ಅನೇಕ ಅನಾರೋಗ್ಯಕರ ವಿಷಯಗಳನ್ನು ಬಹಳ ಸಹಜವಾಗಿಯೇ ‘ಹೀಗೆಯೇ ಇರುತ್ತದೆ’ ಎಂದು ಹೇಳುತ್ತಾ ಅರಿವಿಲ್ಲದೇ ನಾವು ಅವುಗಳನ್ನು ಸ್ವೀಕರಿಸಿದ್ದೇವೆ. ಅದು ಕಚೇರಿಯ ಔತಣಕೂಟವಿರಲಿ, ಪದೇ ಪದೇ ಹೊರಗಿನಿಂದ ಆಹಾರವನ್ನು ಮನೆಗೆ ತರಿಸಿಕೊಳ್ಳುವುದಿರಲಿ, ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಸೌಲಭ್ಯವನ್ನು ಬಿಟ್ಟು ಇತರ ಕಡೆಗಳಲ್ಲಿ ಹೆಚ್ಚುತ್ತಿರುವ ಬಳಕೆಯಿರಲಿ ಅಥವಾ ಕೆಲಸದ ಒತ್ತಡದಿಂದ ಆಗುತ್ತಿರುವ ವ್ಯಾಯಾಮದ ಕೊರತೆಯಿರಲಿ, ಅವುಗಳ ಪರಿಣಾಮಗಳನ್ನು ಎದುರಿಸುವಾಗ ಮಧುಮೇಹ, ಕ್ಯಾನ್ಸರ್ (ಅರ್ಬುದರೋಗ), ಹೃದಯ ಸಂಬಂಧಿ ಕಾಯಿಲೆಗಳ ಜೊತೆಗೆ ಇವೆಲ್ಲದರ ಮೂಲದಲ್ಲಿ ಕಾಣುವ ಲಕ್ಷಣವೆಂದರೆ ಸ್ಥೂಲಕಾಯ. ‘ಹಾರ್ಮೋನ್’ (ಸಂಪ್ರೇರಕ) ಏರುಪೇರಾಗುವುದು ಅಥವಾ ಆನುವಂಶಿಕವಾಗಿ ಕೆಲವು ಅಂಶಗಳಿಂದ ಹೆಚ್ಚಾಗಿರುವ ಸ್ಥೂಲಕಾಯವನ್ನು ಅರ್ಥ ಮಾಡಿಕೊಳ್ಳಬಹುದು; ಆದರೆ ಸಮಾಜದ ದೊಡ್ಡ ಭಾಗವು ಇದನ್ನು ತಮ್ಮ ಜೀವನ ಶೈಲಿ ಮತ್ತು ಆಹಾರದ ಆಯ್ಕೆಗಳಿಂದ ಮೈಮೇಲೆ ಎಳೆದುಕೊಳ್ಳುತ್ತಿರುತ್ತದೆ, ಆಗ ಅದರ ಬಗ್ಗೆ ಗಮನ ಹರಿಸಬೇಕು. ಸದ್ಯ ಅಂತಹ ವ್ಯಕ್ತಿಗಳ ಪ್ರಮಾಣ ಅಧಿಕವಿದೆ.
೨೦೨೩ ರ ‘ಕ್ಯಾಲ್ವಿನ ಕ್ಲೈನ್’ ಸಂಸ್ಥೆಯ ಜಾಹೀರಾತು ಭಿತ್ತಿಪತ್ರವನ್ನು ನೋಡಿದ್ದರೆ, ಅದರಲ್ಲಿನ ಮಾಡೆಲಗಳನ್ನು ನೋಡಿದರೆ ಈ ಸಮಸ್ಯೆ ಎಷ್ಟು ಅಧಿಕವಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ‘ಬೇಡಿಕೆಗೆ ತಕ್ಕಂತೆ ಪೂರೈಕೆ’, ಎಂಬ ಹೇಳಿಕೆಯಂತೆ ‘ನೋವೊ ನಾರ್ಡಿಕ್ಸ್’ ಕಂಪನಿಯ ‘ವೆಗೊವಿ‘ (‘ತಿಎಗೊವ್ಥಿ’) ನಂತಹ ಔಷಧಿಯಿರಲಿ ಅಥವಾ ಬಟ್ಟೆಗಳ ಉತ್ಪಾದನೆಯ ವಿವಿಧ ಪ್ರಕಾರಗಳಾಗಿರಬಹುದು. ಇದರಿಂದಲೇ ಸ್ಥೂಲಕಾಯದ ಹೆಚ್ಚುತ್ತಿರುವ ಗಂಭೀರ ಸಮಸ್ಯೆ ನಮಗೆ ತಿಳಿಯುತ್ತದೆ. ಅಮೇರಿಕಾ, ಚೀನಾ ನಂತರ ಭಾರತವು ಸ್ಥೂಲಕಾಯದಲ್ಲಿ ಮುಂದಿದೆ. ಜಪಾನ ದೇಶದಲ್ಲಿ ಸ್ಥೂಲಕಾಯ ಅತ್ಯಂತ ಕಡಿಮೆಯಿದೆ ಮತ್ತು ಅದರ ಕಾರಣವೆಂದರೆ ಆ ಜನರ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಆಹಾರವನ್ನು ಅವಲಂಬಿಸಿದೆಯೆಂದು ಸಂಶೋಧನೆ ಹೇಳುತ್ತದೆ. ನಾವು ನಮ್ಮ ಆಹಾರ ಮತ್ತು ಸಂಸ್ಕೃತಿಯ ನಿಯಮಗಳಿಂದ ದೂರವಾಗುತ್ತಿರುವುದು ಕೂಡ ಸ್ಥೂಲಕಾಯ ಹೆಚ್ಚಾಗಲು ಒಂದು ಪ್ರಮುಖ ಕಾರಣವಾಗಿದೆ.
ಆಯುರ್ವೇದದಲ್ಲಿ ಎಂಟು ಅನಾರೋಗ್ಯಕರ ಅಥವಾ ರೋಗಗಳಿಗೆ ಆಹ್ವಾನ ನೀಡುವ ವಿಧಗಳಲ್ಲಿ ಅತಿ ಸ್ಥೂಲ ಅಥವಾ ಅತಿ ತೆಳ್ಳಗಾಗಿರುವುದು ಈ ವಿಧಗಳನ್ನು ತಿಳಿಸಲಾಗಿದೆ. ಅದರಲ್ಲಿಯೂ ಸ್ಥೂಲವಾಗಿರುವುದು ಹೆಚ್ಚು ತೊಂದರೆದಾಯಕವಾಗಿದೆ; ಏಕೆಂದರೆ ಅದಕ್ಕೆ ಚಿಕಿತ್ಸೆಯು ಕಷ್ಟಕರವಾಗಿವೆ.

೧. ಅತೀ ಸ್ಥೂಲತೆ ಹೆಚ್ಚಾಗಲು ಕಾರಣಗಳು
ಆಯುರ್ವೇದದಲ್ಲಿ ಅತಿಸ್ಥೂಲ, ಹಾಗೆಯೇ ಮೇದೋರೋಗ ಗಳಲ್ಲಿ ತೂಕ ಹೆಚ್ಚಾಗಲು ಕಾರಣಗಳು ಮತ್ತು ಪರಿಹಾರಗಳನ್ನು ನೀಡಲಾಗಿದೆ. ಆರಂಭದಲ್ಲಿ ಈ ಸಮಸ್ಯೆ ಅಗ್ನಿಮಾಂದ್ಯ ಎಂಬ ಕಾರಣದಿಂದ ಪ್ರಾರಂಭವಾಗಿ ನಂತರ ಅದರಲ್ಲಿ ಮೇಲಿನ ಉಳಿದ ಕಾರಣಗಳಿದ್ದರೆ, ಇತರ ಧಾತುಗಳಿಗೆ ಸರಿಯಾಗಿ ಪೋಷಣೆ ದೊರೆಯದೆ ಕೇವಲ ಮೇದ ಧಾತುವಿನ ಪೋಷಣೆ ಹೆಚ್ಚು ಅನಾರೋಗ್ಯಕರ ರೀತಿಯಲ್ಲಿ ಆಗುತ್ತದೆ. ಮುಂದೆ ಇದರಿಂದ ಅನಿಯಂತ್ರಿತ ತೂಕ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಸಹಜವಾಗಿಯೇ ‘ಕಡಿಮೆ ತಿಂದರೂ ತೂಕ ಹೆಚ್ಚಾಗುವುದು’ ಎಂಬ ಲಕ್ಷಣ ಕಾಣಿಸಿಕೊಳ್ಳುತ್ತದೆ ಮತ್ತು ಅಂತಹ ಸ್ಥಳಗಳಲ್ಲಿ ಅಗ್ನಿಯ ಮೇಲೆ ಕೆಲಸ ಮಾಡುವ ಔಷಧಿಗಳನ್ನು ನೀಡಿದಾಗ ಒಳ್ಳೆಯ ಪ್ರಯೋಜನವಾಗಿರುವುದು ಕಂಡುಬಂದಿದೆ.
೨. ಸ್ಥೂಲಕಾಯವನ್ನು ತಪ್ಪಿಸಲು ಮಾಡಬೇಕಾದ ಕೆಲವು ಉಪಾಯಗಳು
ಆನುವಂಶಿಕ/ಬೀಜದೋಷ/ಬೇರೆ ಕಾಯಿಲೆ ಇದ್ದರೆ ತೂಕದ ಮೇಲೆ ನಿರಂತರ ಗಮನವಿಡುವುದು ಬಹಳ ಆವಶ್ಯಕವಾಗಿದೆ; ಆದರೆ ಒಂದು ವೇಳೆ ದಿನಚರಿಯನ್ನು ಅನುಸರಿಸದಿದ್ದರೆ ಅಥವಾ ತಿನ್ನುವುದು-ಕುಡಿಯುವುದರಲ್ಲಿ ಅಪಥ್ಯ ಅಥವಾ ವ್ಯಾಯಾಮದ ಕೊರತೆಯಿಂದ ತೊಂದರೆಯಾಗುತ್ತಿದ್ದರೆ ಕೆಳಗಿನ ಉಪಾಯಗಳನ್ನು ಮಾಡಬಹುದು –
ಅ. ಚಳಿಗಾಲವನ್ನು ಹೊರತುಪಡಿಸಿ ಇತರ ಋತುಗಳಲ್ಲಿ ಉಪಹಾರವನ್ನು ತ್ಯಜಿಸುವುದು.
ಆ. ಬೆಳಗ್ಗಿನ ಊಟವನ್ನು ಸಾಧಾರಣ ಮಧ್ಯಾಹ್ನ ೧ ಗಂಟೆಯೊಳಗೆ ಮತ್ತು ರಾತ್ರಿಯ ಊಟವನ್ನು ೮ ಗಂಟೆಯೊಳಗೆ ಮಾಡಬೇಕು.
ಇ. ಹುರುಳಿ, ಹೆಸರು, ಬಾರ್ಲಿ, ಸಜ್ಜೆ, ಜೋಳಗಳಂತಹ ಸಣ್ಣ ಗಾತ್ರದ ಧಾನ್ಯಗಳನ್ನು ಬಳಸಬೇಕು.
ಈ. ಆಹಾರದ ಪ್ರಮಾಣವನ್ನು ಮಿತಿಯಲ್ಲಿಡುವುದು. ಸರ್ವಗ್ರಹ ಅಂದರೆ ಎಲ್ಲಾ ಪದಾರ್ಥಗಳನ್ನು ಸೇರಿಸಿ ಆಹಾರದ ಗಾತ್ರವನ್ನು ಕಡಿಮೆ ಮಾಡುವುದು.
ಉ. ಚಳಿಗಾಲ/ಮಳೆಗಾಲದಲ್ಲಿ ವೈದ್ಯಕೀಯ ಸಲಹೆಯೊಂದಿಗೆ ಬಿಸಿ/ ಉಗುರುಬೆಚ್ಚಗಿನ/ ಔಷಧಿಯುಕ್ತ ತಯಾರಿಸಲಾದ ನೀರನ್ನು ಕುಡಿಯುವುದು.
ಊ. ರಾತ್ರಿಯ ಊಟವನ್ನು ಅರ್ಧದಷ್ಟು ಸೇವಿಸುವುದು ಅಥವಾ ತೆಳುವಾದ ಸೂಪ್/ಗಂಜಿಯನ್ನು ಸೇವಿಸುವುದು.
ಎ. ನಿದ್ರೆ ನಿಯಮಿತವಾಗಿರುವುದು ಮತ್ತು ವ್ಯಾಯಾಮವನ್ನು ತಪ್ಪದೇ ಮಾಡುತ್ತಿರುವುದು ಮುಖ್ಯವಾಗಿದೆ.
ಎ. ಮಸಾಲೆ ರೊಟ್ಟಿ (ತಾಲಿಪಿಟ್ಟು), ತರಕಾರಿಗಳ ಖಿಚಡಿ (ವೆಜಿಟೇಬಲ ಪುಲಾವ), ಕಾಯಿಪಲ್ಯ, ತರಕಾರಿ ರೊಟ್ಟಿ, ಕಟ್ಲೆಟ, ಸೂಪ, ವಿವಿಧ ಧಾನ್ಯಗಳನ್ನು ಸೇರಿಸಿ ಮಾಡುವ ದೋಸೆ, ಹೆಸರುಬೇಳೆಯ ಸಪ್ಪೆ ಸಾರು-ಅನ್ನ, ಹುರುಳಿಯ ಹಿಟ್ಟಿನ ಝುಣಕ (ಪಿಟ್ಲ) ಅನ್ನ, ಮಸಾಲೆ ರೊಟ್ಟಿ ತುಪ್ಪ, ಮಜ್ಜಿಗೆಯಲ್ಲಿನ ಸೊಪ್ಪು ತರಕಾರಿ ರೊಟ್ಟಿ ಮತ್ತು ರೊಟ್ಟಿ, ಹೀಗೆ ವಿವಿಧ ಪದಾರ್ಥಗಳನ್ನು ತಯಾರಿಸಿ ಸೇವಿಸಬಹುದು.
ಓ. ಪ್ರತಿದಿನ ದೇಹಕ್ಕೆ ಎಳ್ಳೆಣ್ಣೆ ಮತ್ತು ನಿರ್ದಿಷ್ಟ ಸ್ಥಳಗಳಿಗೆ ಸಾಸಿವೆ ಎಣ್ಣೆಯನ್ನು ಹಚ್ಚಿ ಅಭ್ಯಂಗ ಸ್ನಾನ ಮಾಡುವುದು. ತ್ರಿಫಲಾ, ಮೆಂತ್ಯೆ ಇತ್ಯಾದಿ ಮೇದೋಹರ ದ್ರವ್ಯಗಳ ಉಟಣೆ ಬಳಸುವುದು.
ಔ. ಸಾಕಷ್ಟು ಎಳನೀರು, ಹಣ್ಣು, ಹಣ್ಣಿನ ರಸ, ಬೇಯಿಸದೇ ಇರುವ ತರಕಾರಿಗಳನ್ನು ತಿಂದು ಹೊಟ್ಟೆಯಲ್ಲಿ ಗ್ಯಾಸ್ (ವಾಯು), ಹೊಟ್ಟೆ ಉಬ್ಬರಿಸುವುದರಿಂದಲೂ ತೂಕ ಹೆಚ್ಚಾಗುವುದು ಕಂಡುಬರುತ್ತದೆ.
ಅಂ. ಥೈರಾಯ್ಡ್, ‘ಪಿಸಿಓಡಿ’ (‘ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್’ – ಮಾಸಿಕ ಸರದಿಗೆ ಸಂಬಂಧಿಸಿದ ಕಾಯಿಲೆ), ಪ್ರಮೇಹ, ಕೃಮಿ ರೋಗ ಇವುಗಳಿಗೆ ಆಯುರ್ವೇದದ ದೃಷ್ಟಿಯಿಂದ ರೋಗ ವನ್ನು ಪತ್ತೆ ಹಚ್ಚಿ ವೈದ್ಯರಿಂದ ಔಷಧಿಗಳನ್ನು ತೆಗೆದುಕೊಳ್ಳಬೇಕು.
ಕ. ಹೊಟ್ಟೆಯ ತೊಂದರೆ ಇದ್ದರೆ ಔಷಧಿ, ಪಂಚಕರ್ಮ ಮತ್ತು ಆಹಾರದ ಬಗ್ಗೆ ಮಾರ್ಗದರ್ಶನ ಪಡೆಯುವುದು ಮುಖ್ಯವಾಗಿದೆ.
ಇವೆಲ್ಲ ಉಪಾಯಗಳು ನಮಗೆ ತಿಳಿದಿರುತ್ತವೆ. ಅವುಗಳನ್ನು ನಾವು ಪಡೆದುಕೊಳ್ಳಲೂ ಸಾಧ್ಯವಿರುತ್ತದೆ; ಆದರೆ ಎಲ್ಲ ವಿಷಯಗಳಲ್ಲಿ ಒಂದು ಮಹತ್ವದ್ದಾಗಿದೆ. ಅದೆಂದರೆ ಆ ವ್ಯಕ್ತಿಗೆ ಇದೆಲ್ಲವನ್ನೂ ಮಾಡಲು ಇಚ್ಛೆಯಿರಬೇಕು. ಕುದುರೆಯನ್ನು ನೀರಿನ ವರೆಗೆ ಒಯ್ಯಬಹುದು; ಆದರೆ ಕುದುರೆಯೇ ನೀರನ್ನು ಕುಡಿಯಬೇಕಾಗುತ್ತದೆ ಎನ್ನುವುದಂತೂ ಸತ್ಯ.
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ (೪.೩.೨೦೨೫)
…ಮತ್ತು ಇತರ ಅನಾರೋಗ್ಯಕರ ಆಹಾರದ ಪ್ರಮಾಣ ಹೆಚ್ಚಾಗುತ್ತ ಹೋಗುತ್ತದೆ.ಮನೆಯಲ್ಲಿ ತಯಾರಿಸಿದ ಪಾನಿಪುರಿ, ಪಾವಭಾಜಿ, ಇಡ್ಲಿ, ದೋಸೆ, ಪಡ್ಡು, ಈ ಪದಾರ್ಥಗಳು ಸ್ವಚ್ಛತೆ, ಬಣ್ಣ ಮತ್ತು ಘಟಕ ಪದಾರ್ಥಗಳ ಗುಣಮಟ್ಟದ ದೃಷ್ಟಿಯಿಂದ ಉತ್ತಮವಾಗಿದ್ದರೂ, ಮೇಲಿಂದ ಮೇಲೆ ತಿನ್ನುವುದರಿಂದ ಹುಳಿ, ಖಾರ ಮತ್ತು ಹುದುಗುವಿಕೆಯಿಂದ ಆಗುವ ತೊಂದರೆ ಅಂದರೆ ಬಾಯಿ ಹುಣ್ಣಾಗುವುದು, ಹೊಟ್ಟೆ ಕೆಡುವುದು, ಆಮ್ಲಪಿತ್ತವಾಗಿ ಕುತ್ತಿಗೆ ನೋವು, ಬಾಯಿ ಕಹಿಯಾಗುವುದು ಮತ್ತು ಮೆಣಸಿನ ಕಾಯಿಯಿಂದ ಆಗುವ ಸಾಮಾನ್ಯ ಸಮಸ್ಯೆಗಳು ಇದ್ದೇ ಇರುತ್ತವೆ. ಇದರೊಂದಿಗೆ ನಮಗೆ ‘ಅರೆ, ನಾವಂತೂ ಅನಾರೋಗ್ಯಕರ ಆಹಾರವನ್ನು ಯಾವಾಗಲಾದರೊಮ್ಮೆ ಸೇವಿಸುತ್ತೇವೆ’ ಎಂದೆನಿಸುತ್ತದೆ. ‘ಯಾವುದಾದರೂ ಪದಾರ್ಥ ಯಾವಾಗಲಾದರೊಮ್ಮೆ ಸೇವಿಸುತ್ತೇವೆ’ ಎಂದು ಹೇಳುವಾಗ ಅದು ಯಾವ ವರ್ಗಕ್ಕೆ ಸೇರುತ್ತದೆ ಎನ್ನುವುದೂ ಮುಖ್ಯವಾಗಿದೆ. ಉದಾಹರಣೆಗೆ ೧೫ ದಿನಗಳಲ್ಲಿ ಒಮ್ಮೊಮ್ಮೆ ಆಗುವ ಪಾವಭಾಜಿ, ವಡಾಪಾವ, ಬಿಸ್ಕಿಟು, ಹುಟ್ಟುಹಬ್ಬದ ಕೇಕ, ದೋಸೆ ಮತ್ತು ಇಡ್ಲಿ ಇದನ್ನು ಲೆಕ್ಕ ಹಾಕಿದರೆ ೧೫ ದಿನಗಳಲ್ಲಿ ೫-೬ ಸಲವಾಗುತ್ತದೆ. ಅಂದರೆ ಅಂದಾಜು ವಾರದಲ್ಲಿ ೨-೩ ಸಲವಾಗುತ್ತದೆ. ಇದರೊಂದಿಗೆ ಪ್ರತಿದಿನ ಸೇವಿಸಿರುವ ಲಿಂಬುಪಾನಿ, ‘ಆಪಲ್ ಸಿಡಾರ ವಿನೆಗರ’ (ತೂಕ ಕಡಿಮೆ ಮಾಡಲು ಸೇಬುಹಣ್ಣಿನ ಈಸ್ಟ್ ಹಾಕಿ ಸಿದ್ಧಪಡಿಸಿದ ಪೇಯ) ಊಟದಲ್ಲಿರುವ ಟೊಮೆಟೊ, ಕೋಸಂಬರಿಯಲ್ಲಿನ ಮೊಸರು, ಹುಣಸೆಹಣ್ಣಿನ ಚಟ್ನಿ ಇತ್ಯಾದಿ. ಇಂತಹ ಪದಾರ್ಥಗಳನ್ನು ಸೇವಿಸುವಾಗ ಒಂದೇ ವರ್ಗಕ್ಕೆ ಸೇರುವ ಪದಾರ್ಥಗಳು ಮೇಲಿಂದ ಮೇಲೆ ಸೇವನೆಯಾಗುತ್ತಿಲ್ಲವಷ್ಟೇ ? ಎನ್ನುವ ಅಂಶವನ್ನು ಬಹಳಷ್ಟು ಸಲ ಕಡೆಗಣಿಸಲಾಗುತ್ತದೆ ಮತ್ತು ಒಟ್ಟಾರೆ ಆ ರೀತಿಯ ಅನಾರೋಗ್ಯಕರ ಆಹಾರದ ಪ್ರಮಾಣ ಹೆಚ್ಚಾಗುತ್ತದೆ. ಇದನ್ನು ಗಮನಿಸುವುದು ಮಹತ್ವದ್ದಾಗಿದೆ. – ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ |