ಪಾಕಿಸ್ತಾನದ ಪ್ರಧಾನಿ ಶಾಹಬಾಝ ಶರೀಫರವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಿಂದ ಪಾಕಿಸ್ತಾನದಲ್ಲಿ ಅವರ ಮೇಲೆ ಟೀಕೆ

ಪಾಕಿಸ್ತಾನದ ಪ್ರಧಾನಿ ಶಾಹಬಾಜ ಶರೀಫರವರು ಏಪ್ರಿಲ ೧೭ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಷಯ ನೀಡುವ ಕುರಿತು ಪತ್ರ ಬರೆದಿದ್ದರು. ‘ಎರಡೂ ದೇಶಗಳೂ ಶಾಂತಿಯುತವಾಗಿ ಜಮ್ಮೂ-ಕಾಶ್ಮೀರ ಹಾಗೂ ಇತರ ವಿವಾದಿತ ಅಂಶಗಳನ್ನು ಬಗೆಹರಿಸಬೇಕು’, ಎಂದು ಶರೀಫರವರು ಬರೆದಿರುವ ಪತ್ರದಲ್ಲಿ ಹೇಳಿದ್ದರು.

ಯಾರಿಗೆ ‘ದ ಕಶ್ಮೀರ ಫೈಲ್ಸ’ ಭೂತಕಾಲವೆಂದು ಅನಿಸುತ್ತದೆಯೋ, ಅವರು ದೆಹಲಿಯಲ್ಲಾದ ಗಲಭೆಯನ್ನು ನೋಡಲಿ !

ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲುತೂರಾಟ ನಡೆಸಲಾಗಿತ್ತು ಹಾಗೂ ಮತಾಂಧರು ಬಂದೂಕು ಮತ್ತು ಖಡ್ಗ ಹಿಡಿದುಕೊಂಡು ಹಿಂದೂಗಳ ಮೇಲೆ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ್ದರು.

ಪ್ರಪಂಚದ ಎಲ್ಲಾ ರಸ್ತೆಗಳ ಮೇಲೆ ನಮಾಜ್ ಮಾಡುವುದನ್ನು ನಿಷೇಧಿಸಬೇಕು! – ತಸ್ಲಿಮಾ ನಸರಿನ

ಪ್ರಾರ್ಥನೆಗೆ ಮನೆಯೇ ಉತ್ತಮ ಸ್ಥಳ ಎಂದು ನಾನು ನಂಬಿದ್ದರೂ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮಸ್ಲಿಮರ ಹಕ್ಕನ್ನು ನಾನು ಬೆಂಬಲಿಸುತ್ತೇನೆ. ಹಾಗಿದ್ದರೂ ಅವರು ರಸ್ತೆಯಲ್ಲಿ ನಮಾಜ್ ಮಾಡುವಾಗ ನಾನು ಅವರನ್ನು ಬೆಂಬಲಕ್ಕೆ ಹೋಗುವುದಿಲ್ಲ; ಏಕೆಂದರೆ ರಸ್ತೆಗಳು ಬಂದ ಮಾಡುವದರಿಂದ ಸಂಚಾರ ಅಸ್ತವ್ಯಸ್ತವಾಗುವುದು.

ಶ್ರೀ ಹನುಮಾನ ಜಯಂತಿಯ ದಿನ ೩ ರಾಜ್ಯಗಳಲ್ಲಿ ಮತಾಂಧರಿಂದ ಮೆರವಣಿಗೆಯ ಮೇಲೆ ಆಕ್ರಮಣ

ಶ್ರೀರಾಮನವಮಿಯ ಅನುಭವಿರುವಾಗ ಪೊಲೀಸರು ಶ್ರೀ ಹನುಮಾನ ಜಯಂತಿಯ ದಿನ ಮುಸಲ್ಮಾನಬಹುಲ ಭಾಗಗಳಿಂದ ಮೆರವಣಿಗೆಯು ಹೋಗುತ್ತಿರುವಾಗ ವಿಶೇಷ ಸುರಕ್ಷೆಯನ್ನು ಏಕೆ ನೀಡಲಿಲ್ಲ ? ಅಥವಾ ಹೆಚ್ಚಿನ ಸತರ್ಕತೆಯನ್ನು ಏಕೆ ತೋರಿಸಲಿಲ್ಲ ?

ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ ಫೋನಿನಲ್ಲಿ ಜೋರಾಗಿ ಹಾಡು ಕೇಳುವುದು ಅಥವಾ ಮಾತನಾಡುವುದು ಅಪರಾಧ

ರೈಲ್ವೇಯ ಹೊಸ ನಿಯಮಗಳ ಪ್ರಕಾರ ರಾತ್ರಿ ಪ್ರಯಾಣಿಸುವಾಗ ಯಾವುದೇ ಪ್ರಯಾಣಿಕರು ಮೊಬೈಲ್ ಫೋನಿನಲ್ಲಿ ಜೋರಾಗಿ ಮಾತನಾಡುವಂತಿಲ್ಲ, ಜೋರಾಗಿ ಹಾಡು ಕೇಳುವಂತಿಲ್ಲ. ಇತರೆ ಪ್ರಯಾಣಿಕರಿಂದ ಅಂತಹ ದೂರು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ದೆಹಲಿಯ ವಿಕಾಸಪುರಿಯ ಹಿಂದೂ ಸಂಘಟನೆಗಳಿಂದ ಮೆರವಣಿಗೆ

ದೆಹಲಿಯ ಜಹಾಂಗೀರಪುರಿಯಲ್ಲಿ ಹನುಮಂತ ಜಯಂತಿಯಂದು ನಡೆದ ಮೆರವಣಿಗೆಯ ಮೇಲೆ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಮತಾಂಧರಿಂದ ದಾಳಿ ನಡೆದಿತ್ತು. ಇದಾದ ನಂತರ ಏಪ್ರಿಲ ೧೭ ರಂದು ದೆಹಲಿಯ ವಿಕಾಸನಗರದಲ್ಲಿ ಹಿಂದೂ ಸಂಘಟನೆಗಳಿಂದ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.

೪ ರಾಜ್ಯಗಳ ೪ ವಿಧಾನಸಭೆ ಮತ್ತು ೧ ಲೋಕಸಭೆ ಉಪಚುನಾವಣೆಯಲ್ಲಿ ಭಾಜಪ ವಿರೋಧಿಗಳಿಗೆ ಯಶಸ್ಸು

ಬಿಹಾರ, ಬಂಗಾಳ, ಛತ್ತಿಸಗಢ ಮತ್ತು ಮಹಾರಾಷ್ಟ್ರದಲ್ಲಿ ನಡೆದ ೪ ವಿಧಾನಸಭಾ ಕ್ಷೇತ್ರಗಳು ಮತ್ತು ೧ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾಜಪಾವು ಯಾವುದೇ ಸ್ಥಾನವನ್ನು ಗೆದ್ದಿಲ್ಲ. ಮಹಾರಾಷ್ಟ್ರದ ಉತ್ತರ ಕೋಲ್ಲಾಪುರದಲ್ಲಿ ಕಾಂಗ್ರೆಸ ಅಭ್ಯರ್ಥಿ ಜಯಶ್ರೀ ಜಾಧವ, ಬಿಹಾರದ ಬೋಚಹಾ ಕ್ಷೇತ್ರದಿಂದ ರಾಷ್ಟ್ರೀಯ ಜನತಾದಳದ ಅಭ್ಯರ್ಥಿ ಮತ್ತು ಛತ್ತೀಸಗಢದಿಂದ ಕಾಂಗ್ರೆಸ ಆಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ಯಾನ್ ಮಾಡಲು ಕೇಂದ್ರ ಸರಕಾರ ಸಿದ್ಧತೆಯಲ್ಲಿ !

ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ಯನ್ನು ಕೇಂದ್ರ ಸರಕಾರ ಶೀಘ್ರದಲ್ಲೇ ನಿಷೇಧಿಸಲಿದ್ದು, ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಕೆಲವೆಡೆ ಶ್ರೀರಾಮ ನವಮಿಯ ಮೆರವಣಿಗೆಗಳ ಮೇಲೆ ನಡೆದ ದಾಳಿಯ ಹಿಂದೆ ಇದೇ ಸಂಘಟನೆಯ ಕೈವಾಡವಿದೆ ಎಂಬುದಕ್ಕೆ ಪುರಾವೆಗಳು ಲಭ್ಯವಾಗುತ್ತಿವೆ.

ಹಿಂದೂ ಸೇನೆಯು ಜೇ.ಎನ್.ಯುವಿನ ಹೊರಗೆ ಭಗವಾ ಧ್ವಜ ಹಾಗೂ ‘ಭಗವಾ ಜೇಎನ್ಯೂ’ ಎಂದು ಬರೆದಿರುವ ಭಿತ್ತಿಪತ್ರಕವನ್ನು ಹಚ್ಚಿತು !

ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ (‘ಜೇಎನ್ಯೂ’ವಿನಲ್ಲಿ) ಶ್ರೀರಾಮನವಮಿಯ ದಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಮತ್ತು ಸಾಮ್ಯವಾದಿ ವಿದ್ಯಾರ್ಥಿ ಸಂಘಟನೆಗಳ ವಿದ್ಯಾರ್ಥಿಗಳಲ್ಲಿ ಪೂಜೆ ಮತ್ತು ಮಾಂಸಾಹಾರದ ಬಗ್ಗೆ ಹೊಡೆದಾಟ ನಡೆದಿತ್ತು.

‘ಗೋಶಾಲೆಗಳ ಆರ್ಥಿಕವ್ಯವಸ್ಥೆ’ಯ ಬಗ್ಗೆ ನೀತಿ ಆಯೋಗವು ವಿಚಾರ ಮಾಡುತ್ತಿದೆ !

ಗೋಶಾಲೆಗಳ ವ್ಯಾವಸಾಯಿಕ ವ್ಯಾವಹಾರಿಕತೆಯನ್ನು ಪರಿಶೀಲಿಸಲು ಅವುಗಳ ಅರ್ಥಶಾಸ್ತ್ರಾಧಾರಿತ ವರದಿಯನ್ನು ತಯಾರಿಸುವ ಸೂಚನೆಯನ್ನು ನೀತೀ ಆಯೋಗವು ‘ನೆಶನಲ್‌ ಕೌನ್ಸಿಲ್‌ ಆಫ್‌ ಅಪ್ಲೈಡ್ ಇಕಾನಾಮಿಕ ರಿಸರ್ಚ’ಗೆ (‘ಎನ್‌ಸಿಎಐಆರ್‌’ಗೆ) ನೀಡಿದೆ.