Khalid Hanafi On Non-Muslims : ಹಿಂದೂ, ಸಿಖ್ಖರು ಹಾಗೂ ಮುಸ್ಲಿಮೇತರರು ಪ್ರಾಣಿಗಿಂತ ಕಡೆ ! – ತಾಲಿಬಾನ್ ಸಚಿವ

ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದ ಸಚಿವರ ಹೇಳಿಕೆ

ಖಾಲಿದ್ ಹನಾಫಿ

ಕಾಬೂಲ್ (ಅಫ್ಘಾನಿಸ್ತಾನ) – ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದ ಮಂತ್ರಿ ಖಾಲಿದ್ ಹನಾಫಿ, “ಹಿಂದೂ, ಸಿಖ್ ಮುಂತಾದ ಮುಸ್ಲಿಮೇತರರು ಪ್ರಾಣಿಗಿಂತ ಕಡೆ” ಎಂದು ಹೇಳಿಕೆ ನೀಡಿದ್ದಾನೆ. ಹನಾಫಿಯೇ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗಗಳನ್ನು ನಿಷೇಧಿಸುವ ಘೋಷಣೆಯನ್ನು ಮಾಡಿದ್ದನು.

ಈ ವಿಷಯದ ಕುರಿತು, ಬ್ರಿಟನ್‌ನಲ್ಲಿರುವ ಅಫ್ಘಾನ್ ಸಿಖ್ ಮತ್ತು ಹಿಂದೂ ವಲಸಿಗರ ಪ್ರತಿನಿಧಿಯು ಖಾಲಿದ್ ಹನಾಫಿಯ ಹೇಳಿಕೆಯನ್ನು ಖಂಡಿಸಿ, “ಯಾರಿಗೂ ಇನ್ನೊಂದು ಧರ್ಮವನ್ನು ಅವಮಾನಿಸುವ ಹಕ್ಕಿಲ್ಲ ಮತ್ತು ಈ ರೀತಿಯ ಹೇಳಿಕೆಗಳು ಅಫ್ಘಾನಿಸ್ತಾನದಲ್ಲಿ ಉಳಿದಿರುವ ಸಿಖ್ ಮತ್ತು ಹಿಂದೂಗಳಿಗೆ ಹೆಚ್ಚಿನ ಅಪಾಯವನ್ನುಂಟುಮಾಡಬಹುದು. ಅನೇಕ ಜನರು ತಮ್ಮ ಸುರಕ್ಷತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಭಯದಿಂದ ದೇಶವನ್ನು ತೊರೆಯುವಂತೆ ಒತ್ತಾಯಿಸಬಹುದು” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ತಾಲಿಬಾನ್‌ನಿಂದ ಇದಕ್ಕಿಂತ ಬೇರೆ ಯಾವ ನಿರೀಕ್ಷೆ ಇರಲು ಸಾಧ್ಯ? ಭಾರತದಲ್ಲಿ ಮುಸ್ಲಿಮರ ಮೇಲೆ ದಾಳಿಯಾಗುತ್ತಿದೆ ಎಂದು ಟೀಕಿಸುವ ಇಸ್ಲಾಮಿಕ್ ದೇಶಗಳ ಸಂಘಟನೆಗಳು ಈ ಬಗ್ಗೆ ಮೌನವಾಗಿರುವುದು ಏಕೆ?