|
ಶ್ರೀರಾಮನವಮಿಯ ಅನುಭವಿರುವಾಗ ಪೊಲೀಸರು ಶ್ರೀ ಹನುಮಾನ ಜಯಂತಿಯ ದಿನ ಮುಸಲ್ಮಾನಬಹುಲ ಭಾಗಗಳಿಂದ ಮೆರವಣಿಗೆಯು ಹೋಗುತ್ತಿರುವಾಗ ವಿಶೇಷ ಸುರಕ್ಷೆಯನ್ನು ಏಕೆ ನೀಡಲಿಲ್ಲ ? ಅಥವಾ ಹೆಚ್ಚಿನ ಸತರ್ಕತೆಯನ್ನು ಏಕೆ ತೋರಿಸಲಿಲ್ಲ ? ಶ್ರೀರಾಮನವಮಿಯ ಸಮಯದಲ್ಲಿ ಆಕ್ರಮಣವಾದಾಗ ದೇಶದಾದ್ಯಂತ ಟೀಕೆಗಳಾದ ನಂತರವೂ ಮತಾಂಧರು ಶ್ರೀ ಹನುಮಾನ ಜಯಂತಿಯ ಮೆರವಣಿಗೆಯ ಮೇಲೂ ಆಕ್ರಮಣ ಮಾಡಿ ಹಿಂದೂಗಳಿಗೆ ‘ನಮ್ಮನ್ನು ಯಾರೂ ಸೊಟ್ಟಗೆ ಮಾಡಲು ಸಾಧ್ಯವಿಲ್ಲ’ ಎಂಬುದನ್ನೇ ತೋರಿಸಿಕೊಟ್ಟಿದ್ದಾರೆ. ಈ ಮಾನಸಿಕತೆಯನ್ನು ದೂರಗೊಳಿಸಲು ಹಿಂದೂ ರಾಷ್ಟ್ರದ ಹೊರತು ಪರ್ಯಾಯವಿಲ್ಲ ! ಮಸೀದಿಯ ಛಾವಣಿಯಿಂದ ಪ್ರತಿಬಾರಿ ಕಲ್ಲುತೂರಾಟ ಮಾಡಲಾಗುತ್ತದೆ, ಎಂಬುದನ್ನು ನೋಡಿ ಈಗ ಪ್ರತಿದಿನ ದೇಶದಲ್ಲಿನ ಪ್ರತಿಯೊಂದು ಮಸೀದಿಯ ಛಾವಣಿಯನ್ನು ಪೊಲೀಸರು ಪರಿಶೀಲಿಸಬೇಕು, ಎಂಬ ನಿಯಮವನ್ನೇ ಮಾಡಬೇಕು ! ಮಸೀದಿಗಳ ಮೇಲೆ ಕಲ್ಲುಗಳ ರಾಶಿ ಸಿಕ್ಕಿದರೆ ಆ ಮಸೀದಿಗೆ ಸರಕಾರವು ಬೀಗ ಜಡಿಯುವುದು ಆವಶ್ಯಕವಾಗಿದೆ ! ‘ದೇಶದಲ್ಲಿನ ಅಲ್ಪಸಂಖ್ಯಾತರು ಅಸುರಕ್ಷಿತರಾಗಿದ್ದಾರೆ’ ಎಂದು ಹೇಳುವ ಜಾತ್ಯಾತೀತವಾದಿಗಳು ಈಗ ಎಲ್ಲಿ ಕುಳಿತಿದ್ದಾರೆ ? |
ನವದೆಹಲಿ – ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ದೇಶದಲ್ಲಿನ ೩ ರಾಜ್ಯಗಳಲ್ಲಿ ಮುಸಲ್ಮಾನಬಹುಲ ಭಾಗಗಳಲ್ಲಿ ಮತಾಂಧರು ಆಕ್ರಮಣ ಮಾಡಿರುವ ಘಟನೆಗಳು ಘಟಿಸಿದ ನಂತರ ಈಗ ಏಪ್ರಿಲ್ ೧೬ರಂದು ಶ್ರೀಹನುಮಾನ ಜಯಂತಿಯ ಮೆರವಣಿಗೆಯ ಮೇಲೂ ದೇಶದಲ್ಲಿನ ಉತ್ತರಾಖಂಡ, ದೆಹಲಿ ಮತ್ತು ಆಂಧ್ರಪ್ರದೇಶ ಈ ೩ ರಾಜ್ಯಗಳಲ್ಲಿ ಮತಾಂಧರು ಆಕ್ರಮಣ ಮಾಡಿರುವ ಘಟನೆಯು ಘಟಿಸಿದೆ. ವಿಶೇಷವೆಂದರೆ ರಾಜಧಾನಿ ದೆಹಲಿಯಲ್ಲಿನ ಜಹಾಂಗೀರಪುರಿಯಲ್ಲಿ ಮಾಡಲಾದ ಆಕ್ರಮಣದಲ್ಲಿ ಬಾಂಗ್ಲಾದೇಶಿ ನುಸುಳುಕೋರ ಮುಸಲ್ಮಾನರೂ ಸೇರಿರುವುದಾಗಿ ಆರೋಪಿಸಲಾಗುತ್ತಿದೆ. ಇದರೊಂದಿಗೆ ಕರ್ನಾಟಕದಲ್ಲಿ ಸಾಮಾಜಿಕ ಮಾಧ್ಯಮಗಳಿಂದ ಆಕ್ಷೇಪಾರ್ಹ ಪೋಸ್ಟ್ ಪ್ರಸಾರ ಮಾಡಿದ್ದರಿಂದ ಮತಾಂಧರು ಒಂದು ಹನುಮಾನ ದೇವಸ್ಥಾನವನ್ನು ಧ್ವಂಸಗೊಳಿಸಿದರು.
Stone-pelting at Hanuman Jayanti Shobha Yatra after procession passed near an Iftar gathering in a Mosque in Andhra Pradesh’s Kurnool https://t.co/vMoBSEq4yZ
— OpIndia.com (@OpIndia_com) April 17, 2022
ದೆಹಲಿಯಲ್ಲಿ ಮಸೀದಿಗಳ ಛಾವಣಿಯಿಂದ ಕಲ್ಲುತೂರಾಟ
೧. ಜಹಾಂಗೀರಪುರಿಯಲ್ಲಿ ಸಂಜೆ ಐದೂವರೆ ಗಂಟೆಗೆ ಸುಮಾರಾಗಿ ಮಸೀದಿಯ ಬಳಿಯಿಂದ ಶ್ರೀ ಹನುಮಾನ ಜಯಂತಿಯ ನಿಮಿತ್ತವಾಗಿ ನಡೆಸಲಾದ ಮೆರವಣಿಗೆಯು ಹೋಗುತ್ತಿರುವಾಗ ಅನ್ಸಾರ ಎಂಬ ಹೆಸರಿನ ಸ್ಥಳೀಯ ನೇತಾರನು ಹಿಂದೂಗಳೊಂದಿಗೆ ವಾದ ಮಾಡಿದನು. ಅನಂತರ ಮಸೀದಿಯ ಛಾವಣಿಯ ಮೇಲಿನಿಂದ ಕಲ್ಲುತೂರಾಟ ಮಾಡಲಾಯಿತು. ಇದರಿಂದಾಗಿ ಗೊಂದಲಕ್ಕೊಳಗಾದ ಹಿಂದೂಗಳು ಓಡಲು ಆರಂಭಿಸಿದಾಗ ಮತಾಂಧರು ಅವರನ್ನು ಬೆನ್ನಟ್ಟಿದರು. ಆಗ ಮತಾಂಧರ ಕೈಯಲ್ಲಿ ತಲವಾರ ಕೂಡ ಇದ್ದವು. ಈ ಸಂದರ್ಭದಲ್ಲಿನ ವಿಡಿಯೋಗಳು ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿವೆ.
14 held for Hanuman Jayanti violence in Delhi’s Jahangirpuri, 7 FIR’s filed | Track today’s latest news here: https://t.co/H7cGiq0t51 pic.twitter.com/AwCXQk5xMm
— Economic Times (@EconomicTimes) April 17, 2022
೨. ಮತಾಂಧರನ್ನು ತಡೆಯಲು ಪ್ರಯತ್ನಿಸಿದ ಪೊಲೀಸರ ಮೇಲೂ ಗೋಲಿಬಾರ್ ಮಾಡಲಾಯಿತು, ಹಾಗೆಯೇ ಅವರ ಮೇಲೂ ಕಲ್ಲುತೂರಾಟ ಮಾಡಲಾಯಿತು. ಇದರಲ್ಲಿ ೮ ಪೊಲೀಸರು ಗಾಯಗೊಂಡಿದ್ದಾರೆ. ಈ ಹಿಂಸಾಚಾರದಲ್ಲಿ ಅನೇಕ ವಾಹನಗಳನ್ನು ಸುಡಲಾಯಿತು.
೩. ಈ ಪ್ರಕರಣದಲ್ಲಿ ಪೊಲೀಸರು ೧೪ ಮತಾಂಧರನ್ನು ಬಂಧಿಸಿದ್ದಾರೆ. ಇದರಲ್ಲಿ ಗೋಲಿಬಾರ್ ಮಾಡಿದ ಅಸ್ಲಮನೊಂದಿಗೆ ಅನ್ಸಾರನೂ ಇದ್ದಾರೆ. ವಿಶೇಷವೆಂದರೆ ಅನ್ಸಾರನ ಮೇಲೆ ಈ ಮೊದಲೇ ಅಪರಾಧಗಳು ದಾಖಲಾಗಿವೆ. ಅಸ್ಲಮನಿಂದ ಗೋಲಿಬಾರಿಗಾಗಿ ಬಳಸಲಾದ ಪಿಸ್ತೂಲನ್ನು ಜಪ್ತು ಮಾಡಲಾಗಿದೆ. ಸದ್ಯ ಇಲ್ಲಿ ಪರಿಸ್ಥಿತಿಯು ನಿಯಂತ್ರಣಗಕ್ಕೆ ಬಂದಿದ್ದು ಒತ್ತಡಪೂರ್ಣ ವಾತಾವರಣವಿದೆ.
೪. ದಂಗೆಕೋರರ ವಿರುದ್ಧ ಕಠೋರ ಕಾರ್ಯಾಚರಣೆಯನ್ನು ಮಾಡಲಾಗುವುದು ಎಂದು ದೆಹಲಿಯ ಪೊಲೀಸ ಆಯುಕ್ತರಾದ ರಾಕೇಶ ಅಸ್ಥಾನಾರವರು ಎಚ್ಚರಿಕೆ ನೀಡಿದ್ದಾರೆ. ಈಗ ಪರಿಸ್ಥಿತಿಯು ನಿಯಂತ್ರಣದಲ್ಲಿದ್ದು ಜಹಾಂಗೀರಪುರಿಯೊಂದಿಗೆ ಇತರ ಸಂವೇದನಾಶೀಲ ಭಾಗಗಳಲ್ಲಿ ಪೊಲೀಸ ಸಹಾಯಕರನ್ನು ನೇಮಿಸಿರುವುದಾಗಿ ಅವರು ಹೇಳಿದರು.
೫. ಕೇಂದ್ರೀಯ ಗೃಹಮಂತ್ರಿ ಅಮಿತ ಶಹಾರವರು ಪೊಲೀಸ ಆಯುಕ್ತ ಅಸ್ಥಾನಾ ಮತ್ತು ವಿಶೇಷ ಪೊಲೀಸ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ರಾದ ದೀಪೇಂದ್ರ ಪಾಠಕರವರೊಂದಿಗೆ ಚರ್ಚಿಸಿ ಯೋಗ್ಯ ಕಾರ್ಯಾಚರಣೆಯನ್ನು ಮಾಡಲು ಸೂಚಿಸಿದ್ದಾರೆ.
ಉತ್ತರಾಖಂಡದಲ್ಲಿನ ಆಕ್ರಮಣದಲ್ಲಿ ಪೊಲೀಸರೊಂದಿಗೆ ೧೦ ಜನರು ಗಾಂಯಗೊಂಡಿದ್ದಾರೆ
ರುಡಕೀ (ಉತ್ತರಾಖಂಡ) – ಇಲ್ಲಿ ಶ್ರೀ ಹನುಮಾನ ಜಯಂತಿಯ ನಿಮಿತ್ತವಾಗಿ ನಡೆಸಲಾದ ಮೆರವಣಿಗೆಯು ಮುಸಲ್ಮಾನಬಹುಲ ಭಾಗದಿಂದ ಹೋಗುತ್ತಿರುವಾಗ ಮತಾಂಧರು ಅದರ ಮೇಲೆ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟ ಮಾಡಿದರು. ಇದರಲ್ಲಿ ಪೊಲೀಸರೊಂದಿಗೆ ೧೦ ಜನರು ಗಾಯಗೊಂಡರು.
ಡಾಡಾ ಜಲಾಲಪುರ ಊರಿನಲ್ಲಿ ಬಜರಂಗದಳದಿಂದ ಈ ಮೆರವಣಿಗೆ ನಡೆಸಲಾಗಿತ್ತು. ಊರಿನಲ್ಲಿರುವ ಮುಸಲ್ಮಾನಬಹುಲ ಭಾಗದಲ್ಲಿ ಈ ಮೆರವಣಿಗೆಯು ತಲುಪಿದಾಗ ಅಲ್ಲಿ ಕೆಲವು ಮನೆಗಳ ಛಾವಣಿಯಿಂದ ಕಲ್ಲುತೂರಾಟ ಮಾಡಲಾಯಿತು. ಇದರಿಂದ ಹಿಂದೂಗಳು ಗೊಂದಲಕ್ಕೀಡಾದರು. ಅನಂತರ ಮತಾಂಧರು ೨ ವಾಹನಗಳಿಗೆ ಬೆಂಕಿ ಹಚ್ಚಿದರು. ಅನಂತರ ಪೊಲೀಸರು ಬಲಪ್ರಯೋಗಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಕುರ್ನೂಲ (ಆಂಧ್ರಪ್ರದೇಶ)ದಲ್ಲಿ ಮಸೀದಿಯ ಬಳಿ ಮೆರವಣಿಗೆಯ ಮೇಲೆ ಆಕ್ರಮಣ
ಮೆರವಣಿಗೆಯಲ್ಲಿ ‘ಡಿಜೆ’ ಹಾಕುವುದಕ್ಕೆ ಮತಾಂಧರಿಂದ ವಿರೋಧ !
ಕುರ್ನೂಲ (ಆಂಧ್ರಪ್ರದೇಶ) – ಇಲ್ಲಿನ ಹೊಲಾಗುಠಾದಲ್ಲಿ ಶ್ರೀ ಹನುಮಾನ ಜಯಂತಿಯ ಮೆರವಣಿಗೆಯು ಮಸೀದಿಯ ಸಮೀಪದಿಂದ ಹೋಗುತ್ತಿರುವಾಗ ಅದರ ಮೇಲೆ ಮತಾಂಧರಿಂದ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟ ಮಾಡಲಾಯಿತು. ಇದರಲ್ಲಿ ೧೫ ಜನರು ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ೨೦ ಜನರನ್ನು ಬಂಧಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ತು ಈ ಮೆರವಣಿಗೆಯನ್ನು ಆಯೋಜಿಸಿತ್ತು. ಪೊಲೀಸರು ಮಸೀದಿಯ ಬಳಿ ಮೆರವಣಿಗೆಯನ್ನು ಒಯ್ಯುವಾಗ ಡಿಜೆ (ದೊಡ್ಡದಾದ ಸಂಗೀತ ವ್ಯವಸ್ಥೆ)ಯನ್ನು ನಿಲ್ಲಿಸಲು ಹೇಳಿದ್ದರು. ಅದರಂತೆಯೇ ಅದನ್ನು ಮಸೀದಿಯ ಬಳಿ ನಿಲ್ಲಿಸಲಾಗಿತ್ತು. (ಮಸೀದಿಯ ಎದುರು ಡಿಜೆ ಹಚ್ಚಲು ವಿರೋಧಿಸುವವರು ದಿನದಲ್ಲಿ ೫ ಬಾರಿ ಭೋಂಗಾದ ಮೂಲಕ ಕೇಳಿಸಲಾಗುವ ಆಜಾನನ್ನು ಹಿಂದೂಗಳು ಏಕೆ ಕೇಳಬೇಕು ? ಇಂತಹ ಭೋಂಗಾಗಳ ಮೇಲೆ ಕಾರ್ಯಾಚರಣೆಯನ್ನು ಮಾಡುವಾಗ ಪೊಲೀಸರು ಮಾತ್ರ ಬಾಲ ಮುದುಡಿ ಕುಳಿತಿರುತ್ತಾರೆ, ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು) ಮೆರವಣಿಗೆಯು ಮಸೀದಿಯಿಂದ ಸ್ವಲ್ಪ ಮುಂದೆ ಹೋದಾಗ ಮತಾಂಧರು ಅದನ್ನು ವಿರೋಧಿಸಿದರು ಮತ್ತು ಆಗ ವಾದವಿವಾದ ನಡೆಯಿತು. ಅನಂತರ ಮೆರವಣಿಗೆಯ ಮೇಲೆ ಕಲ್ಲುತೂರಾಟ ಆರಂಭವಾಯಿತು. ಅನಂತರ ಪೊಲೀಸರು ಲಾಠಿಚಾರ್ಜ ಮಾಡಿ ಎಲ್ಲರನ್ನೂ ಓಡಿಸಿದರು. ಸದ್ಯ ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸ ಬಂದೋಬಸ್ತಿ ಇಡಲಾಗಿದೆ.
ಹುಬ್ಬಳ್ಳಿ (ಕರ್ನಾಟಕ)ದಲ್ಲಿ ಕಥಿತ ಆಕ್ಷೇಪಾರ್ಹ ಪೋಸ್ಟ ಪ್ರಸಾರಿತವಾಗಿದ್ದರಿಂದ ಮತಾಂಧರಿಂದ ಶ್ರೀ ಹನುಮಾನ ದೇವಸ್ಥಾನ ಧ್ವಂಸ
ಪೊಲೀಸ ಠಾಣೆಯ ಮೇಲಿನ ಆಕ್ರಮಣದಲ್ಲಿ ೧೨ ಪೊಲೀಸರು ಗಾಯಗೊಂಡಿದ್ದಾರೆ
ಹುಬ್ಬಳ್ಳಿ (ಕರ್ನಾಟಕ) – ಇಲ್ಲಿನ ಹಳೆ ಹುಬ್ಬಳ್ಳಿ ನಗರದಲ್ಲಿ ಮತಾಂಧರು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾದ ಒಂದು ಪೋಸ್ಟನಿಂದ ಇಲ್ಲಿನ ಶ್ರೀಹನುಮಾನ ದೇವಸ್ಥಾನವನ್ನು ಧ್ವಂಸಗೊಳಿಸಿದರು. ಇದರೊಂದಿಗೆ ಒಂದು ಆಸ್ಪತ್ರೆಯ ಮೇಲೂ ಆಕ್ರಮಣ ಮಾಡಿದರು. ಇಲ್ಲಿನ ಹಳೆಯ ಪೊಲೀಸ ಠಾಣೆಯ ಮೇಲೂ ಆಕ್ರಮಣ ಮಾಡಲಾಯಿತು. ಇದರಲ್ಲಿ ಕೆಲವು ಪೊಲೀಸ ಅಧಿಕಾರಿಗಳೂ ಗಾಯಗೊಂಡಿದ್ದಾರೆ. ಇಲ್ಲಿ ಈಗ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
೧. ಏಪ್ರಿಲ್ ೧೬ರಂದು ದೊಡ್ಡ ಪ್ರಮಾಣದಲ್ಲಿ ಮತಾಂಧರ ಗುಂಪು ಪೊಲೀಸ ಠಾಣೆಯ ಹೊರಗೆ ಸೇರಿತು ಮತ್ತು ಅವರು ಸಾಮಾಜಿಕ ಮಾಧ್ಯಮಗಳಿಂದ ಆಕ್ಷೇಪಾರ್ಹ ಪೋಸ್ಟ ಮಾಡಿದವರನ್ನು ಬಂಧಿಸುವ ಬಗ್ಗೆ ಮನವಿ ಮಾಡಿದರು, ಹಾಗೆಯೇ ಕಲ್ಲುತೂರಾಟವನ್ನೂ ಮಾಡಿದರು. ಈ ಸಮಯದಲ್ಲಿ ಪೊಲೀಸರು ಲಾಠಿಚಾರ್ಜ ಮಾಡಿದರು ಹಾಗೆಯೇ ಅಶ್ರುವಾಯುವನ್ನು ಪ್ರಯೋಗಿಸಿ ಮತಾಂಧರನ್ನು ಓಡಿಸಲು ಪ್ರಯತ್ನಿಸಿದರು.
೨. ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತ ಲಾಭೂ ರಾಮ ಇವರು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ೧೦ ಜನರನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಸಾರ ಮಾಡಿದ ವ್ಯಕ್ತಿಯನ್ನೂ ಬಂಧಿಸಲಾಗಿದೆ. ಈ ದಾಳಿಯಲ್ಲಿ ೧೨ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಮತ್ತು ನಮ್ಮ ಕೆಲವು ವಾಹನಗಳಿಗೂ ಹಾನಿಯಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು.