ಹಿಂದೂ ಸೇನೆಯು ಜೇ.ಎನ್.ಯುವಿನ ಹೊರಗೆ ಭಗವಾ ಧ್ವಜ ಹಾಗೂ ‘ಭಗವಾ ಜೇಎನ್ಯೂ’ ಎಂದು ಬರೆದಿರುವ ಭಿತ್ತಿಪತ್ರಕವನ್ನು ಹಚ್ಚಿತು !

ನವದೆಹಲಿ – ಇಲ್ಲಿನ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ (‘ಜೇಎನ್ಯೂ’ವಿನಲ್ಲಿ) ಶ್ರೀರಾಮನವಮಿಯ ದಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಮತ್ತು ಸಾಮ್ಯವಾದಿ ವಿದ್ಯಾರ್ಥಿ ಸಂಘಟನೆಗಳ ವಿದ್ಯಾರ್ಥಿಗಳಲ್ಲಿ ಪೂಜೆ ಮತ್ತು ಮಾಂಸಾಹಾರದ ಬಗ್ಗೆ ಹೊಡೆದಾಟ ನಡೆದಿತ್ತು. ಈ ಹಿನ್ನೆಲೆಯಲ್ಲಿ ಈಗ ಜೇಎನ್ಯೂವಿನ ಹೊರಗೆ ರಸ್ತೆಯ ಮೇಲೆ ಮತ್ತು ಮುಖ್ಯ ಪ್ರವೇಶದ್ವಾರದ ಬಳಿ ಭಗವಾ ಧ್ವಜ ಮತ್ತು ಭಿತ್ತಿಪತ್ರಕಗಳನ್ನು ಹಚ್ಚಲಾಗಿದೆ. ಈ ಭಿತ್ತಿಪತ್ರಕಗಳ ಮೇಲೆ ‘ಭಗವಾ ಜೇಎನ್ಯೂ’ ಎಂದು ಬರೆಯಲಾಗಿದೆ. ಈ ಭಿತ್ತಿಪತ್ರಕಗಳು ಮತ್ತು ಧ್ವಜವನ್ನು ಹಿಂದೂ ಸೇನೆಯು ಹಚ್ಚಿದೆ ಎಂದು ಹೇಳಲಾಗುತ್ತಿದೆ.

೧. ಈ ಪ್ರಕರಣದಲ್ಲಿ ಹಿಂದೂ ಸೇನೆಯ ಉಪಾಧ್ಯಕ್ಷರಾದ ಸುರಜಿತ ಯಾದವರವರು ಮಾತನಾಡುತ್ತ, ಜೇಎನ್ಯೂವಿನಲ್ಲಿ ವಿರೋಧಕರಿಂದ ಭಗವಾದ ಅಪಮಾನ ಮಾಡಲಾಗಿತ್ತು. ಈ ಜನರು ಸುಧಾರಿಸಬೇಕು. ಭಗವಾದ ಅಪಮಾನ ಮಾಡುವ ಪ್ರಯತ್ನ ಮಾಡಬಾರದು. ನಾವು ನಿಮ್ಮನ್ನು ಗೌರವಿಸುತ್ತೇವೆ. ಪ್ರತಿಯೊಂದು ಧರ್ಮದ ಮತ್ತು ವಿಚಾರಗಳನ್ನು ಗೌರವಿಸಿ. ಕೇಸರಿ ಬಣ್ಣದ ಆಗುತ್ತಿರುವ ಅಪಮಾನವನ್ನು ಹಿಂದೂ ಸೇನೆಯು ಸಹಿಸುವುದಿಲ್ಲ’ ಎಂದು ಹೇಳಿದರು.

೨. ಈ ವಿಷಯದಲ್ಲಿ ದೆಹಲಿ (ದಕ್ಷಿಣ ಪಶ್ಚಿಮ) ವಿಭಾಗದ ಪೊಲೀಸ ಉಪಾಯುಕ್ತರಾದ ಮನೋಜ ಸಿ. ಯವರು ಮಾತನಾಡುತ್ತ, ಜೇಎನ್ಯೂವಿನ ಅಕ್ಕಪಕ್ಕದ ರಸ್ತೆಯಲ್ಲಿ ಅನೇಕ ಧ್ವಜಗಳು ಮತ್ತು ಭಿತ್ತಿಪತ್ರಕಗಳನ್ನು ಹಚ್ಚಲಾಗಿರುವುದು ನಮಗೆ ಕಂಡುಬಂದಿತು. ಅವುಗಳನ್ನು ತಕ್ಷಣ ತೆಗೆದುಹಾಕಲಾಯಿತು ಮತ್ತು ಯೋಗ್ಯ ಕಾನುನುಬದ್ಧ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ’ ಎಂದು ಹೇಳಿದರು.