
ಮಧ್ಯಯುಗದ ಕಾಲದಲ್ಲಿ ಇಸ್ಲಾಮೀ ಆಕ್ರಮಣದ ವಿರುದ್ಧ ಸ್ವಧರ್ಮ ರಕ್ಷಣೆಗಾಗಿಯೇ ಸಂಘರ್ಷವಿತ್ತು. ಇಸ್ಲಾಮೀ ಆಡಳಿತಾವಧಿಯಲ್ಲಿ ಆಗಿನ ಭಾರತದ ದೊಡ್ಡ ಪ್ರದೇಶದಲ್ಲಿನ ಜನಸಂಖ್ಯೆಯನ್ನು ಬಲದ ಆಧಾರದಲ್ಲಿ ಮತಾಂತರಿಸಲಾಯಿತು. ಅದರ ಪರಿಣಾಮವೇ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಇಂದಿನ ಭಾರತದ ಮುಸಲ್ಮಾನರ ಜನಸಂಖ್ಯೆಗೆ ಕಾರಣವಾಗಿದೆ ಹಾಗೂ ಈ ಇಸ್ಲಾಮೀ ಆಕ್ರಮಣದ ವಿರುದ್ಧ ಇಲ್ಲಿನ ಹಿಂದೂಗಳು ಮಾಡಿದ ಸಂಘರ್ಷದ ಪರಿಣಾಮದಿಂದ ಇಂದಿನ ಭಾರತ ಹಿಂದೂ ಬಹುಸಂಖ್ಯಾತವಾಗಿ ಉಳಿದಿದೆ.
೧. ಎಲ್ಲಿಯವರೆಗೆ ಮುಸಲ್ಮಾನರು ಮೊಗಲ ಆಡಳಿತಗಾರರನ್ನು ತಮ್ಮ ಆದರ್ಶವೆಂದು ತಿಳಿಯುವರೋ, ಅಲ್ಲಿಯವರೆಗೆ ಹಿಂದೂ-ಮುಸಲ್ಮಾನರ ಐಕ್ಯತೆ ಎಂದಿಗೂ ಸಾಧ್ಯವಿಲ್ಲ !
ಯಾರು ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದರೋ, ಅವರ ವಂಶಜರು ಇಂದು ಹಿಂದೂಗಳಾಗಿದ್ದಾರೆ ಹಾಗೂ ಯಾರು ಶರಣಾಗಿ ಇಸ್ಲಾಮ್ ಸ್ವೀಕರಿಸಿದರೋ, ಅವರ ವಂಶಜರು ಇಂದು ಮುಸಲ್ಮಾನರಾಗಿದ್ದಾರೆ; ಆದರೆ ಆಕ್ರಮಣಕಾರರಿಂದ ಬಲಪೂರ್ವಕ ಮುಸಲ್ಮಾನರಾದವರು ಮಾತ್ರ ಆ ಆಕ್ರಮಣಕಾರಿಗಳನ್ನು ತಮ್ಮ ಆದರ್ಶವೆಂದು ತಿಳಿಯುತ್ತಾರೆ.
‘ಎಲ್ಲಿಯ ವರೆಗೆ ಕಾಸೀಮ, ಗಝನಿ, ಘೋರಿ, ತೈಮೂರ, ಖಿಲ್ಜೀ, ಬಾಬರ ಈ ಇಸ್ಲಾಮೀ ಆಕ್ರಮಣಕಾರರನ್ನು ಹಾಗೂ ಜಹಾಂಗೀರ, ಅಕ್ಬರ, ಶಹಾಜಹಾನ, ಔರಂಗಜೇಬ ಮುಂತಾದ ಅತ್ಯಾಚಾರಿ ಮೊಗಲ ಆಡಳಿತಗಾರರನ್ನು ಮುಸಲ್ಮಾನರು ತಮ್ಮ ಆದರ್ಶವೆಂದು ತಿಳಿಯುವರೋ, ಅಲ್ಲಿಯವರೆಗೆ ಹಿಂದೂ-ಮುಸಲ್ಮಾನರಲ್ಲಿ ಐಕ್ಯತೆ ಎಂದಿಗೂ ಸಾಧ್ಯವಿಲ್ಲ.’
೨. …ಹಿಂದೂಗಳು ಮತ್ತು ಮುಸಲ್ಮಾನರು ಒಟ್ಟಾಗಿ ಒಂದು ರಾಷ್ಟ್ರವನ್ನು ನಿರ್ಮಿಸುವ ದೃಷ್ಟಿಕೋನ ನಿರರ್ಥಕವಾಗಿದೆ ! – ಡಾ. ಬಾಬಾಸಾಹೇಬ ಅಂಬೇಡಕರ್
ಈ ವಿಷಯದಲ್ಲಿ ಡಾ. ಬಾಬಾಸಾಹೇಬ ಅಂಬೇಡಕರರು ಮುಂದಿನಂತೆ ಹೇಳಿದ್ದಾರೆ, ‘ಹಿಂದೂ ಹಾಗೂ ಮುಸಲ್ಮಾನರ ಯಾವುದಾದರೂ ಅಭಿಮಾನಾಸ್ಪದ ಅಥವಾ ದುಃಖಮಯ ವಿಷಯದ ಸಮಾನ ಪೂರ್ವ ಇತಿಹಾಸವಿದೆಯೇ ? ಅಂದರೆ ಆ ಅಭಿಮಾನದ ಅಥವಾ ದುಃಖದ ಪ್ರಸಂಗವನ್ನು ಹೇಳಿ ಅವರನ್ನು ಒಟ್ಟಿಗೆ ತರಬಹುದು. ಇದು ಅತ್ಯಂತ ಬಿಕ್ಕಟ್ಟಿನ ಪ್ರಶ್ನೆಯಾಗಿದೆ. ಒಂದು ವೇಳೆ ಹಿಂದೂ ಹಾಗೂ ಮುಸಲ್ಮಾನರು ಒಟ್ಟಾಗಿ ಒಂದು ರಾಷ್ಟ್ರ ನಿರ್ಮಿಸಲಿಕ್ಕಿದ್ದರೆ, ಈ ಪ್ರಶ್ನೆಯ ಉತ್ತರ ನೀಡಲೇ ಬೇಕು. ಅವರಲ್ಲಿನ ಈ ಸಂಬಂಧದ ವಿಷಯದಲ್ಲಿ ಹೇಳುವುದಾದರೆ, ಇವೆರಡು ಸಮಾಜ, ಅಂದರೆ ಪರಸ್ಪರ ಹೋರಾಡುವ ಎರಡು ಸಶಸ್ತ್ರ ಛಾವಣಿಯಾಗಿವೆ. ಸಮಾನ ಧ್ಯೇಯಕ್ಕಾಗಿ ಪರಸ್ಪರ ಸಹಕಾರದಿಂದ ಅವರು ಮಾಡಿದ ಒಂದೇ ಒಂದು ಘಟನೆಯೂ ಸಿಗಲಿಕ್ಕಿಲ್ಲ. ಅವರ ಭೂತಕಾಲವು ಪರಸ್ಪರ ನಾಶದ, ಪರಸ್ಪರ ದ್ವೇಷದ್ದಾಗಿದೆ. ಹೇಗೆ ಅದು ರಾಜಕೀಯ ಕ್ಷೇತ್ರದಲ್ಲಿದೆಯೋ ಹಾಗೆಯೇ ಅದು ಧಾರ್ಮಿಕ ಕ್ಷೇತ್ರದಲ್ಲಿಯೂ ಇದೆ. ಭಾಯಿ ಪರಮಾನಂದರು ನಮೂದಿಸಿದಂತೆ ಇತಿಹಾಸದಲ್ಲಿ ಹಿಂದೂಗಳು ಯಾರು ಈ ಭೂಮಿಯ ಗೌರವಕ್ಕಾಗಿ ಹಾಗೂ ಸ್ವಾತಂತ್ರ್ಯಕ್ಕಾಗಿ ಮುಸಲ್ಮಾನರ ವಿರುದ್ಧ ಹೋರಾಡಿದ ಪೃಥ್ವಿರಾಜ, ರಾಣಾ ಪ್ರತಾಪ, ಶಿವಾಜಿ ಹಾಗೂ ಬೆರಾಗಿ ಬೀರ ಇವರನ್ನು ಸ್ಮರಿಸುತ್ತಾರೆ, ಆದರೆ ಭಾರತದ ಮೇಲೆ ಆಕ್ರಮಣ ಮಾಡಿರುವ ಮಹಮ್ಮದ ಬಿನ್‌ಕಾಸೀಮನಂತಹ ಆಕ್ರಮಣಕಾರರನ್ನು ಹಾಗೂ ಔರಂಗಜೇಬನಂತಹ ಆಡಳಿತಗಾರರನ್ನು ತಮ್ಮ ಆದರ್ಶವೆಂದು ಮುಸಲ್ಮಾನರು ತಿಳಿಯುತ್ತಾರೆ. ಧಾರ್ಮಿಕ ಕ್ಷೇತ್ರದಲ್ಲಿ ಹಿಂದೂಗಳು ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆಯಿಂದ ಪ್ರೇರಣೆ ಪಡೆಯುತ್ತಾರೆ ಮತ್ತು ಮುಸಲ್ಮಾನರು ಕುರಾನ್ ಮತ್ತು ಹದೀಸದಿಂದ ಪ್ರೇರಣೆ ಪಡೆಯುತ್ತಾರೆ. ಆದ್ದರಿಂದ ಅವರಲ್ಲಿ ಜೋಡಿಸುವುದಕ್ಕಿಂತ ಒಡೆಯುವ ವೃತ್ತಿಯೇ ಹೆಚ್ಚು ಪ್ರಮಾಣದಲ್ಲಿದೆ. ಹಿಂದೂಗಳ ಮತ್ತು ಮುಸಲ್ಮಾನರ ಸಾಮಾಜಿಕ ಜೀವನದಲ್ಲಿನ ಸಮಾನ ಭಾಷೆ, ಸಮಾನ ವಂಶ, ಸಮಾನ ದೇಶದಂತಹ ಯಾವುದೇ ವೈಶಿಷ್ಟ್ಯವನ್ನು ಅವಲಂಬಿಸಿ ಅಖಂಡ ಭಾರತವಾದಿಗಳು ಅನಿರೀಕ್ಷಿತ ಹಾಗೂ ಮೇಲ್ನೋಟಕ್ಕೆ ಕಾಣಿಸುವ ವಿಷಯಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ ಹಾಗೂ ಅತ್ಯಂತ ಮಹತ್ವದ ಹಾಗೂ ಮೂಲಭೂತ ವಿಷಯಗಳನ್ನು ದುರ್ಲಕ್ಷಿಸುತ್ತಾರೆ. ಹಿಂದೂಗಳನ್ನು ಹಾಗೂ ಮುಸಲ್ಮಾನರನ್ನು ಜೋಡಿಸುವ ತಥಾಕಥಿತ ಸಮಾನ ವೈಶಿಷ್ಟ್ಯಗಳಿಗಿಂತ ಅವರಲ್ಲಿನ ರಾಜಕೀಯ ಹಾಗೂ ಧಾರ್ಮಿಕ ಶತ್ರುತ್ವವು ಅವರಲ್ಲಿ ಆಳವಾದ ಬಿರುಕನ್ನುಂಟು ಮಾಡುತ್ತದೆ. ಎರಡೂ ಸಮೂಹಗಳ ಭೂತಕಾಲವನ್ನು ಇಬ್ಬರೂ ಮರೆಯಲು ಸಾಧ್ಯವಾದರೆ ಪರಿಣಾಮ ಬೇರೆಯಾಗಬಹುದು; ಆದರೆ ಎರಡೂ ಸಮಾಜ ತಮ್ಮ ಭೂತಕಾಲವನ್ನು ಎಂದಿಗೂ ಮರೆಯುವ ಹಾಗಿಲ್ಲ ಅಥವಾ ಅಳಿಸಲು ಸಾಧ್ಯವಿಲ್ಲ. ಅವರ ಭೂತಕಾಲ ಅವರ ಧರ್ಮದಲ್ಲಿ ಹುದುಗಿದೆ ಹಾಗೂ ಪ್ರತಿಯೊಬ್ಬರೂ ತಮ್ಮ ಭೂತಕಾಲವನ್ನು ಮರೆಯುವುದೆಂದರೆ ಅವರು ತಮ್ಮ ಧರ್ಮವನ್ನೇ ಮರೆತಂತೆ ಆಗುತ್ತದೆ. ಹಾಗೆ ಅಪೇಕ್ಷೆ ಮಾಡುವುದು ನಿರರ್ಥಕವೆನಿಸಬಹುದು…
ಡಾ. ಬಾಬಾಸಾಹೇಬ ಅಂಬೇಡಕರ – ಯಾವುದೇ ಪೂರ್ವ ಇತಿಹಾಸವಿಲ್ಲದೆ ಹಿಂದೂಗಳು ಮತ್ತು ಮುಸಲ್ಮಾನರು ಒಟ್ಟಾಗಿ ಒಂದು ರಾಷ್ಟ್ರವನ್ನು ರಚಿಸುವ ದೃಷ್ಟಿಕೋನ ನಿರರ್ಥಕವಾಗಿದೆ. ಅಂತಹ ದೃಷ್ಟಿಕೋನವನ್ನಿಟ್ಟುಕೊಳ್ಳುವುದೆಂದರೆ, ಅದು ಶಾಶ್ವತ ವಾದ ಭ್ರಾಂತಿಯೆನಿಸಬಹುದು.’
(ಆಧಾರ : Dr. Babasaheb Ambedkar – writings and speeches – volume 8 – page no. 35, 36, 37 )
೩. ..ಇದರಿಂದಾಗಿ ದ್ವಿರಾಷ್ಟ್ರದ ವಾಸ್ತವಿಕತೆಯಲ್ಲಿ ಸ್ವಲ್ಪವೂ ವ್ಯತ್ಯಾಸವಾಗಿರುವುದು ಕಾಣಿಸುವುದಿಲ್ಲ !
ಪಾಕಿಸ್ತಾನದ ವಿವಿಧ ಕ್ಷಿಪಣಿಗಳ ಹೆಸರನ್ನು ‘ಗೂಗಲ್’ ಜಾಲತಾಣದಲ್ಲಿ ಹುಡುಕಿ ನೋಡಿ. ಅವರು ಈ ಇಸ್ಲಾಮೀ ಆಕ್ರಮಣಕಾರರನ್ನು ತಮ್ಮ ‘ಅಪ್ಪಂದಿರು’ ಎಂದು ತಿಳಿದು ತಮ್ಮ ಕ್ಷಿಪಣಿಗಳಿಗೆ ಅವರ ಹೆಸರನ್ನಿಟ್ಟಿದ್ದಾರೆ. ಸಾವಿರಾರು ವರ್ಷಗಳ ಸಂಘರ್ಷದ ಇತಿಹಾಸ ಹಾಗೂ ಅದರಿಂದ ತಯಾರಾದ ಆದರ್ಶವು ದ್ವಿರಾಷ್ಟ್ರ ಸಿದ್ಧಾಂತದಲ್ಲಿನ ಒಂದು ಪ್ರಮುಖ ಘಟಕವಾಗಿದೆ. ಇಂದು ಭಾರತದಲ್ಲಿನ ಮುಸಲ್ಮಾನರೂ ಇಸ್ಲಾಮೀ ಆಕ್ರಮಣಕಾರರು ಮತ್ತು ಅತ್ಯಾಚಾರಿ ಮೊಗಲ ಆಡಳಿತವನ್ನೇ ತಮ್ಮ ಆದರ್ಶವೆಂದು ತಿಳಿಯುತ್ತಾರೆ. ಆದ್ದರಿಂದ ಈ ವಿಷಯದಲ್ಲಿ ಭಾರತದ ಮತ್ತು ಪಾಕಿಸ್ತಾನದ ಮುಸಲ್ಮಾನರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದ್ದರಿಂದ ದ್ವಿರಾಷ್ಟ್ರದ ವಾಸ್ತವಿಕತೆಯಲ್ಲಿ ಸ್ವತಂತ್ರ ವಿಭಜಿತ ಭಾರತದಲ್ಲಿಯೂ ಯಾವುದೇ ವ್ಯತ್ಯಾಸವಾಗಿರುವುದು ಕಾಣಿಸುವುದಿಲ್ಲ.
– ಶ್ರೀ. ಭರತ ಆಮದಾಪುರೆ, ಅಭಿಯಂತರು, ಪುಣೆ. (೧೨.೩.೨೦೨೫)