ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ನಾಡ ಬಾಂಬ್ ಸ್ಫೋಟ

ಒಬ್ಬರಿಗೆ ಸಣ್ಣಪುಟ್ಟ ಗಾಯ

ನವ ದೆಹಲಿ – ಇಲ್ಲಿಯ ರೋಹಿಣಿ ನ್ಯಾಯಾಲಯದಲ್ಲಿನ ‘ಕೋರ್ಟ್ ರೂಮ್ 102‘ರಲ್ಲಿ ಬೆಳಿಗ್ಗೆ ಕಡಿಮೆ ತೀವ್ರತೆಯ ಸ್ಫೋಟ ನಡೆದಿದೆ. ಇದರಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ತದನಂತರ ಪೊಲೀಸರು ನ್ಯಾಯಾಲಯದ ಪರಿಸರವನ್ನು ಖಾಲಿ ಮಾಡಿಸಿದರು. ಎಲ್ಲಾ ಮೊಕದ್ದಮೆಗಳ ಆಲಿಕೆಯನ್ನು ಸ್ಥಗಿತಗೊಳಿಸಲಾಯಿತು. ದೆಹಲಿ ಪೊಲೀಸರ ಹೇಳಿಕೆಯ ಪ್ರಕಾರ, ನ್ಯಾಯಾಲಯದಲ್ಲಿ ನಡೆದ ಸ್ಫೋಟ ಕಡಿಮೆ ತೀವ್ರತೆಯದ್ದಾಗಿತ್ತು. ಇದು ಒಂದು ರೀತಿಯ ನಾಡ ಬಾಂಬ್ ಆಗಿದೆ. ಅದೇ ಸಮಯಕ್ಕೆ ಘಟನಾಸ್ಥಳದಲ್ಲಿ ಸ್ಫೋಟಕ ಮತ್ತು ತಿಂಡಿಯ ಡಬ್ಬಿಯ ಹಾಗೆ ವಸ್ತು ಕಂಡಿದೆ. ಘಟನಾಸ್ಥಳದಲ್ಲಿ ಬಿಳಿ ಬಣ್ಣದ ಪುಡಿಯ ರೀತಿಯ ಸಾಮಗ್ರಿ ಎಲ್ಲೆಡೆ ಹರಡಿರುವುದು ಪೊಲೀಸರ ಗಮನಕ್ಕೆ ಬಂದಿದೆ.