ವಕ್ಫ್ ಸುಧಾರಣಾ ಕಾಯ್ದೆ ಅಸ್ತಿತ್ವಕ್ಕೆ ಬಂದ ನಂತರದ ಮೊದಲ ಪ್ರಕರಣ
ಭೋಪಾಲ (ಮಧ್ಯಪ್ರದೇಶ) – ಪನ್ನಾ ಜಿಲ್ಲೆಯಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಮದರಸಾವನ್ನು ಕೆಡವಿದ್ದಾರೆ. ವಕ್ಫ್ ಸುಧಾರಣಾ ಕಾಯ್ದೆ ಜಾರಿಗೆ ಬಂದ ನಂತರದ ಇದು ಮೊದಲ ಘಟನೆಯಾಗಿದೆ. ಭಾಜಪ ರಾಜ್ಯಾಧ್ಯಕ್ಷ ವಿ.ಡಿ. ಶರ್ಮಾ ಅವರಿಗೆ ಸ್ಥಳೀಯ ಮುಸ್ಲಿಂ ವ್ಯಕ್ತಿಯೊಬ್ಬರು ಈ ಅಕ್ರಮ ಮದರಸಾ ವಿರುದ್ಧ ದೂರು ನೀಡಿದ್ದರು. ನಂತರ ಆಡಳಿತ ಮಂಡಳಿಯು ಮದರಸ ನಡೆಸುವವರಿಗೆ ನೋಟಿಸ್ ಕಳುಹಿಸಿತ್ತು. ನಂತರ ಮದರಸಾದ ನಿರ್ವಾಹಕರು ತಾವೇ ಅದನ್ನು ಕೆಡವಿದರು.
1. ಪನ್ನಾದ ಬಿ.ಡಿ. ಸಂಕೀರ್ಣದಲ್ಲಿ 30 ವರ್ಷಗಳ ಹಿಂದೆ ಯಾವುದೇ ಅನುಮತಿ ಪಡೆಯದೆ ಈ ಮದರಸಾವನ್ನು ನಿರ್ಮಿಸಲಾಗಿತ್ತು. ಜನರು ಹಲವು ಬಾರಿ ಸೂಚನೆ ನೀಡಿದ್ದರೂ ಮದರಸಾ ನಿರ್ವಾಹಕರು ಈ ಮದರಸಾವನ್ನು ಮುಚ್ಚಲಿಲ್ಲ.
2. ವಕ್ಫ್ ಸುಧಾರಣಾ ಕಾಯ್ದೆ ಅಸ್ತಿತ್ವಕ್ಕೆ ಬಂದ ನಂತರ ಕಾಯ್ದೆಯ ಪ್ರಕಾರ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಆಡಳಿತ ಮಂಡಳಿ ನೀಡಿತ್ತು. ಆ ಭಯದಿಂದ ಮದರಸಾ ನಿರ್ವಾಹಕರು ಬುಲ್ಡೋಜರ್ ಬಳಸಿ ಮದರಸಾವನ್ನು ಕೆಡವಿದರು.
3. ಸ್ಥಳೀಯ ಜನರ ಅಭಿಪ್ರಾಯದಂತೆ ಈ ಮದರಸಾವನ್ನು ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ. ಇದರ ಸುತ್ತಮುತ್ತ ವಾಸಿಸುವ ಜನರು ಮತ್ತು ಸಾಮಾಜಿಕ ಕಾರ್ಯಕರ್ತರು ಬಹಳ ಕಾಲದಿಂದಲೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು; ಆದರೆ ದೂರು ನೀಡಿದರೂ ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳಲಿಲ್ಲ. (ಮಧ್ಯಪ್ರದೇಶದಲ್ಲಿ ಹಲವು ವರ್ಷಗಳಿಂದ ಭಾಜಪ ಸರಕಾರವಿದ್ದರೂ ಇಂತಹ ಪರಿಸ್ಥಿತಿ ಇರಬಾರದಿತ್ತು ಎಂದು ಜನರಿಗೆ ಅನಿಸುತ್ತಿದೆ! – ಸಂಪಾದಕರು)
4. ಮದರಸಾ ನಿರ್ವಾಹಕರ ಪ್ರಕಾರ ಈ ಮದರಸಾವನ್ನು ನಿರ್ಮಿಸಲು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯಲಾಗಿತ್ತು; ಆದರೆ ಈಗ ಈ ಪ್ರದೇಶವು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ನಿರ್ಮಾಣವನ್ನು ಅಕ್ರಮವೆಂದು ಪರಿಗಣಿಸಲಾಗುತ್ತಿತ್ತು. (ಮತಾಂಧ ಮುಸ್ಲಿಮರ ಈ ಸ್ಪಷ್ಟೀಕರಣವನ್ನು ಯಾರು ನಂಬುತ್ತಾರೆ? – ಸಂಪಾದಕರು)
ಸಂಪಾದಕೀಯ ನಿಲುವು30 ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ಅಕ್ರಮ ಮದರಸಾ ನಡೆಯುತ್ತಿದ್ದರೂ ಆಡಳಿತ ಮಂಡಳಿ ನಿದ್ರಿಸುತ್ತಿದೆಯೇ? |