾಪನೆ

ದೆಹಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಪ್ರಾಧಿಕರಣವನ್ನು ಸ್ಥಾಪಿಸಲಾಗಿದೆ. ಈ ಪ್ರಾಧಿಕರಣವು ಜಿಹಾದಿ ಭಯೋತ್ಪಾದಕರಿಗೆ ಆದರ್ಶವಾಗಿರುವ ಡಾ. ಝಾಕಿರ್ ನಾಯಿಕ ಈತನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ ಮೇಲೆ ನಿಷೇಧ ಹೇರಿರುವುದರ ಹಿಂದಿನ ಕಾರಣ ಯೋಗ್ಯವೋ ಅಯೋಗ್ಯವೋ, ಎಂಬುದನ್ನು ಪತ್ತೆ ಹಚ್ಚಲಿದೆ.

ಗೋಹತ್ಯೆ ನಿಷೇಧ ಕಾನೂನು ಮತ್ತು ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಿ !

ಗೋಹತ್ಯೆ ತಡೆಗೆ ಕಾನೂನನ್ನು ಜಾರಿಗೊಳಿಸುವುದರ ಜೊತೆಗೆ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಭಾಜಪ ಸಂಸದ ಕಿರೋಡಿ ಲಾಲ್ ಮೀಣಾ ಇವರು ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.

ದೆಹಲಿಯ ‘ಅಕ್ಬರ್ ರಸ್ತೆ’ಗೆ ಜನರಲ್ ಬಿಪಿನ್ ರಾವತ್ ಇವರ ಹೆಸರು ಇಡಿ ! – ಭಾಜಪದಿಂದ ದೆಹಲಿ ಪುರಸಭೆಯಲ್ಲಿ ಆಗ್ರಹ

‘ಅಕ್ಬರ್ ರಸ್ತೆ’ಗೆ ದಿವಂಗತ ಸಿಡಿಎಸ್ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್ – ಮೂರು ಸೇನೆಗಳ ಮುಖ್ಯಸ್ಥ) ಜನರಲ್ ಬಿಪಿನ್ ರಾವತ್ ಇವರ ಹೆಸರನ್ನು ಇಡುವಂತೆ ಒತ್ತಾಯಿಸಿ ದೆಹಲಿಯ ಭಾಜಪದಿಂದ ನವ ದೆಹಲಿ ಪುರಸಭೆಗೆ ಪತ್ರ ಬರೆದಿದೆ.

ಮುನಾವರ ಫಾರೂಕಿ ಇವನನ್ನು ಬೆಂಬಲಿಸುವವರು ನನ್ನನ್ನು ಬೆಂಬಲಿಸುವುದಿಲ್ಲ ! – ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್

ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಇವರ ಕಾರ್ಯಕ್ರಮದಲ್ಲಿ ಹಿಂದೂ ಧರ್ಮ ಮತ್ತು ಹಿಂದೂ ಈ ವಿಷಯವಾಗಿ ಅವಮಾನ ಮಾಡುವಂತ ಸಂಭಾಷಣೆ ಮತ್ತು ಹಾಸ್ಯಗಳು ಇರುವುದರಿಂದ ಹಿಂದುತ್ವನಿಷ್ಠ ಸಂಘಟನೆಗಳು ಆಂದೋಲನ ನಡೆಸಿ ದೇಶಾದ್ಯಂತ ಆತನ ಕಾರ್ಯಕ್ರಮಗಳನ್ನು ರದ್ದುಪಡಿಸಿದರು.

ಧರ್ಮದ ಆಧಾರದಲ್ಲಾದ ಭಾರತದ ವಿಭಜನೆಯು ಐತಿಹಾಸಿಕ ತಪ್ಪಾಗಿದೆ ! – ರಕ್ಷಣಾಮಂತ್ರಿ ರಾಜನಾಥ ಸಿಂಗ್

1971 ರ ಯುದ್ಧವು ಧರ್ಮದ ಆಧಾರದಲ್ಲಾದ ಭಾರತದ ವಿಭಜನೆಯನ್ನು ಐತಿಹಾಸಿಕ ತಪ್ಪು, ಎಂಬುದನ್ನು ಹೇಳುತ್ತದೆ. ಪಾಕಿಸ್ತಾನವು ಒಂದು ಧರ್ಮದ ಹೆಸರಿನಲ್ಲಿ ಜನಿಸಿದೆ; ಆದರೆ ಅದನ್ನು ತಡೆಯಲು ಸಾಧ್ಯವಾಗಲಿಲ್ಲ, ಎಂದು ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ರವರು ಹೇಳಿಕೆ ನೀಡಿದ್ದಾರೆ.

ಕಾನೂನು ಪ್ರಕ್ರಿಯೆ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ ಎಂಬ ಭಾವನೆಯಲ್ಲಿ ಬಾಬರಿಯನ್ನು ಉರುಳಿಸಲಾಯಿತು ! – ರಾ.ಸ್ವ. ಸಂಘದ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ

‘ಶ್ರೀರಾಮಜನ್ಮಭೂಮಿಯಲ್ಲಿ ಮತ್ತೆ ಶ್ರೀರಾಮ ಮಂದಿರ ಕಟ್ಟುವ ಸಂದರ್ಭದಲ್ಲಿ ಕಾನೂನು ಪ್ರಕ್ರಿಯೆ ಹೆಸರಿನಲ್ಲಿ ಹಿಂದೂಗಳಿಗೆ ವಂಚಿಸಲಾಗುತ್ತಿದೆ’, ಇಂತಹ ಭಾವನೆ ಹಿಂದೂಗಳ ಮನಸ್ಸಿನಲ್ಲಿ ನಿರ್ಮಾಣವಾಗಿದ್ದರಿಂದ ಬಾಬರಿಯನ್ನು ಉರುಳಿಸಲಾಯಿತು, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ ಇವರು ಇಲ್ಲಿ ಹೇಳಿದರು.

ಪ್ರಧಾನಮಂತ್ರಿ ಮೋದಿಯವರ ಟ್ವಿಟರ್ ಖಾತೆ ಕೆಲವು ಸಮಯಗಳ ಕಾಲ ‘ಹ್ಯಾಕ್ !

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆ ಡಿಸೆಂಬರ ೧೧ ರ ತಡರಾತ್ರಿ ಕೆಲವು ಕಾಲಾವಧಿಗಾಗಿ ‘ಹ್ಯಾಕ್ ಮಾಡಲಾಗಿತ್ತು. ಕೆಲವೇ ಸಮಯದ ಬಳಿಕ ಪುನ: ಸುರಕ್ಷಿತಗೊಳಿಸಲಾಗಿದೆ.

‘ಕೇಸರಿ ಭಯೋತ್ಪಾದನೆಯ ಹೆಸರಿನಡಿಯಲ್ಲಿ ನನ್ನನ್ನು ಸಿಲುಕಿಸಲು ಆಗಿನ ಕಾಂಗ್ರೆಸ್ ಸರಕಾರವು ೪೦೦ ಕೋಟಿ ಮೊತ್ತವನ್ನು ಖರ್ಚು ಮಾಡಿತ್ತು ! – ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಇಂದ್ರೇಶ ಕುಮಾರ

ಕಾಂಗ್ರೆಸ್ ನೇತೃತ್ವದ ಸಂಯುಕ್ತ ಸರಕಾರವು ತನ್ನ ಆಡಳಿತಾವಧಿಯಲ್ಲಿ ‘ಕೇಸರಿ ಭಯೋತ್ಪಾದನೆಯ ಹೆಸರಿನಡಿಯಲ್ಲಿ ನನ್ನನ್ನು ಸಿಲುಕಿಸಲು ಬಹಳ ಪ್ರಯತ್ನಿಸಿದರು. ಇದಕ್ಕಾಗಿ ೪೦೦ ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿದ್ದರು.