Bengal Hindus Run Away : ಬಂಗಾಳದಲ್ಲಿ ೪೦೦ ಕ್ಕಿಂತಲೂ ಹೆಚ್ಚಿನ ಹಿಂದುಗಳ ಪಲಾಯನ !

  • ಇಲ್ಲಿಯವರೆಗೆ ೩ ಹಿಂದುಗಳ ಹತ್ಯೆ

  • ಮನೆಗಳು, ಅಂಗಡಿಗಳು ಲೂಟಿ ಮತ್ತು ಬೆಂಕಿ ಹಚ್ಚುತ್ತಿರುವುದರಿಂದ ಹಿಂದುಗಳು ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ

ಮುರ್ಷಿದಾಬಾದ (ಬಂಗಾಳ) – ಮತಾಂಧ ಮುಸಲ್ಮಾನರು ವಕ್ಫ್ ಸುಧಾರಣೆ ಕಾನೂನಿನಿಂದ ಕಳೆದ ಕೆಲವು ದಿನಗಳಿಂದ ಹಿಂಸಾಚಾರ ಆರಂಭಿಸಿದ್ದಾರೆ. ಇದರಲ್ಲಿ ಇಲ್ಲಿಯವರೆಗೆ ೩ ಹಿಂದೂಗಳ ಹತ್ಯೆ ಮಾಡಲಾಗಿದೆ. ಅವರಿಂದ ಅನೇಕ ಹಿಂದುಗಳ ಮನೆಗಳು, ಅಂಗಡಿಗಳು ಲೂಟಿ ಮಾಡಲಾಗಿದೆ ಮತ್ತು ಅವುಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಹೆದರಿರುವ ೪೦೦ ಕ್ಕಿಂತಲೂ ಹೆಚ್ಚಿನ ಹಿಂದುಗಳು ಅಲ್ಲಿಂದ ಪಲಾಯನ ಮಾಡಿದ್ದಾರೆ. ಹಾಗೂ ಅನೇಕರು ಬೇರೆ ಗ್ರಾಮದ ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಪ್ರಸ್ತುತ ಕೋಲಕಾತಾ ಉಚ್ಚ ನ್ಯಾಯಾಲಯದ ಆದೇಶದ ನಂತರ ಗಡಿ ಭದ್ರತಾ ಪಡೆಯ ಸೈನಿಕರು ಹಾಗೂ ಒಂದು ಸಾವಿರ ಪೋಲಿಸರ ಬಂದೋಬಸ್ತ್ ಮಾಡಲಾಗಿದೆ. ಇದರ ಜೊತೆಗೆ ಹಿರಿಯ ಅಧಿಕಾರಿಗಳನ್ನು ಅಲ್ಲಿ ನೇಮಕಗೊಳಿಸಲಾಗಿದೆ. (ಉಚ್ಚ ನ್ಯಾಯಾಲಯವು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಆದೇಶ ನೀಡಬೇಕಾಗುತ್ತದೆ, ಇದು ರಾಜ್ಯ ಸರಕಾರಕ್ಕೆ ಲಜ್ಜಾಸ್ಪದವಾಗಿದೆ ! – ಸಂಪಾದಕರು)

ನದಿ ದಾಟಿ ಹಿಂದುಗಳ ಪಲಾಯನ ! – ಭಾಜಪ

ಭಾಜಪದ ಶಾಸಕ ಮತ್ತು ರಾಜ್ಯದ ವಿಧಾನ ಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಇವರು, ಮತಾಂಧರ ಭಯದಿಂದ ಮುರ್ಶಿದಾಬಾದ್ ಜಿಲ್ಲೆಯಲ್ಲಿನ ಧುಲಿಯನ ಕ್ಷೇತ್ರದಿಂದ ೪೦೦ ಕ್ಕಿಂತಲೂ ಹೆಚ್ಚಿನ ಹಿಂದುಗಳು ಅವರ ಮನೆಗಳನ್ನು ತೊರೆದು ಪಲಾಯನ ಮಾಡಲು ಅನಿವಾರ್ಯಗೊಳಿಸಲಾಗಿದೆ. ಈ ಹಿಂದುಗಳು ನದಿ ದಾಟಿ ಮಾಲದಾ ಜಿಲ್ಲೆಯಲ್ಲಿನ ವೈಷ್ಣವನಗರದ ದೇವೋನಾಪುರ ಸೋವಾಪುರ ಗ್ರಾಮ ಪಂಚಾಯತ ಕ್ಷೇತ್ರದ ಲಾಲಪುರ ಹೈಸ್ಕೂಲಿನಲ್ಲಿ ಆಶ್ರಯ ಪಡೆದಿದ್ದಾರೆ. ತೃಣಮೂಲ ಕಾಂಗ್ರೆಸ್ಸಿನ ಓಲೈಕೆ ರಾಜಕಾರಣದಿಂದ ಕಟ್ಟರವಾದಿ ಶಕ್ತಿಗಳಿಗೆ ಪ್ರೋತ್ಸಾಹ ಸಿಗುತ್ತಿದೆ. ಇದರಿಂದ ಈಗ ಹಿಂದುಗಳಿಗೆ ಅವರ ನೆಲದಲ್ಲಿಯೇ ಅಸುರಕ್ಷಿತ ಅನಿಸುತ್ತಿದೆ. ಇದು ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ವಿಫಲತೆ ಆಗಿದೆ, ಎಂದು ತಿಳಿಸಿದರು.

ಸಂತ್ರಸ್ತ ಹಿಂದುಗಳು ಮತಾಂಧ ಮುಸಲ್ಮಾನರ ದಾಳಿಯ ಮಾಹಿತಿ ನೀಡಿದರು !

೧. ಮತಾಂಧರ ಗುಂಪಿನಿಂದ ಮೊದಲು ನಮ್ಮ ಮನೆಯ ಪ್ರವೇಶದ್ವಾರ ಮುರಿಯುವ ಪ್ರಯತ್ನ ಮಾಡಿದರು. ಅದು ಮುರಿಯದೇ ಇದ್ದಾಗ ಅವರು ಹಿಂದಿನ ಬಾಗಿಲಿನಿಂದ ಒಳಗೆ ಪ್ರವೇಶಿಸಲು ಆರಂಭಿಸಿದರು. ಅವರು ನಮ್ಮ ಬೈಕನ್ನು ಧ್ವಂಸ ಮಾಡಿದರು. ಮನೆಗೆ ನುಗ್ಗಿದರು ಮತ್ತು ಕುರ್ಚಿಗಳು, ಹಾಸಿಗೆಗಳು, ಟಿವಿ, ಬೆಲೆ ಬಾಳುವ ವಸ್ತುಗಳು ಎಲ್ಲವನ್ನು ಲೂಟಿ ಮಾಡಿದರು. ನಮ್ಮ ಸಂಪೂರ್ಣ ಕುಟುಂಬ ದೇವರ ಸ್ಮರಣೆ ಮಾಡುತ್ತಿತ್ತು. ನಾವು ನಮ್ಮ ಜೀವ ರಕ್ಷಿಸಿಕೊಳ್ಳಲು ಛಾವಣಿಯಲ್ಲಿ ಅಡಗಿ ಕುಳಿತೆವು. ಮತಾಂಧರು ನಮ್ಮ ಮಗಳ ಮೇಲೆ ಏನಾದರೂ ಬಲಾತ್ಕಾರ ಮಾಡಿದರೆ ?, ಎಂದು ವಿಚಾರ ಮಾಡುತ್ತಿದ್ದೆ, ಎಂದು ವ್ಯಾಪಾರಿ ಅಮರ ಭಗತ ಇವರ ಪತ್ನಿ ಮಂಜು ಇವರು ಹೇಳಿದರು.

೨. ಓರ್ವ ಪ್ರತ್ಯಕ್ಷದರ್ಶಿಯು, ಮುಸಲ್ಮಾನರು ಅಂಬುಲೆನ್ಸ್ ಸುಟ್ಟು ಹಾಕಿದರು, ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದರು. ಭಯದಿಂದ ನಮ್ಮನ್ನು ಮನೆಯಲ್ಲಿಯೇ ಕೂಡಹಾಕಲಾಯಿತು. ನಾನು ನನ್ನ ತಾಯಿ ತಂದೆ, ಪತ್ನಿ ಮತ್ತು ಮಕ್ಕಳನ್ನು ಮನೆಯಲ್ಲಿಯೇ ಇಟ್ಟಿದ್ದೆ. ಮುಸಲ್ಮಾನರು ಹೊರಗಿನವರು ಇರದೆ ಸ್ಥಳೀಯರೇ ಇದ್ದರು, ಎಂದು ಹೇಳಿದರು.

೩. ಇತರ ಓರ್ವ ಸಂತ್ರಸ್ತರು, ಎ.ಎಂ.ಐ. (ಏಷಿಯನ್ ನ್ಯೂಸ್ ಇಂಟರ್ನ್ಯಾಷನಲ್) ವಾರ್ತಾ ಸಂಸ್ಥೆಗೆ, ಮುಸಲ್ಮಾನರು ದ್ವಿಚಕ್ರ ವಾಹನಗಳನ್ನು ಧ್ವಂಸ ಮಾಡಿದರು, ಅಂಗಡಿಗಳು ಸುಟ್ಟರು ಮತ್ತು ನಮ್ಮ ಸಾಮಾನುಗಳು ಲೂಟಿ ಮಾಡಿದರು. ನಾವು ಭಯದಿಂದ ರಾತ್ರಿಯಲ್ಲ ಎಚ್ಚರವೇ ಇದ್ದೆವು. ಪೊಲೀಸರು ಎಲ್ಲಿಯೂ ಕಾಣುತ್ತಿರಲಿಲ್ಲ. ಅವರು ಸ್ವತಃ ಜೀವಭಯದಿಂದ ಓಡುತ್ತಿದ್ದರು. ಈಗ ನಾವು ನೋಡೋಣ ಸರಕಾರ ನಮಗೆ ಪರಿಹಾರ ನೀಡುತ್ತದೆಯೇ ಅಥವಾ ಇಲ್ಲ ? ಎಂದು ವರದಿ ಮಾಡಿದೆ.

೪. ಸುತಿ ಇಲ್ಲಿಯ ಓರ್ವ ಹಿಂದೂ ದಂಪತಿಗಳ ಮಾಲಿಕತ್ವದ ‘ಸುಭಾ ಸ್ಮೃತಿ ಹೋಟೆಲ್’ ಈ ಮಿಠಾಯಿ ಅಂಗಡಿ ಮುಸಲ್ಮಾನರ ದಾಳಿಯಲ್ಲಿ ಸಂಪೂರ್ಣವಾಗಿ ಧ್ವಂಸವಾಗಿದೆ. ಅಂಗಡಿ ಮಾಲೀಕರು ಅಳುತ್ತಾ, ‘ಎಲ್ಲವೂ ಲೂಟಿ ಮಾಡಿದರು, ಅಂಗಡಿಯಲ್ಲಿ ಇಟ್ಟಿರುವ ನಗದು ಹಣ, ಸಾಮಾನು ಯಾವುದು ಬಾಕಿ ಉಳಿದಿಲ್ಲ. ನಾವು ಎಲ್ಲವೂ ಕಳೆದುಕೊಂಡಿದ್ದೇವೆ, ಈಗ ನಾವು ಏನು ತಿನ್ನಬೇಕು ?, ಎಂದು ಪ್ರಶ್ನೆಸಿದರು.

ಸಂಪಾದಕೀಯ ನಿಲುವು

ಇನ್ನೊಂದು ಬಾಂಗ್ಲಾದೇಶವಾಗಿರುವ ಬಂಗಾಳ ! ಇದರ ಬಗ್ಗೆ ದೇಶದಲ್ಲಿನ ರಾಜಕೀಯ ಪಕ್ಷಗಳಿಗೆ ಮತ್ತು ಸಂಘಟನೆಗಳಿಗೆ ಯಾವುದೇ ಮುಜುಗರ ಇಲ್ಲ ! ಇಂದು ಬಂಗಾಳದಲ್ಲಿ ಏನೆಲ್ಲಾ ನಡೆಯುತ್ತಿದೆ, ಅದು ನಾಳೆ ದೇಶದ ಬಹುತೇಕ ಭಾಗದಲ್ಲಿ ಘಟಿಸಿದರೆ ಹಿಂದುಗಳು ಎಲ್ಲಿ ಪಲಾಯನ ಮಾಡುವರು ?