ಧರ್ಮ ಸಂಸತ್ತಿನ ಅಸ್ತಿತ್ವದ ಚರ್ಚೆ, ಮುಸಲ್ಮಾನರ ವಿರುದ್ಧ ಭಾಷಣೆಯಿರಲಿಲ್ಲ ! – ಸರ್ವೋಚ್ಚ ನ್ಯಾಯಾಲದಲ್ಲಿ ದೆಹಲಿ ಪೊಲೀಸರ ಪ್ರತಿಜ್ಞಾಪತ್ರ

ಡಿಸೆಂಬರ ೧೯, ೨೦೨೧ ರಂದು ದೆಹಲಿಯಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ಸುದರ್ಶನ ವಾರ್ತಾವಾಹಿನಿಯ ಸಂಪಾದಕ ಅಧ್ಯಕ್ಷರಾದ ಸುರೇಶ ಚವ್ಹಾಣಕೆಯವರ ಮೇಲೆ ಮುಸಲ್ಮಾನರ ವಿರುದ್ಧ ದ್ವೇಷದ ಭಾಷಣೆ ಮಾಡಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರವನ್ನು ಸಲ್ಲಿಸಿದ್ದಾರೆ.

ವಿವೇಕ ಅಗ್ನಿಹೋತ್ರಿಯವರು ಇಗ ದೆಹಲಿ ಗಲಭೆ ಕುರಿತು ‘ದಿ ದೆಹಲಿ ಫೈಲ್ಸ’ ಚಲನಚಿತ್ರವನ್ನು ನಿರ್ಮಿಸಲಿದ್ದಾರೆ !

‘ದಿ ಕಾಶ್ಮೀರ ಫೈಲ್ಸ’ ಚಲನಚಿತ್ರದ ನಿರ್ದೇಶಕ ವಿವೇಕ ಅಗ್ನಿಹೋತ್ರಿಯವರು ಇಗ ದೆಹಲಿಯಲ್ಲಿ ೨೦೨೦ ರಲ್ಲಿ ನಡೆದ ಗಲಭೆ ಕುರಿತು ಚಲನಚಿತ್ರ ಮಾಡುವದರ ಕುರಿತು ಮಾಹಿತಿ ನೀಡಿದ್ದಾರೆ. ‘ದಿ ದೆಹಲಿ ಫೈಲ್ಸ’ ಎಂದು ಈ ಚಲನಚಿತ್ರದ ಹೆಸರು ಇರುವದೆಂದು ಅವರು ಹೇಳಿದ್ದಾರೆ.

ಕೇರಳದ ದೇವಸ್ಥಾನವೊಂದರಲ್ಲಿ ‘ಇಫ್ತಾರ್’ ಕೂಟ !

ಕೇರಳದ ಒಂದು ದೇವಸ್ಥಾನದಲ್ಲಿ ನಗರದ ಮುಸಲ್ಮಾನರಿಗಾಗಿ ಇಫ್ತಾರ್ ಕೂಟವನ್ನು ಆಯೋಜಿಸಿದೆ ಎಂದು ‘ದ ಹಿಂದೂ’ ಈ ಆಂಗ್ಲ ದಿನಪತ್ರಿಕೆ ವರದಿ ಮಾಡಿದೆ. ಈ ದೇವಾಲಯವು ಮಲಪ್ಪುರಂ ಜಿಲ್ಲೆಯ ತಿರೂರ್ ಬಳಿಯ ವಾಣಿಯನ್ನೂರಿನಲ್ಲಿದೆ.

‘ಹಿಂದೂಗಳು ಮುಸಲ್ಮಾನಬಹುಲ ಭಾಗಗಳಲ್ಲಿ ಹೋಗುತ್ತಿರುವುದರಿಂದ ಶ್ರೀರಾಮನವಮಿಯ ಮೆರವಣಿಗೆಯ ಮೇಲಿನ ಆಕ್ರಮಣಗಳಿಗೆ ಹಿಂದೂಗಳೇ ಜವಾಬ್ದಾರರಾಗಿದ್ದಾರೆ !’ (ಅಂತೆ)

ಭಾರತವು ಜಾತ್ಯಾತೀತ ದೇಶವಾಗಿದೆ, ಹೀಗಿರುವಾಗ ಸಂವಿಧಾನವು ಪ್ರತಿಯೊಂದು ಧರ್ಮದವರಿಗೆ ದೇಶದಲ್ಲಿ ಏಲ್ಲಿ ಬೇಕಾದರೂ ಹೋಗುವ ಸ್ವಾತಂತ್ರ‍್ಯವನ್ನು ನೀಡಿದೆ. ಹಿಂದೂಗಳು ಇದನ್ನು ಪಾಲಿಸುತ್ತಿದ್ದರೆ, ಅದರಲ್ಲಿ ತಪ್ಪೇನು ?

ಭಾರತ-ನೇಪಾಳ ಗಡಿಯ ಬಳಿ ಮದರಸಾ ಮತ್ತು ಮಸೀದಿಗಳ ಸಂಖ್ಯೆಯಲ್ಲಿ ಹೆಚ್ಚಳ !

ಕೇವಲ ಅಂಕಿಅಂಶವನ್ನು ಸಂಗ್ರಹಿಸಿ ಪ್ರಯೋಜನವಿಲ್ಲ, ಇಲ್ಲಿನ ಅನಧೀಕೃತ ಮಸೀದಿ ಮತ್ತು ಮದರಸಾಗಳ ಮೇಲೆ ತಕ್ಷಣ ಕಾರ್ಯಾಚರಣೆಯನ್ನು ಮಾಡಬೇಕು ! ‘ಇಂತಹ ಕಾನೂನುಬಾಹಿರ ನಿರ್ಮಾಣವಾಗುವ ವರೆಗೆ ಆಡಳಿತ ಹಾಗೂ ಗುಪ್ತಚರ ಇಲಾಖೆಯು ಏನು ಮಾಡುತ್ತಿತ್ತು ?’, ಇದರ ಬಗ್ಗೆಯೂ ಗಮನ ನೀಡುವುದು ಆವಶ್ಯಕವಾಗಿದೆ !

ದೇಶದಲ್ಲಿನ ೮ ನಗರಗಳಲ್ಲಿ ೨೦೦೫ರಿಂದ ೨೦೧೮ರ ಸಮಯದಲ್ಲಿ ವಾಯುಮಾಲಿನ್ಯದಿಂದಾಗಿ ೧ ಲಕ್ಷ ಜನರ ಮೃತ್ಯು !

ಒಂದು ಅಂತರಾಷ್ಟ್ರೀಯ ಅಧ್ಯಯನದ ಅನುಸಾರ ಭಾರತದಲ್ಲಿ ೨೦೦೫ ರಿಂದ ೨೦೧೮ರ ವರೆಗೆ ೮ ನಗರಗಳಲ್ಲಿ ವಾಯುಮಾಲಿನ್ಯದಿಂದಾಗಿ ೧ ಲಕ್ಷ ಜನರು ಅಕಾಲಿಕ ಮರಣವಾಗಿದೆ. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ‘ನಾಸಾ’ ಮತ್ತು ಯುರೋಪಿನ ಬಾಹ್ಯಾಕಾಶ ವ್ಯವಸ್ಥೆಯಿಂದ ದೊರೆತ ಮಾಹಿತಿಯಿಂದಾಗಿ ಈ ಅಧ್ಯಯನವನ್ನು ಮಾಡಲಾಗಿದೆ.

ಕೊರೋನಾ ಮುಗಿದಿಲ್ಲ, ಅದು ಯಾವಾಗ ಬೇಕಾದರೂ ಮತ್ತೆ ಬರಬಹುದು ! – ಪ್ರಧಾನಿ ಮೋದಿ

ಕೊರೋನ ಒಂದು ದೊಡ್ಡ ಸಂಕಟವಾಗಿತ್ತು ಮತ್ತು ಆ ಸಂಕಟ ಮುಗಿದಿದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಇಗ ಅದು ಇಲ್ಲದಿದ್ದರೂ ಕೂಡಾ ‘ಅದು ಪುನಃ ಯಾವಾಗ ಬರುತ್ತದೋ’, ನಮಗೆ ಗೊತ್ತಿಲ್ಲ. ಇದೊಂದು ‘ಬಹುರೂಪ’ ಹೊಂದುವ ರೋಗವಾಗಿದೆ.

ರಾಮನವಮಿಯ ಮೆರವಣಿಗೆಯ ಮೇಲೆ ದೇಶದಲ್ಲಿನ ೫ ರಾಜ್ಯಗಳಲ್ಲಿ ಮತಾಂಧರಿಂದ ಆಕ್ರಮಣಗಳು !

ಹಿಂದೂಗಳ ದೇಶದಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗಳ ಮೇಲೆ ಆಕ್ರಮಣ ಮಾಡುವ ಧೈರ್ಯವನ್ನು ಕಳೆದ ವರ್ಷಗಳಿಂದ ತೋರಿಸಲಾಗುತ್ತಿದೆ. ಈ ಸ್ಥಿತಿಯನ್ನು ಬದಲಾಯಿಸಲು ಈಗ ಹಿಂದೂಗಳು ಯುದ್ಧದ ಮಟ್ಟದಲ್ಲಿ ಕಾನೂನುಬದ್ಧ ಮಾರ್ಗದಲ್ಲಿ ಪ್ರಯತ್ನಿಸಬೇಕಿದೆ. ಇನ್ನು ಮುಂದೆ ಮತಾಂಧರು ಇಂತಹ ಧೈರ್ಯ ತೋರಿಸಬಾರದು, ಅಂತಹ ಸ್ಥಿತಿಯನ್ನು ನಿರ್ಮಿಸಬೇಕಿದೆ !

ಕುತುಬಮಿನಾರ ಪ್ರಾಚೀನ ವಿಷ್ಣು ದೇವಸ್ಥಾನದ ‘ಗರುಡ ಸ್ಥಂಭ’ವಾಗಿದ್ದರಿಂದ ಅದನ್ನು ಹಿಂದೂಗಳಿಗೆ ಒಪ್ಪಿಸಬೇಕು !- ವಿಶ್ವ ಹಿಂದೂ ಪರಿಷತ್ತು

ಇಲ್ಲಿನ ಕುತುಬಮಿನಾರಿನ ಪರಿಸರದಲ್ಲಿರುವ ಶ್ರೀ ಗಣೇಶನ ಮೂರ್ತಿಯನ್ನು ಸ್ಥಳಾಂತರಿಸಿ ಅಲ್ಲಿ ಸಂಗ್ರಹಾಲಯವನ್ನು ಇಡುವ ಬಗ್ಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೆಲವು ಪದಾಧಿಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿದರು.

ದೇಶದ ೭೭೫ ಜಿಲ್ಲೆಗಳ ಪೈಕಿ ೧೦೨ ಜಿಲ್ಲೆಗಳಲ್ಲಿ ಹಿಂದೂ ಅಲ್ಪಸಂಖ್ಯಾತರು !

ಎಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಅಲ್ಲಿ ರಾಜ್ಯ ಸರಕಾರ ಅವರನ್ನು ಅಲ್ಪಸಂಖ್ಯಾತರೆಂದು ಘೋಷಿಸಬಹುದು ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜಿಲ್ಲಾವಾರು ಜನಸಂಖ್ಯೆಯನ್ನು ಗಮನಿಸಿದರೆ ದೇಶದ ೧೦೨ ಜಿಲ್ಲೆಗಳಲ್ಲಿ ಹಿಂದೂ ಅಲ್ಪಸಂಖ್ಯಾತರಿದ್ದಾರೆ.