RSS P. P. Sarsanghachalak Mohan Ji Statement : ಆಮಿಷ ಮತ್ತು ಭಯಕ್ಕಾಗಿ ಮತಾಂತರ ಆಗಬಾರದು ! – ಪ. ಪೂ. ಸರಸಂಘಚಾಲಕ ಡಾ. ಮೋಹನ ಜಿ ಭಾಗವತ

ವಲಸಾಡ್ (ಗುಜರಾತ್) – ಆಮಿಷ ಮತ್ತು ಭಯಕ್ಕೆ ಮತಾಂತರ ಆಗಬಾರದು; ಏಕೆಂದರೆ ನಿಜವಾದ ಧರ್ಮವು ಎಲ್ಲರಿಗೂ ಸುಖ ಮತ್ತು ಶಾಂತಿಯನ್ನು ನೀಡುತ್ತದೆ. ಆಸೆ ಮತ್ತು ಭಯದ ಪ್ರಭಾವಕ್ಕೆ ಒಳಗಾಗಿ ಯಾವುದೇ ಪರಿಸ್ಥಿತಿಯಲ್ಲಿ ಧರ್ಮ ಬದಲಾಯಿಸಬಾರದು ಎಂದು ಪ. ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ಸರಸಂಘಚಾಲಕರು ಮಾತು ಮುಂದುವರೆಸಿ, ನಮಗೆ ಸಂಘಟಿತರಾಗುವುದು ಹೇಗೆಂದು ತಿಳಿದಿದೆ. ನಾವು ಸಂಘಟಿತರಾಗಿರಲು ಬಯಸುತ್ತೇವೆ. ನಾವು ಹೋರಾಡಲು ಬಯಸುವುದಿಲ್ಲ; ಆದರೆ ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ; ಏಕೆಂದರೆ ಇಂದಿಗೂ ಮತಾಂತರ ಮಾಡಲು ಬಯಸುವ ಕೆಲವು ಶಕ್ತಿಗಳಿವೆ. ನಮ್ಮ ದಿನನಿತ್ಯದ ಜೀವನದಲ್ಲಿ ಅಂತಹ ಶಕ್ತಿಗಳಿಲ್ಲದಿದ್ದರೂ ಆಸೆ ಮತ್ತು ಮೋಹದಿಂದ ಘಟನೆಗಳು ನಡೆಯುತ್ತವೆ, ಎಂದು ಹೇಳಿದರು.