|
ಗುನಾ (ಮಧ್ಯಪ್ರದೇಶ) – ಇಲ್ಲಿ ಏಪ್ರಿಲ್ 12 ರಂದು ಹನುಮಾನ ಜಯಂತಿಯ ನಿಮಿತ್ತ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಕರ್ನಲಗಂಜ ಪ್ರದೇಶದಲ್ಲಿ ಮಸೀದಿಯ ಮುಂದೆ ಡಿಜೆ ಜಾಕಿದ್ದರಿಂದ ಮುಸಲ್ಮಾನರು ಮಸೀದಿಯಿಂದ ಮೆರವಣಿಗೆಯ ಮೇಲೆ ದಾಳಿ ನಡೆಯಿತು. ಈ ಸಮಯದಲ್ಲಿ ಮಸೀದಿಯಿಂದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡಲಾಯಿತು. ಇದರಲ್ಲಿ ಅನೇಕ ಹಿಂದೂಗಳು ಗಾಯಗೊಂಡರು. ಪ್ರಸ್ತುತ ಇಲ್ಲಿ ಉದ್ವಿಗ್ನತೆಯಿಂದ ಕೂಡಿದ ಶಾಂತಿ ನೆಲೆಸಿದೆ. ಈ ಮೆರವಣಿಗೆಯನ್ನು ಭಾಜಪ ನಗರಸೇವಕ ಗಬ್ಬರ ಕುಶ್ವಾಹ ಅವರು ಆಯೋಜಿಸಿದ್ದರು. ಈ ದಾಳಿಯಲ್ಲಿ ಸ್ವತಃ ಕುಶ್ವಾಹ ಮತ್ತು ಅವರ ಮಗ ಸೇರಿದಂತೆ ಅನೇಕ ಹಿಂದೂಗಳು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುನಾದ ಪೊಲೀಸ ವರಿಷ್ಠಾಧಿಕಾರಿ ಸಂಜೀವ ಕುಮಾರ ಸಿನ್ಹಾ ಅವರು ಮಾತನಾಡಿ, ಈ ಮೆರವಣಿಗೆಯನ್ನು ಅನುಮತಿ ಇಲ್ಲದೆ ನಡೆಸಲಾಗಿತ್ತು. ಮೆರವಣಿಗೆ ಕರ್ನಲಗಂಜ ಮಸೀದಿಯ ಬಳಿ ಹೋಗುತ್ತಿದ್ದಾಗ 2 ಗುಂಪುಗಳ ನಡುವೆ ಘೋಷಣೆಗಳು ನಡೆದವು. ಕಲ್ಲು ತೂರಾಟವೂ ನಡೆದಿದೆ ಎಂದು ತಿಳಿದುಬಂದಿದೆ, ಇದರಲ್ಲಿ ಕೆಲವರು ಗಾಯಗೊಂಡಿದ್ದಾರೆ. ಮಾಹಿತಿ ದೊರೆತ ತಕ್ಷಣ ಪೊಲೀಸರನ್ನು ಕಳುಹಿಸಲಾಯಿತು. 15 ರಿಂದ 20 ನಿಮಿಷಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಚಿತ್ರೀಕರಣದ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದೆ. ಪರಿಸ್ಥಿತಿ ಸಾಮಾನ್ಯವಾಗಿದೆ. ಸಾರ್ವಜನಿಕರು ವದಂತಿಗಳಿಗೆ ಗಮನ ಕೊಡಬಾರದು ಎಂದು ಹೇಳಿದರು, ಎಂದು ಹೇಳಿದರು.
ಹಿಂದೂ ಸಂಘಟನೆಗಳಿಂದ ಪೊಲೀಸ ಠಾಣೆಗೆ ಮುತ್ತಿಗೆ
ದಾಳಿಯ ಘಟನೆಯಿಂದ ಆಕ್ರೋಶಗೊಂಡ ಹಿಂದೂ ಸಂಘಟನೆಗಳು ಮತ್ತು ಸ್ಥಳೀಯ ಹಿಂದೂಗಳು ಕರ್ನಲಗಂಜ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು ಹಾಗೂ ನಗರ ಪೊಲೀಸ ಠಾಣೆಗೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿದರು. ಕಲ್ಲು ತೂರಾಟ ನಡೆಸಿದ ಮುಸಲ್ಮಾನರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.
ತಾಜಿಯಾ ಸಮಿತಿಯ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲು
ಭಾಜಪ ನಗರಸೇವಕ ಗಬ್ಬರ ಕುಶ್ವಾಹ ಅವರು ನಗರ ಪೊಲೀಸ ಠಾಣೆಯಲ್ಲಿ ಮತಾಂಧ ಮುಸಲ್ಮಾನರ ವಿರುದ್ಧ ದೂರು ದಾಖಲಿಸಿದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ತಾಜಿಯಾ (ಒಬ್ಬ ಮುಸಲ್ಮಾನ ಧರ್ಮಗುರುವಿನ ಸಮಾಧಿಯ ಪ್ರತಿಕೃತಿ. ಇದನ್ನು ಅನೇಕ ವಿಧಗಳಲ್ಲಿ ಮತ್ತು ಆಕಾರಗಳಲ್ಲಿ ತಯಾರಿಸಲಾಗುತ್ತದೆ) ಸಮಿತಿಯ ಅಧ್ಯಕ್ಷ ಯೂಸುಫ ಖಾನ ಮತ್ತು ಇತರರ ಮೇಲೆ ಕಲ್ಲು ತೂರಾಟ ಮತ್ತು ಗಲಭೆ ಪ್ರಚೋದಿಸಿದ ಆರೋಪ ಮಾಡಲಾಗಿದೆ.
ಸಂಪಾದಕೀಯ ನಿಲುವು
|