ರೈಲು-ಬಸ್‌ಗಳಿಗೆ ಬೆಂಕಿ ಹಚ್ಚಿ, ದಂಗೆ ಮಾಡಿ, ಸಾಯಿರಿ ! – ಕಾಂಗ್ರೆಸ್ ನಾಯಕ ಅಹ್ಮದ್ ಖಾನ್ ಪ್ರಚೋದನಕಾರಿ ವಿಡಿಯೋ ವೈರಲ್!

ದಾವಣಗೆರೆ (ಕರ್ನಾಟಕ) – ವಕ್ಫ್ ಕಾಯ್ದೆಯ ಸುಧಾರಣೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೇವಲ ಪ್ರತಿಭಟನೆ ಮಾಡುವುದರಿಂದ, ಫಲಕಗಳನ್ನು ಹಿಡಿದು ತಿರುಗಾಡುವುದರಿಂದ ಏನೂ ಆಗುವುದಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೆ ಬೇಡಿಕೆಗಳು ಈಡೇರುವುದಿಲ್ಲ. ಎಲ್ಲರೂ ಬೀದಿಗಿಳಿಯಬೇಕು. ಈ ಕಾಯ್ದೆಯನ್ನು ವಿರೋಧಿಸಿ ರೈಲು ಮತ್ತು ಬಸ್‌ಗಳಿಗೆ ಬೆಂಕಿ ಹಚ್ಚಿ, ದಂಗೆ ಮಾಡಿ, ದಾಂಧಲೆ ಮಾಡಿ, ಸಾಯಿರಿ ಎಂದು ದಾವಣಗೆರೆ ಮಹಾನಗರ ಪಾಲಿಕೆಯ ಕಾಂಗ್ರೆಸ್‌ನ ಮಾಜಿ ನಗರಸೇವಕ ಅಹ್ಮದ್ ಕಬೀರ್ ಅಲಿಯಾಸ್ ಅಹ್ಮದ್ ಖಾನ್ ವಕ್ಫ್ ಕಾನೂನನ್ನು ವಿರೋಧಿಸಿ ಪ್ರಚೋದನಕಾರಿ ಕರೆ ನೀಡಿದ್ದಾರೆ. ಅವರ ಈ ಭಾಷಣದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಬಗ್ಗೆ ಆಜಾದ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ವಕ್ಫ್ ಸುಧಾರಣೆ ಕಾನೂನನ್ನು ವಿರೋಧಿಸುವ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ಅವರ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದು ಯಾವಾಗ ? ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಈ ಕಾನೂನಿನಿಂದ ಹಿಂಸಾಚಾರಕ್ಕೆ ಇಳಿದಂತೆ, ಕರ್ನಾಟಕದಲ್ಲೂ ಹಿಂಸಾಚಾರವಾದರೆ ಆಶ್ಚರ್ಯವೇನಿಲ್ಲ!