(ಸಿಡಿಎಸ್ – ಚೀಫ ಆಫ ಡಿಫೆನ್ಸ ಸ್ಟಾಫ – ಮೂರೂ ಸೈನ್ಯ ಪಡೆಗಳ ಪ್ರಮುಖ)
೧೭ ಸುತ್ತು ಗುಂಡು ಹಾರಿಸಿ ವಂದನೆಗಳುರಕ್ಷಣಾಸಚಿವ, ಹಾಲಿ-ಮಾಜಿ ಸೈನ್ಯಾಧಿಕಾರಿಗಳ ಉಪಸ್ಥಿತಿ |
ನವ ದೆಹಲಿ – ಬಿಪಿನ ರಾವತ ಮತ್ತು ಅವರ ಪತ್ನಿ ಮಧುಲಿಕಾರಾವತರವರ ಪಾರ್ಥಿಕ ಶರೀರಕ್ಕೆ ಕಂಟೋಂಮೆಂಟ ಪರಿಸರದಲ್ಲಿ ಬ್ರರಾರ ಸ್ವೆಅರನಲ್ಲಿ ಸರಕಾರಿ ಗೌರವದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಆಗ ಅವರ ಗೌರವದಲ್ಲಿ ೧೭ ಸುತ್ತು ತೋಫಿನ ವಂದನೆ ಸಲ್ಲಿಸಲಾಯಿತು. ಈ ಅಂತ್ಯಕ್ರಿಯೆಯ ಸಮಯದಲ್ಲಿ ರಕ್ಷಣಾಸಚಿವ ರಾಜನಾಥ ಸಿಂಹ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೆಜರೀವಾಲ, ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿ, ಇತರ ಮಂತ್ರಿಗಳು ಹಾಗೂ ಸೈನ್ಯದಳದ ಪ್ರಮುಖರಾದ ಮನೊಜ ಮುಕುಂದ ನರವಣೆ, ನೌಕಾದಳದ ಪ್ರಮುಖ ಹರಿ ಕುಮಾರ, ವಾಯುದಳದ ಪ್ರಮುಖ ವಿ.ಆರ. ಚೌಧರಿ ಹಾಗೂ ಇತರ ಹಿರಿಯ ಹಾಲಿ-ಮಾಜಿ ಸೈನ್ಯಾಧಿಕಾರಿಗಳು ಉಪಸ್ಥಿತರಾಗಿದ್ದರು. ರಾವತರವರ ಪುತ್ರಿಯರಾದ ತಾರಿಣ ಹಾಗೂ ಕೃತಿಕಾರವರು ಪಾರ್ಥಿಕ ಶರೀರಕ್ಕೆ ಅಗ್ನಿ ನೀಡಿದರು.
ಅದರ ಮೊದಲು ರಾವತ ದಂಪತಿಗಳ ಅಂತ್ಯಯಾತ್ರೆಯನ್ನು ಶಂಕರ ವಿಹಾರದಲ್ಲಿರುವ ಅವರ ನಿವಾಸಸ್ಥಾನದಿಂದ ನಡೆಸಲಾಯಿತು. ೧೨ ಕಿಲೋಮೀಟರ ಅಂತರದ ಈ ಅಂತಿಮಯಾತ್ರೆಯ ಸಮಯದಲ್ಲಿ ರಸ್ತೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನತೆಯು ಉಪಸ್ಥಿತವಿದ್ದು ಶ್ರದ್ಧಾಂಜಲಿ ನೀಡಿತು. ಹಲವರು ದಂಪತಿಗಳ ಪಾರ್ಥಿಕ ಶರೀರಕ್ಕೆ ಪುಷ್ಪವೃಷ್ಟಿ ಮಾಡಿದರು. ಆದೇ ವೇಳೆ ನಾಗರಿಕರು ‘ಭಾರತ ಮಾತಾ ಕೀ ಜಯ’ ಎಂಬ ಘೋಷಣೆ ನೀಡಿದರು. ಅನೇಕ ನಾಗರಿಕರು ಸಂಪೂರ್ಣ ಅಂತ್ಯಯಾತ್ರೆಯಲ್ಲಿ ಪಾಲ್ಗೊಂಡರು. ಹಲವರು ತಮ್ಮ ಕೈಯ್ಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡಿದ್ದರು.
Bipin Rawat Funeral ಸಕಲ ಸೇನಾ ಗೌರವಗಳೊಂದಿಗೆ ಬ್ರಾರ್ ಸ್ಕ್ವೇರ್ನಲ್ಲಿ ಸಿಡಿಎಸ್ ಬಿಪಿನ್ ರಾವತ್ ಅಂತ್ಯ ಸಂಸ್ಕಾರhttps://t.co/e4U3pYwRWA#Bipin_Rawat #BipinRawatDeath #MadhulikaRawat #TamilNaduChopperCrash #Helicoptercrashes
— TV9 Kannada (@tv9kannada) December 10, 2021
ಜನರಲ ರಾವತ ಹಾಗೂ ಅನ್ಯ ಸೈನಿಕರ ವಿಷಯದಲ್ಲಿ ದೇಶದಲ್ಲೆಲ್ಲೆಡೆ ನಾಗರಿಕರಿಂದ ಶ್ರದ್ಧಾಂಜಲಿ
ಜನರಲ ರಾವತ ಹಾಗೂ ಇತರ ೧೩ ಜನರು ನಿಧನರಾದ ವಿಷಯವಾಗಿ ಭಾರತೀಯರಲ್ಲಿ ದುಃಖದೊಂದಿಗೆ ಗೌರವದ ಭಾವನೆ ಕಳೆದ ೨ ದಿನಗಳಿಂದ ಕಂಡು ಬಂತು. ಅನೇಕ ಸ್ಥಳದಲ್ಲಿ ನಾಗರಿಕರು ಅವರಿಗೆಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸಿದರು. ತಮಿಳುನಾಡಿನ ಸೂಳೂರು ಸೈನ್ಯ ನೆಲೆಯಲ್ಲಿ ಅವರೆಲ್ಲರ ಮೃತದೇಹವನ್ನು ರೋಗಿವಾಹನದಲ್ಲಿ (ಆಂಬುಲೆನ್ಸ) ಕೊಂಡೊಯ್ಯುತ್ತಿರುವಾಗ ನಾಗರಿಕರು ರಸ್ತೆಯ ಎರಡೂ ಬದಿಯಲ್ಲಿದ್ದುಕೊಂಡು ಪುಷ್ಪವೃಷ್ಟಿ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ದೊಡ್ಡ ಪ್ರಮಾಣದಲ್ಲಿ ಇಡೀ ದೇಶದಲ್ಲಿ ಪ್ರಸಾರಗೊಂಡಿತು.