ಯಾರಿಗೆ ‘ದ ಕಶ್ಮೀರ ಫೈಲ್ಸ’ ಭೂತಕಾಲವೆಂದು ಅನಿಸುತ್ತದೆಯೋ, ಅವರು ದೆಹಲಿಯಲ್ಲಾದ ಗಲಭೆಯನ್ನು ನೋಡಲಿ !

ಜಾತ್ಯತೀತರ ಮೇಲೆ ನಿರ್ದೇಶಕ ವಿವೇಕ ಅಗ್ನಿಹೋತ್ರಿಯವರಿಂದ ತೀಕ್ಷ್ಣ ಟೀಕೆ

ಮುಂಬಯಿ – ಯಾರಿಗೆ ‘ದ ಕಶ್ಮೀರ ಫೈಲ್ಸ’ ಚಲನಚಿತ್ರ ಕಾಶ್ಮೀರದ ಭೂತಕಾಲವಾಗಿತ್ತು’, ಎಂದು ಅನಿಸುತ್ತಿದೆಯೋ, ಅದು ಅವರ ತಪ್ಪು. ಅದು ಕೇವಲ ಭಾರತದ ಭವಿಷ್ಯದ ‘ಸಂಕ್ಷಿಪ್ತ ಭಾಗ’ (ಟ್ರೇಲರ)ವಾಗಿದೆ. ಹನುಮಾನ ಜಯಂತಿಯ ಮೆರವಣಿಗೆಯ ಪುರಾವೆಯನ್ನು ನೋಡಿ, ಎಂದು ಟ್ವಿಟ ಮಾಡಿ ‘ದ ಕಶ್ಮೀರ ಪೈಲ್ಸ’ ಚಲನಚಿತ್ರದ ನಿರ್ದೇಶಕರಾದ ವಿವೇಕ ಅಗ್ನಿಹೋತ್ರಿಯವರು ದೆಹಲಿಯ ಜಹಾಂಗೀರಪುರಿಯಲ್ಲಿ ಮತಾಂಧರು ನಡೆಸಿದ ಗಲಭೆಯ ವಿಡಿಯೋ ಅನ್ನು ಪ್ರಸಾರ ಮಾಡಿದ್ದಾರೆ. ಅಲ್ಲಿ ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲುತೂರಾಟ ನಡೆಸಲಾಗಿತ್ತು ಹಾಗೂ ಮತಾಂಧರು ಬಂದೂಕು ಮತ್ತು ಖಡ್ಗ ಹಿಡಿದುಕೊಂಡು ಹಿಂದೂಗಳ ಮೇಲೆ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ್ದರು.

೧. ವಿವೇಕ ಅಗ್ನಿಹೋತ್ರಿಯವರ ಈ ಟ್ವಿಟನ ಮೇಲೆ ಹಲವರು ಟ್ವಿಟ್ಸ ಮಾಡಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ. ಓರ್ವ ಹಿಂದು ವ್ಯಕ್ತಿಯು, ‘ನಮ್ಮ ಮೇಲೆ ನಡೆಯುವ ದಾಳಿಗೆ ನಮ್ಮ ಭಯ, ಜಾತಿವಾದ, ಸ್ವಾರ್ಥ ಹಾಗೂ ಲೋಭವೇ ಹೊಣೆ. ನಾವು ಕೇವಲ ನಮ್ಮ ಬಗ್ಗೆಯಷ್ಟೇ ವಿಚಾರ ಮಾಡುತ್ತೇವೆ. ಜಿಹಾದಿಗಳು ತಮ್ಮ ಪಂಥಕ್ಕಾಗಿ ಹಾಗೂ ಅದರೊಂದಿಗೆ ಸಂಬಂಧಪಟ್ಟ ಜನರ ಬಗ್ಗೆ ವಿಚಾರ ಮಾಡುತ್ತಾರೆ. ನಮಗೆ ಪೂಜೆ ಮಾಡಿದರೂ ಕೂಡ ನಾಚಿಕೆಯೆನಿಸುತ್ತದೆ; ಆದರೆ ದರ್ಗಾಗೆ ಹೋಗಿ ಕಂಬಳಿ ಹೊದಿಸುವುದು ‘ಫ್ಯಾಷನ್’ ಆಗಿದೆ. ಅದರ ಪರಿಣಾಮವೆಂದರೆ ಈ ರೀತಿಯ ದಾಳಿಯಾಗಿದೆ. ಎಂದು ಹೇಳಿದರು.

೨. ಮತ್ತೊಬ್ಬ ಹಿಂದುವು, ಭಾರತವನ್ನು ಹಿಂದು ರಾಷ್ಟ್ರವೆಂದು ಘೋಷಿಸಿದರೆ ಕಟ್ಟರುವಾದವು ತನ್ನಿಂದ ತಾನೇ ನಷ್ಟವಾಗುವುದು ಎಂದು ಹೇಳಿದರು.