ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ೮೩ ನೇ ಜನ್ಮೋತ್ಸವದ ನಿಮಿತ್ತ…

‘ಜ್ಞಾನಿಗಳ ರಾಜ, ಗುರು ಮಹಾರಾಜ’ ಎಂದು ವರ್ಣಿಸಬಹುದಾದ ವ್ಯಕ್ತಿತ್ವವೆಂದರೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ! ಧರ್ಮ, ಕಲೆ, ಭಾಷೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ವಿಪುಲ ಗ್ರಂಥಗಳನ್ನು ಬರೆದಿರುವ ಅವರು ‘ಜ್ಞಾನಗುರು’ ಆಗಿದ್ದಾರೆ. ಶೀಘ್ರ ಈಶ್ವರಪ್ರಾಪ್ತಿಗಾಗಿ ‘ಗುರುಕೃಪಾಯೋಗ’ ಎಂಬ ಸುಲಭ ಸಾಧನಾಮಾರ್ಗವನ್ನು ನಿರ್ಮಿಸಿ ಸಾಧಕರಿಗೆ ಕಾಲಾನುಸಾರ ಯೋಗ್ಯ ಸಾಧನೆಯನ್ನು ಕಲಿಸುವ ಅವರು ‘ಮೋಕ್ಷಗುರು’ ಆಗಿದ್ದಾರೆ ! ಇತ್ತೀಚಿನ ದಿನಗಳಲ್ಲಿ ‘ವಿಶ್ವ ಕಲ್ಯಾಣಕ್ಕಾಗಿ ಸತ್ತ್ವಗುಣವುಳ್ಳ ಜನರ ‘ಈಶ್ವರೀ ರಾಜ್ಯ’ (ಹಿಂದೂ ರಾಷ್ಟ್ರ, ಸನಾತನ ಧರ್ಮ ರಾಜ್ಯ) ಅತ್ಯಗತ್ಯ’ ಎಂದು ಮೊದಲು ಘೋಷಿಸಿದ ಅವರು ‘ರಾಷ್ಟ್ರಗುರು’ ಆಗಿದ್ದಾರೆ. ಹಿಂದೂ ಸಮಾಜ, ರಾಷ್ಟ್ರ ಮತ್ತು ಧರ್ಮದ ಉನ್ನತಿಯ ದುರ್ದಮ್ಯ ಧ್ಯೇಯವಾದ ಅವರ ವಿಚಾರ ಮತ್ತು ಕೃತಿಗಳಲ್ಲಿ ಹೆಜ್ಜೆ ಹೆಜ್ಜೆಗೂ ಕಂಡು ಬರುತ್ತದೆ. ಇದಕ್ಕಾಗಿಯೇ ಅನೇಕ ಹಿಂದುತ್ವವಾದಿಗಳು ಮತ್ತು ಸಂತರು ಅವರನ್ನು ‘ಧರ್ಮ ಗುರು’ ಎಂದು ಪರಿಗಣಿಸುತ್ತಾರೆ. ದೇಶ-ವಿದೇಶಗಳ ವಿವಿಧ ಪಂಥದವರಿಗೆ ಹಿಂದೂ ಧರ್ಮದ ಮಹತ್ವ ಮತ್ತು ಸಾಧನೆ ಬಗ್ಗೆ ಅಮೂಲ್ಯ ಮಾರ್ಗದರ್ಶನ ನೀಡುವ ಅವರು ‘ಜಗದ್ಗುರು’ ಆಗಿದ್ದಾರೆ. ಸೂಕ್ಷ್ಮ ಜಗತ್ತಿನ ಬಗ್ಗೆ ಅವರಷ್ಟು ಅಧ್ಯಯನ ಮಾಡಿದವರು ಬಹುಶಃ ಜಗತ್ತಿನಲ್ಲಿ ಸಿಗಲಾರರು. ಹಾಗಾಗಿ ಒಂದರ್ಥದಲ್ಲಿ ‘ಸೂಕ್ಷ್ಮ-ಜಗತ್ತು ಸಂಶೋಧನಾಗುರು’ ಆಗಿದ್ದಾರೆ ! ಅಂತಹ ಪರಾತ್ಪರ ಗುರು ಡಾ. ಆಠವಲೆಯವರ ಜೀವನಚರಿತ್ರೆಯ ಕೆಲವು ಭಾಗ ಕಳೆದ ಸಂಚಿಕೆಯಲ್ಲಿ ನೋಡಿದೆವು. ಇಂದು ಅದರ ಮುಂದಿನ ಭಾಗ ನೋಡೋಣ.
ಭಾಗ – ೨

ಸಂತರಲ್ಲಿಗೆ ತೆರಳಿ ಅಧ್ಯಾತ್ಮವನ್ನು ಕಲಿಯುವುದು, ಸಾಧನೆಯ ಆರಂಭ ಮತ್ತು ಗುರುಪ್ರಾಪ್ತಿಗೂ ಮೊದಲು ಮಾಡಿದ ಅಧ್ಯಾತ್ಮ ಪ್ರಸಾರ
ಡಾ. ಆಠವಲೆ ಅವರು ೨೫ ಕ್ಕೂ ಹೆಚ್ಚು ಸಂತರಲ್ಲಿಗೆ ತೆರಳಿ ಅಧ್ಯಾತ್ಮದ ಅಧ್ಯಯನ ಮಾಡುವುದು
ಅಂತಾರಾಷ್ಟ್ರೀಯ ಖ್ಯಾತಿಯ ಸಂಮೋಹನ-ಚಿಕಿತ್ಸಾತಜ್ಞರಾದ ಡಾ. ಆಠವಲೆ ಅವರಿಗೆ, ‘ಸಂಮೋಹನ ಚಿಕಿತ್ಸೆಯಿಂದ ಗುಣಮುಖರಾಗದ ಕೆಲವು ಮಾನಸಿಕ ರೋಗಿಗಳು ‘ಸಂತರು ಹೇಳಿದ ಸಾಧನೆ ಹಾಗೂ ನಾರಾಯಣ-ನಾಗಬಲಿ, ತ್ರಿಪಿಂಡಿ ಶ್ರಾದ್ಧ ಮೊದಲಾದ ವಿಧಿಗಳನ್ನು ಮಾಡಿದ ನಂತರ ಗುಣಮುಖರಾಗುತ್ತಾರೆ’ ಎಂಬುದು ಅನುಭವಕ್ಕೆ ಬಂದಿತು. ನಂತರ ‘ಕೇವಲ ಸ್ವಭಾವದೋಷ ಮತ್ತು ಅಹಂಕಾರವೇ ಎಲ್ಲ ಮಾನಸಿಕ ರೋಗಗಳಿಗೆ ಮೂಲ ಕಾರಣವಲ್ಲ, ಆದರೆ ‘ಪ್ರಾರಬ್ಧ ಮತ್ತು ಕೆಟ್ಟ ಶಕ್ತಿಗಳ ತೊಂದರೆ’ ಎಂಬ ಆಧ್ಯಾತ್ಮಿಕ ಕಾರಣಗಳೂ ಅತ್ಯಂತ ಮುಖ್ಯವಾಗಿವೆ’ ಎಂಬುದು ಅವರ ಗಮನಕ್ಕೆ ಬಂತು. ಆದ್ದರಿಂದ ವರ್ಷ ೧೯೮೩ ರಿಂದ ವರ್ಷ ೧೯೮೭ ರ ವರೆಗಿನ ಅವಧಿಯಲ್ಲಿ ಅವರು ಆಧ್ಯಾತ್ಮಿಕ ಅಧಿಕಾರವುಳ್ಳ ೨೫ ಕ್ಕೂ ಹೆಚ್ಚು ಸಂತರಲ್ಲಿಗೆ ತೆರಳಿ ಅಧ್ಯಾತ್ಮದ ಅಧ್ಯಯನ ಮಾಡಿದರು ಮತ್ತು ಅಧ್ಯಾತ್ಮಶಾಸ್ತ್ರದ ಶ್ರೇಷ್ಠತೆಯು ಗಮನಕ್ಕೆ ಬಂದ ನಂತರ ಸ್ವತಃ ಸಾಧನೆ ಮಾಡಲು ಆರಂಭಿಸಿದರು. ಡಾ. ಆಠವಲೆ ಅವರಿಗೆ ಅಧ್ಯಾತ್ಮ ಕಲಿಸಿದ ಸಂತರು ಜ್ಞಾನಯೋಗ, ಭಕ್ತಿಯೋಗ ಮೊದಲಾದ ವಿವಿಧ ಯೋಗಮಾರ್ಗಗಳಿಗನುಸಾರವಾಗಿ ಸಾಧನೆ ಮಾಡುವವರಾಗಿದ್ದರು. ಆದ್ದರಿಂದ ಡಾ. ಆಠವಲೆ ಅವರಿಗೆ ವಿವಿಧ ಸಾಧನಾಮಾರ್ಗಗಳ ತುಲನಾತ್ಮಕ ಅಧ್ಯಯನವನ್ನೂ ಮಾಡಲು ಸಾಧ್ಯವಾಯಿತು.
ಡಾ. ಆಠವಲೆ ಅವರು ಗುರುಪ್ರಾಪ್ತಿಗೂ ಮೊದಲು ಮಾಡಿದ ಅಧ್ಯಾತ್ಮ ಪ್ರಸಾರ ‘ಜೀವನದ ಅತ್ಯುಚ್ಚ ಆನಂದವನ್ನು ನೀಡುವ ‘ಅಧ್ಯಾತ್ಮಶಾಸ್ತ್ರ’ವು ವೈದ್ಯಕೀಯ ಶಾಸ್ತ್ರಕ್ಕಿಂತ ಉನ್ನತ ಮಟ್ಟದ ಶಾಸ್ತ್ರವಾಗಿದೆ’ ಎಂಬ ಪ್ರತ್ಯಕ್ಷ ಅನುಭವವಾದ ನಂತರ ಡಾ. ಆಠವಲೆ ಅವರು ಅಧ್ಯಾತ್ಮಶಾಸ್ತ್ರದ ಪ್ರಸಾರವನ್ನು ಆರಂಭಿಸಿದರು.
೧. ರೋಗಿಗಳಿಗೆ ಸಾಧನೆಯನ್ನು ಹೇಳುವುದು : ‘ತಮಗೆ ತಿಳಿದಿರುವುದನ್ನು ಇತರರಿಗೂ ಹೇಳಬೇಕು’ ಎಂಬ ಉಕ್ತಿಯಂತೆ ಡಾ. ಆಠವಲೆ ಅವರು ತಮ್ಮಲ್ಲಿ ಮಾನಸಿಕ ರೋಗಗಳ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಅಧ್ಯಾತ್ಮಶಾಸ್ತ್ರದ ಮಹತ್ವವನ್ನು ಮನದಟ್ಟು ಮಾಡಿಕೊಟ್ಟು ಸಾಧನೆಯನ್ನು ಹೇಳಲು ಆರಂಭಿಸಿದರು.
೨. ಉಪನ್ಯಾಸಗಳು : ವೈದ್ಯರಿಗಾಗಿ ಆಯೋಜಿಸಿದ ಉಪನ್ಯಾಸ ಗಳಲ್ಲಿಯೂ ಡಾ. ಆಠವಲೆ ಅವರು ‘ಸಂಮೋಹನಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ’ ಎಂಬ ವಿಷಯವನ್ನು ಮಂಡಿಸಲು ಆರಂಭಿಸಿದರು.
೩. ಅಧ್ಯಯನ ವರ್ಗಗಳು : ಡಾ. ಆಠವಲೆ ಅವರು ೧೯೮೬ ಮೇ ೧೭ ಮತ್ತು ಮೇ ೧೮ ರಂದು (ಮೇ ತಿಂಗಳ ಮೂರನೇ ಶನಿವಾರ ಮತ್ತು ಭಾನುವಾರ) ಅಧ್ಯಾತ್ಮದ ಮೊದಲ ಅಧ್ಯಯನ ವರ್ಗವನ್ನು ನಡೆಸಿದರು. ಈ ಅಧ್ಯಯನವರ್ಗವನ್ನು ‘ಭಾರತೀಯ ವೈದ್ಯಕೀಯ ಸಂಮೋಹನ ಮತ್ತು ಸಂಶೋಧನಾ ಸಂಸ್ಥೆಯ’ ವತಿಯಿಂದ ಆಯೋಜಿಸಲಾಗಿತ್ತು.
ಈ ರೀತಿ ಡಾ. ಆಠವಲೆ ಅವರ ಸಂಮೋಹನ ಚಿಕಿತ್ಸಾಕೇಂದ್ರದಲ್ಲಿ ವರ್ಷ ೧೯೮೬ ರಿಂದ ವರ್ಷ ೧೯೯೦ ರವರೆಗಿನ ಅವಧಿಯಲ್ಲಿ ಪ್ರತಿವರ್ಷ ಫೆಬ್ರವರಿ, ಮೇ ಮತ್ತು ಸೆಪ್ಟೆಂಬರ್ ತಿಂಗಳ ಮೂರನೇ ಶನಿವಾರ ಮತ್ತು ಭಾನುವಾರಗಳಂದು ನಿಯಮಿತವಾಗಿ ಅಧ್ಯಾತ್ಮದ ಅಧ್ಯಯನ ವರ್ಗಗಳು ಆರಂಭವಾದವು.
೪. ‘ಅಧ್ಯಾತ್ಮಶಾಸ್ತ್ರ’ ಎಂಬ ಗ್ರಂಥವನ್ನು ಚಕ್ರಮುದ್ರಣ ಮಾಡಿ ಜಿಜ್ಞಾಸುಗಳು ಮತ್ತು ಸಾಧಕರಿಗೆ ಲಭ್ಯವಾಗುವಂತೆ ಮಾಡುವುದು : ‘ಅಧ್ಯಾತ್ಮದ ಮೊದಲ ಅಧ್ಯಯನ ವರ್ಗವಾದ ನಂತರ ‘ಅಧ್ಯಯನ ವರ್ಗಕ್ಕೆ ಬರುವ ಜಿಜ್ಞಾಸುಗಳು ಮತ್ತು ಸಾಧಕರಿಗೆ ಅಧ್ಯಾತ್ಮದ ಅಧ್ಯಯನ ಮಾಡಲು ಸಾಧ್ಯವಾಗಲಿ’ ಎಂಬುದಕ್ಕಾಗಿ ಒಂದು ಗ್ರಂಥವನ್ನು ಸಿದ್ಧಪಡಿಸಬೇಕು’ ಎಂಬ ಕಲ್ಪನೆ ಡಾ. ಆಠವಲೆ ಅವರಿಗೆ ಹೊಳೆಯಿತು. ಆ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರದಿದ್ದರೂ ಅವರು ಅತ್ಯಂತ ಶ್ರಮ ವಹಿಸಿ ಈ ೨೨೮ ಪುಟದ ಗ್ರಂಥವನ್ನು ಚಕ್ರಮುದ್ರಣ (ಸೈಕ್ಲೋಸ್ಟೈಲ್) ಮಾಡಿ ಮಾರ್ಚ್ ೧೯೮೭ ರಲ್ಲಿ ಸಾಧಕರಿಗೆ ಲಭ್ಯವಾಗುವಂತೆ ಮಾಡಿದರು.
ಗುರುಪ್ರಾಪ್ತಿ ಮತ್ತು ಗುರುಸೇವೆಪ.ಪೂ. ಭಕ್ತರಾಜ ಮಹಾರಾಜರು ‘ಗುರು’ವಾಗಿ ಲಭಿಸುವುದು ![]() ಅ. ಪ.ಪೂ. ಅಣ್ಣಾ ಕರಂದೀಕರ ಇವರು ಡಾ. ಆಠವಲೆಯವರನ್ನು ಪ.ಪೂ. ಭಕ್ತರಾಜ ಮಹಾರಾಜರ ಭೇಟಿ ಮಾಡಿಸುವುದು : ವರ್ಷ ೧೯೮೬ ರಲ್ಲಿ ಡಾ. ಆಠವಲೆಯವರು ಆಧ್ಯಾತ್ಮಿಕ ವಿಷಯಗಳ ಬಗ್ಗೆ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಡಹಾಣು (ಜಿಲ್ಲಾ ಪಾಲ್ಘರ್)ದ ಪ.ಪೂ. ಅಣ್ಣಾ ಕರಂದೀಕರ ಇವರ ಬಳಿ ಬರಲಾರಂಭಿಸಿದರು. ಪ.ಪೂ. ಅಣ್ಣಾರವರು ಡಾ. ಆಠವಲೆಯವರಿಗೆ ಅಧ್ಯಾತ್ಮದ ತಾತ್ತ್ವಿಕ ಮತ್ತು ಸೂಕ್ಷ್ಮದ ವಿಷಯಗಳನ್ನು ಕಲಿಸಿದರು. ಅವರು ಡಾ. ಆಠವಲೆ ಯವರಿಂದ ಸೂಕ್ಷ್ಮಪ್ರಯೋಗಗಳನ್ನು ಮಾಡಿಸಿಕೊಂಡರು. ಅವರಲ್ಲಿ ಜ್ಞಾನ ಮತ್ತು ಶಕ್ತಿಗಳ ಅಪೂರ್ವ ಸಂಗಮವಿತ್ತು. ಅವರು ಡಾ. ಆಠವಲೆಯವರಿಗೆ ‘ಇಂದೂರಿನ (ಮಧ್ಯಪ್ರದೇಶ) ಸಂತ ಪ.ಪೂ. ಭಕ್ತರಾಜ ಮಹಾರಾಜರು (ಪ.ಪೂ. ಬಾಬಾ) ನಿಮ್ಮ ಗುರುಗಳು’ ಎಂದು ಹೇಳಿ ಡಾಕ್ಟರರನ್ನು ಇಂದೂರಿಗೆ ಪ.ಪೂ. ಬಾಬಾರವರ ಬಳಿ ಕರೆದುಕೊಂಡು ಹೋದರು. ಈ ರೀತಿಯಾಗಿ ೨೩.೭.೧೯೮೭ ಗುರುವಾರದಂದು ಡಾ. ಆಠವಲೆ ಯವರಿಗೆ ಗುರು ಪ.ಪೂ. ಭಕ್ತರಾಜ ಮಹಾರಾಜರ ಮೊದಲ ದರ್ಶನವಾಯಿತು. ಆ. ಡಾ. ಆಠವಲೆಯವರಿಗೆ ಪ.ಪೂ. ಭಕ್ತರಾಜ ಮಹಾರಾಜರಿಂದ ಗುರುಮಂತ್ರ ಲಭಿಸುವುದು : ೨೪.೭.೧೯೮೭ ರಂದು ಪ.ಪೂ. ಅಣ್ಣಾ ಕರಂದೀಕರ ಇವರು ಡಾ. ಆಠವಲೆಯವರನ್ನು ಇಂದೂರ (ಮಧ್ಯಪ್ರದೇಶ)ನ ಪ.ಪೂ. ಧಾಂಡೇಶಾಸ್ತ್ರಿಯವರ ಬಳಿ ಕರೆದುಕೊಂಡು ಹೋದರು. ಅಲ್ಲಿ ಪ.ಪೂ. ಭಕ್ತರಾಜ ಮಹಾರಾಜರೂ ಉಪಸ್ಥಿತರಿದ್ದರು. ಆ ಸಮಯದಲ್ಲಿ ಪ.ಪೂ. ಧಾಂಡೇಶಾಸ್ತ್ರಿಯವರು ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂದು ಹೇಳುತ್ತಿದ್ದರು. ಆಗ ಪ.ಪೂ. ಬಾಬಾರವರು ಪ.ಪೂ. ಧಾಂಡೇಶಾಸ್ತ್ರಿಯವರು ಹೇಳುತ್ತಿದ್ದ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಈ ಮಂತ್ರಜಪವನ್ನೇ ಡಾ. ಆಠವಲೆಯವರಿಗೆ ಗುರುಮಂತ್ರವಾಗಿ ನೀಡಿದರು. |
೨. ಡಾ. ಆಠವಲೆಯವರು ಮಾಡಿದ ಆದರ್ಶ ಗುರುಸೇವೆ
ಅ. ಗುರುಗಳ ಆಶ್ರಮಕ್ಕೆ ಹೋಗಿ ಮಾಡಿದ ಸೇವೆ
೧. ಗುರುಗಳ ಬಳಿ ಸರಳವಾಗಿ ಹೋಗುವುದು ಮತ್ತು ಆಶ್ರಮದಲ್ಲಿ ಎಲ್ಲ ರೀತಿಯ ಸೇವೆಗಳನ್ನು ಮಾಡುವುದು : ಶಿಷ್ಯ ಡಾ. ಆಠವಲೆಯವರು ಶೀವ (ಮುಂಬಯಿ)ನ ಸೇವಾಕೇಂದ್ರದಲ್ಲಿ ವಾಸಿಸುತ್ತಾ ‘ಗ್ರಂಥಬರವಣಿಗೆ, ಅಧ್ಯಾತ್ಮಪ್ರಸಾರ’ ಮುಂತಾದ ವಿವಿಧ ಸೇವೆಗಳನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ (ಪ.ಪೂ. ಬಾಬಾ) ಬಳಿ ಭಂಡಾರಗಳು (ಅನ್ನಸಂತರ್ಪಣೆಗಳು) ನಡೆಯುತ್ತಿದ್ದವು. ಪ್ರತಿ ಭಂಡಾರಕ್ಕೆ ಡಾ. ಆಠವಲೆಯವರು ಹೋಗುತ್ತಿದ್ದರು. ದೀಪಾವಳಿ-ದಸರಾ ಹಬ್ಬಗಳ ಸಮಯದಲ್ಲಿ ಪ.ಪೂ. ಬಾಬಾರವರು ಎಲ್ಲಿದ್ದರೋ ಅಲ್ಲಿಗೆ ಡಾ. ಆಠವಲೆಯವರನ್ನು ಕರೆಸಿಕೊಳ್ಳುತ್ತಿದ್ದರು. ಡಾ. ಆಠವಲೆಯವರು ಪ.ಪೂ. ಬಾಬಾರವರ ಬಳಿ ಯಾವಾಗಲೂ ಸಾಮಾನ್ಯ ಬಟ್ಟೆಗಳನ್ನು ಧರಿಸಿ ಹೋಗುತ್ತಿದ್ದರು. ಅಲ್ಲಿಗೆ ಹೋಗುವಾಗ ಪ.ಪೂ. ಬಾಬಾ, ಪ.ಪೂ. ರಾಮಾನಂದ ಮಹಾರಾಜರು ಮತ್ತು ಪ.ಪೂ. ಜೀಜಿಯವರಿಗೆ (ಪ.ಪೂ. ಬಾಬಾರವರ ಪತ್ನಿ) ನೀಡಲು ಅರ್ಪಣೆ ಕೊಂಡೊಯ್ಯುತ್ತಿದ್ದರು. ಹಾಗೆಯೇ ಕೆಲವು ಭಕ್ತರ ಇಷ್ಟಾನಿಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೂ ಕೆಲವು ವಸ್ತುಗಳು ಅಥವಾ ಬಟ್ಟೆಗಳನ್ನು ಕೊಂಡೊಯ್ಯುತ್ತಿದ್ದರು.

ಪ.ಪೂ. ಬಾಬಾರವರ ಆಶ್ರಮಕ್ಕೆ ಹೋದ ನಂತರ ಇಲ್ಲಿ-ಅಲ್ಲಿ ಹೋಗದೆ ಡಾ. ಆಠವಲೆಯವರು ಮೊದಲು ನೇರವಾಗಿ ಪ.ಪೂ. ಬಾಬಾರವರ ದರ್ಶನ ಪಡೆಯುತ್ತಿದ್ದರು ಮತ್ತು ತಮ್ಮೊಂದಿಗೆ ಬಂದ ಸಾಧಕರಿಗೂ ಅವರ ದರ್ಶನ ಮಾಡಿಸುತ್ತಿದ್ದರು. ಪ.ಪೂ. ಬಾಬಾರವರ ದರ್ಶನವಾದ ನಂತರ ಆಶ್ರಮದ ವ್ಯವಸ್ಥಾಪಕರು ವಾಸಿಸಲು ನೀಡಿದ ಕೋಣೆಯಲ್ಲಿ ತಮ್ಮೆಲ್ಲಾ ಸಾಮಾನುಗಳನ್ನು ಇಡುತ್ತಿದ್ದರು ಮತ್ತು ‘ಇತರ ಸಾಧಕರ ವಾಸದ ವ್ಯವಸ್ಥೆಯಾಗಿದೆಯೇ’ ಎಂದು ನೋಡಿಕೊಳ್ಳುತ್ತಿದ್ದರು. ಇದೆಲ್ಲಾ ಆದ ನಂತರ ಅವರು ಆಶ್ರಮದ ಸೇವೆಯನ್ನು ಆರಂಭಿಸುತ್ತಿದ್ದರು. ‘ಆಶ್ರಮದ ಶೌಚಾಲಯಗಳು ಮತ್ತು ಸ್ನಾನಗೃಹಗಳನ್ನು ಸ್ವಚ್ಛಗೊಳಿಸುವುದು, ಎಲ್ಲಾ ಕೋಣೆಗಳಲ್ಲಿ ಜೇಡರಬಲೆಗಳನ್ನು ತೆಗೆಯುವುದು, ಫ್ಯಾನ್ ಮತ್ತು ದೀಪಗಳನ್ನು ಒರೆಸುವುದು, ಭಕ್ತರ ಚಪ್ಪಲಿಗಳನ್ನು ಒಂದು ಸಾಲಿನಲ್ಲಿಡಲು ಕಟ್ಟಿಗೆಯ ಹಲಗೆಗಳ ಜೋಡಣೆ (ರ್ಯಾಕ್) ಮಾಡುವುದು, ಊಟದ ಸಮಯದಲ್ಲಿ ಭಕ್ತರಿಗೆ ಊಟ ಬಡಿಸುವುದು, ಊಟದ ಎಲೆಗಳನ್ನು ಎತ್ತುವುದು, ಆಶ್ರಮದ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವುದು’ ಮುಂತಾದ ಅನೇಕ ಸೇವೆಗಳನ್ನು ಅವರು ಸ್ವತಃ ಮಾಡುತ್ತಿದ್ದರು.
೨. ಸುಡು ಬಿಸಿಲಿನಲ್ಲಿ ಆಶ್ರಮದ ಸುತ್ತಲಿನ ಮುಳ್ಳುಗಳು ಮತ್ತು ದೊಡ್ಡ ಕಲ್ಲುಗಳನ್ನು ಸ್ವತಃ ಎತ್ತುವುದು : ಆ ಸಮಯದಲ್ಲಿ ಕಾಂದಳಿ (ಜಿಲ್ಲಾ ಪುಣೆ)ಯ ಪ.ಪೂ. ಬಾಬಾರವರ ಆಶ್ರಮದ ಸುತ್ತಲಿನ ಪರಿಸರವು ಮುಳ್ಳುಗಳಿಂದ ತುಂಬಿರುತ್ತಿತ್ತು. ಎಲ್ಲೆಂದರಲ್ಲಿ ದೊಡ್ಡ ಕಲ್ಲುಗಳು ಬಿದ್ದಿರುತ್ತಿದ್ದವು. ಸುಡು ಬಿಸಿಲಿನಲ್ಲಿ ಡಾ. ಆಠವಲೆಯವರು ಆ ಪರಿಸರವನ್ನು ಸ್ವಚ್ಛಗೊಳಿಸುತ್ತಿದ್ದರು. ಅವರ ಕೈಗಳಿಗೆ ಮುಳ್ಳುಗಳು ಚುಚ್ಚುತ್ತಿದ್ದವು, ಹಾಗೆಯೇ ಕಲ್ಲುಗಳು ಭಾರವಾಗಿದ್ದವು; ಆದರೂ ಅವರು ಅವುಗಳನ್ನು ಎತ್ತುತ್ತಿದ್ದರು. ಮೇಲೆ ಸುಡು ಬಿಸಿಲಿರುತ್ತಿತ್ತು. ಈ ಸೇವೆಯನ್ನು ಮಾಡುವಾಗ ಇತರ ಸಾಧಕರು ದಣಿಯುತ್ತಿದ್ದರೂ ಡಾ. ಆಠವಲೆಯವರು ದಣಿಯದೆ ಎಲ್ಲಾ ಸೇವೆಗಳನ್ನು ಸ್ವತಃ ಮಾಡುತ್ತಿದ್ದರು ಮತ್ತು ಇತರ ಸಾಧಕರಿಂದಲೂ ಮಾಡಿಸುತ್ತಿದ್ದರು.
ಇ. ಭಜನೆಗಳ ಕಾರ್ಯಕ್ರಮದ ಸಮಯದಲ್ಲಿ ಆಸನದ ವ್ಯವಸ್ಥೆಯಿಂದ ಹಿಡಿದು ಎಲ್ಲಾ ಸೇವೆಗಳನ್ನು ಕೊನೆಯವರೆಗೆ ನಿಂತು ಮಾಡುವುದು : ಪ.ಪೂ. ಬಾಬಾರವರ ಭಜನೆಗಳ ಕಾರ್ಯಕ್ರಮದ ಸಮಯದಲ್ಲಿ ಆಶ್ರಮದ ಸಭಾಂಗಣದಲ್ಲಿ ಜನಸಂದಣಿ ಇರುತ್ತಿತ್ತು. ಅಂತಹ ಸಮಯದಲ್ಲಿ ಡಾ. ಆಠವಲೆಯವರು ‘ಎಲ್ಲಾ ಭಕ್ತರಿಗೆ ಕೂರಲು ಸ್ಥಳ ಮಾಡಿಕೊಡುವುದು, ಮಧ್ಯದಲ್ಲಿ ಯಾರಿಗಾದರೂ ನೀರು ಬೇಕಾದರೆ ಅದನ್ನು ನೀಡುವುದು, ಯಾರಿಗಾದರೂ ಇನ್ನೇನಾದರೂ ಸಹಾಯ ಬೇಕಾದರೆ ಅದನ್ನು ಮಾಡುವುದು’ ಮುಂತಾದ ಎಲ್ಲಾ ಸೇವೆಗಳನ್ನು ಅವಿರತವಾಗಿ ಮತ್ತು ಕೊನೆಯ ವರೆಗೆ ನಿಂತು ಮಾಡುತ್ತಿದ್ದರು. ಪ.ಪೂ. ಬಾಬಾರವರ ಆರಂಭದ ಭಜನೆಯಿಂದ ಕೊನೆಯ ಭಜನೆಯವರೆಗೆ ಈ ಸೇವೆಯನ್ನು ಅವರು ದಣಿಯದೆ ಮಾಡುತ್ತಿದ್ದರು.
ಪ.ಪೂ. ಬಾಬಾರವರೂ ಮಧ್ಯ ಮಧ್ಯದಲ್ಲಿ ‘ಡಾ. ಆಠವಲೆಯವರು ಏನು ಮಾಡುತ್ತಿದ್ದಾರೆ’ ಎಂದು ನೋಡುತ್ತಿದ್ದರು. ಯಾವಾಗ ಪ.ಪೂ. ಬಾಬಾರವರು ಅವರಿಗೆ ‘ಕುಳಿತುಕೊಳ್ಳಿ’ ಎಂದು ಹೇಳುತ್ತಿದ್ದರೋ ಆಗ ಮಾತ್ರ ಅವರು ಕೆಳಗೆ ಕುಳಿತುಕೊಳ್ಳುತ್ತಿದ್ದರು. ಅಲ್ಲಿಯವರೆಗೆ ಅವರ ಸೇವೆ ಅವಿರತವಾಗಿ ನಡೆಯುತ್ತಿತ್ತು.
‘ಗುರುಗಳು ಹೇಳಿದ್ದನ್ನು ತಕ್ಷಣ ಮಾಡಬೇಕು’ ಎಂದು ಶಿಷ್ಯ ಡಾ. ಆಠವಲೆಯವರು ಮಾಡಿದರು. ಅಷ್ಟೇ ಅಲ್ಲದೆ ‘ಶ್ರೀ ಗುರುಗಳ ಮನಸ್ಸಿನ ಭಾವವನ್ನು ತಿಳಿದು’ ಈ ಭಾವದಿಂದಲೂ ಅವರು ಪ.ಪೂ. ಬಾಬಾರವರ ಸೇವೆ ಮಾಡಿದರು.
ಆ. ಡಾ. ಆಠವಲೆಯವರು ಗುರುಗಳ ಸಗುಣ ಸೇವೆ ಮಾಡುತ್ತಿರುವಾಗ ಸಾಧಕರು ಡಾ. ಆಠವಲೆಯವರ ಅಧ್ಯಾತ್ಮಪ್ರಸಾರದ ಕಾರ್ಯವನ್ನು ಮುಂದುವರಿಸುವುದು
ಪ.ಪೂ. ಬಾಬಾರವರು ಡಾ. ಆಠವಲೆಯವರಿಗೆ ಏನು ಕಲಿಸಿದ್ದರೋ ಅದನ್ನೇ ಡಾ. ಆಠವಲೆಯವರು ಎಲ್ಲಾ ಸಾಧಕರಿಗೂ ಕಲಿಸಿದರು. ಇದರ ಪರಿಣಾಮವಾಗಿ ಪ.ಪೂ. ಬಾಬಾರವರ ಕೊನೆಯ ಅನಾರೋಗ್ಯದ ಸಮಯದಲ್ಲಿ ಡಾ. ಆಠವಲೆಯವರು ೮ ತಿಂಗಳ ಕಾಲ ಪ.ಪೂ. ಬಾಬಾರವರ ಸಗುಣ ಸೇವೆಗಾಗಿ ಅವರ ಬಳಿಯಿದ್ದಾಗಲೂ ಸಾಧಕರಿಂದ ಡಾ. ಆಠವಲೆಯವರ ಅಧ್ಯಾತ್ಮಪ್ರಸಾರ, ಗ್ರಂಥಬರವಣಿಗೆ ಮುಂತಾದ ಕಾರ್ಯಗಳು ಅವಿರತವಾಗಿ ನಡೆಯುತ್ತಿದ್ದವು. ಡಾ. ಆಠವಲೆಯವರು ಸಾಧಕರ ಮನಸ್ಸಿನಲ್ಲಿ ಗುರುಗಳ ನಿರ್ಗುಣ ರೂಪದ ಮಹತ್ವವನ್ನು ಬಿಂಬಿಸಿದ್ದರು; ಹಾಗಾಗಿಯೇ ಈ ಕಾರ್ಯವಾಗಲು ಸಾಧ್ಯವಾಯಿತು.
೩. ಡಾ. ಆಠವಲೆಯವರು ಗುರುಗಳ ಬೋಧನೆಗಳನ್ನು ವಿವಿಧ ಮಾಧ್ಯಮಗಳ ಮೂಲಕ ಎಲ್ಲರಿಗೂ ತಲುಪಿಸುವುದು
ಅ. ಅಪಾರ ಶ್ರಮ ವಹಿಸಿ ಗುರುಗಳ ಆನಂದ ಮತ್ತು ಶಾಂತಿಯ ಅನುಭೂತಿಗಳನ್ನು ನೀಡುವ ಭಜನೆಗಳನ್ನು ಸಮಷ್ಟಿಗಾಗಿ ಸಂಗ್ರಹಿಸುವುದು : ಡಾ. ಆಠವಲೆಯವರ ನಿರಂತರ ಪ್ರಯತ್ನ ಗಳಿಂದ ಪ.ಪೂ. ಬಾಬಾರವರ ಅಮೃತ ಮಹೋತ್ಸವದ ದಿನದಂದು ಭಜನೆಗಳ ‘ಭಜನಾಮೃತ’ ಧ್ವನಿಮುದ್ರಿಕೆಗಳು (೧೨ ಭಾಗಗಳು) ಮತ್ತು ಭಜನೆಗಳು ಮತ್ತು ಗುರುಪೂರ್ಣಿಮೆ ಮಹೋತ್ಸವದ ‘ದರ್ಶನ’ ಚಿತ್ರಮುದ್ರಿಕೆಗಳು (೧೬ ಭಾಗಗಳು) ಪ.ಪೂ. ಬಾಬಾರವರ ಶುಭಹಸ್ತದಿಂದ ಬಿಡುಗಡೆ ಮಾಡಲಾಯಿತು.
ಆ. ಗುರುಗಳ ಬಗ್ಗೆ ಗ್ರಂಥಗಳನ್ನು ಪ್ರಕಟಿಸುವುದು : ‘ಗುರುಗಳ ಬಗ್ಗೆ ಭಾವದಿಂದ, ಹಾಗೆಯೇ ಗುರುಗಳ ಮಹತ್ವ ಮತ್ತು ಬೋಧನೆಗಳನ್ನು ಎಲ್ಲೆಡೆ ತಲುಪಿಸಲು ಡಾ. ಆಠವಲೆಯವರು ಪ.ಪೂ. ಬಾಬಾರವರ ಭಜನೆಗಳು, ಚರಿತ್ರೆ ಮತ್ತು ಬೋಧನೆಗಳ ಬಗ್ಗೆ ಗ್ರಂಥಗಳನ್ನು ಸಂಕಲನ ಮಾಡಿ ಪ್ರಕಟಿಸಿದರು. ಈ ಗ್ರಂಥಗಳು ಸಾಧಕರು, ಭಕ್ತರು ಮತ್ತು ಶಿಷ್ಯರಿಗೆ ಮಾರ್ಗದರ್ಶನದ ಅಮೂಲ್ಯ ನಿಧಿಯಾಗಿವೆ. – (ಪೂ.) ಸಂದೀಪ ಆಳಶಿ
ಆ ೧. ಪ.ಪೂ. ಬಾಬಾರವರ ಚರಿತ್ರೆ ಗ್ರಂಥದ ಬಗ್ಗೆ ಅವರು ವ್ಯಕ್ತಪಡಿಸಿದ ಮಾತುಗಳು : ಪ.ಪೂ. ಬಾಬಾರವರ ಅಮೃತ ಮಹೋತ್ಸವದಲ್ಲಿ ಪ.ಪೂ. ಬಾಬಾರವರ ಸನಾತನ-ನಿರ್ಮಿತ ಚರಿತ್ರೆ ಗ್ರಂಥದ ಬಿಡುಗಡೆ ಆಯಿತು. ಆಗ ಅವರು, ‘ಚರಿತ್ರೆ ಬರೆಯುವುದಾದರೆ ಹೀಗಿರಬೇಕು !’ ಎಂದರು.
೪. ಪ.ಪೂ. ಬಾಬಾರವರ ಗುರುಪೂರ್ಣಿಮಾ ಮಹೋತ್ಸವಗಳನ್ನು ಆಯೋಜಿಸುವುದು
ವರ್ಷ ೧೯೮೮ ರಿಂದ ಶಿಷ್ಯ ಡಾ. ಆಠವಲೆಯವರು ಪ.ಪೂ. ಬಾಬಾರವರ ಗುರುಪೂರ್ಣಿಮೆ ಮಹೋತ್ಸವಕ್ಕೆ ಹೋಗಲು ಪ್ರಾರಂಭಿಸಿದರು. ವರ್ಷ ೧೯೯೨, ೧೯೯೩ ಮತ್ತು ೧೯೯೫ ರಲ್ಲಿ ಡಾ. ಆಠವಲೆಯವರು ‘ಸ್ವಂತ ಮತ್ತು ಸಾಧಕರ ಕೈಯಿಂದ ಗುರುಸೇವೆ ಆಗಬೇಕು ಮತ್ತು ಅದರ ಮೂಲಕ ಎಲ್ಲರಿಗೂ ಗುರುಪೂರ್ಣಿಮೆಯಂದು ೧ ಸಾವಿರ ಪಟ್ಟು ಕಾರ್ಯನಿರತವಾಗಿರುವ ಗುರುತತ್ತ್ವದ ಲಾಭವಾಗಬೇಕು’ ಎಂಬ ಉದ್ದೇಶದಿಂದ ಪ.ಪೂ. ಬಾಬಾರವರ ಗುರುಪೂರ್ಣಿಮೆ ಮಹೋತ್ಸವಗಳನ್ನು ಸ್ವತಃ ಆಯೋಜಿಸಿದರು. ಈ ಸಮಯದಲ್ಲಿ ಡಾ. ಆಠವಲೆಯವರು ಸಾಧಕರಿಗೆ ‘ಗುರುಪೂರ್ಣಿಮೆಯ ಯೋಜನೆಯನ್ನು ಹೇಗೆ ಮಾಡಬೇಕು ?’ ಎಂಬುದನ್ನು ಕೃತಿಯ ಸ್ತರದಲ್ಲಿ ಕಲಿಸಿದರು. ಈ ಯೋಜನೆಯು ಪ.ಪೂ. ಬಾಬಾರವರಿಗೂ ಇಷ್ಟವಾಯಿತು.
ಈ ಗುರುಪೂರ್ಣಿಮೆ ಮಹೋತ್ಸವಗಳಲ್ಲಿ ‘ಸಂತ-ಸನ್ಮಾನ, ಸಂತರ ಮಾರ್ಗದರ್ಶನ, ಸಾಧಕರಿಗೆ ಬಂದ ಅನುಭವಗಳ ನಿರೂಪಣೆ’, ಮುಂತಾದ ಕಾರ್ಯಕ್ರಮಗಳು ಇರುತ್ತಿದ್ದವು. ಸಂತರ ಮಾರ್ಗದರ್ಶನ ಮತ್ತು ಸಾಧಕರ ಅನುಭವ ನಿರೂಪಣೆಯಿಂದ ಸಾಧಕರಿಗೆ ಸಾಧನೆ ಮಾಡಲು ಸ್ಫೂರ್ತಿ ಸಿಗುತ್ತಿತ್ತು. ‘ಸಾಧಕರು ಗುರುಪೂರ್ಣಿಮೆಯ ಆಧ್ಯಾತ್ಮಿಕ ಲಾಭವನ್ನು ಎಷ್ಟು ಪ್ರಮಾಣದಲ್ಲಿ ಪಡೆದುಕೊಂಡರು?’ ಎಂಬುದರ ಶೇಕಡಾವಾರು ಪ್ರಮಾಣವನ್ನು ಡಾ. ಆಠವಲೆಯವರು ಹೇಳುತ್ತಿದ್ದರು.
೫. ಪ.ಪೂ. ಬಾಬಾರವರ ಅಮೃತ ಮಹೋತ್ಸವದಲ್ಲಿ ಡಾ. ಆಠವಲೆಯವರ ಆದರ್ಶ ಗುರುಸೇವೆ !
ಜುಲೈ ೧೯೯೩ ರಲ್ಲಿ ಪ.ಪೂ. ಭಕ್ತರಾಜ ಮಹಾರಾಜರು (ಪ.ಪೂ. ಬಾಬಾ) ಇಂದೂರಿನ ಶ್ರೀ ನರಹರಿ ಶಾಸ್ತ್ರಿ ಅವರಿಗೆ, ”ನನ್ನ ಗುರುಗಳು ನನ್ನ ೭೫ ನೇ ಅಮೃತಮಹೋತ್ಸವವನ್ನು ‘ನ ಭೂತೋ ನ ಭವಿಷ್ಯತಿ’ ರೀತಿಯಲ್ಲಿ ಆಚರಿಸಲಿದ್ದಾರೆ. ಜಗತ್ತು ನೋಡುತ್ತಿರುವುದು’ ಎಂದರು. ೮ ಮತ್ತು ೯ ಫೆಬ್ರವರಿ ೧೯೯೫ ರಂದು ಪ.ಪೂ. ಬಾಬಾರವರ ಅಮೃತ ಮಹೋತ್ಸವವು ಇಂದೂರ್‌ನಲ್ಲಿ ಭಕ್ತರಿಂದ ಅಪಾರ ಉತ್ಸಾಹದಲ್ಲಿ ಆಚರಿಸಲ್ಪಟ್ಟಿತು. ಈ ಸಮಾರಂಭದ ಆಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಶಿಷ್ಯ ಡಾ. ಆಠವಲೆಯವರು ಶ್ರದ್ಧೆಯಿಂದ ಮತ್ತು ಅವಿರತ ಶ್ರಮ ವಹಿಸಿ ನಿರ್ವಹಿಸಿದರು. ಇದರ ಮೂಲಕ ಗುರುಸೇವೆಯ ಆದರ್ಶವನ್ನು ನಿರ್ಮಿಸಿ ಅವರು ಗುರುಚರಣಕ್ಕೆ ಕೃತಜ್ಞತೆಯ ಭಾವಪುಷ್ಪವನ್ನೇ ಅರ್ಪಿಸಿದರು. ಈ ಸಮಾರಂಭದ ನಂತರ ಪ.ಪೂ. ಬಾಬಾ, ”ಇಂತಹ ಸಮಾರಂಭವು ಎಂದಿಗೂ ಆಗಿಲ್ಲ ಮತ್ತು ಮುಂದೆಂದೂ ಆಗುವುದೂ ಇಲ್ಲ !’’ ಎಂದರು.

ಅಮೃತ ಮಹೋತ್ಸವದ ಸಮಯದಲ್ಲಿ ಪ.ಪೂ. ಬಾಬಾರವರು ಶಿಷ್ಯ ಡಾ. ಆಠವಲೆಯವರಿಗೆ ಶ್ರೀಕೃಷ್ಣಾರ್ಜುನರಥವನ್ನು ನೀಡುವುದು: ಅಮೃತ ಮಹೋತ್ಸವದ ದಿನದಂದು ಪ.ಪೂ. ಬಾಬಾರವರು ಶಿಷ್ಯ ಡಾ. ಆಠವಲೆಯವರನ್ನು ಕರೆದು ಅವರಿಗೆ ಮುಕ್ಕಾಲು ಗಂಟೆ ಶ್ರೀಕೃಷ್ಣ-ಅರ್ಜುನರ ಮಹಾತ್ಮೆಯನ್ನು ಹೇಳಿದರು. ನಂತರ ಡಾ. ಆಠವಲೆಯವರಿಗೆ ಬೆಳ್ಳಿಯ ಶ್ರೀಕೃಷ್ಣಾರ್ಜುನ ರಥವನ್ನು ನೀಡಿ, ”ಮುಂದೆ ಗೋವಾದಲ್ಲಿ ನಮ್ಮ ಆಶ್ರಮವಾಗಲಿದೆ, ಅಲ್ಲಿ ಇದನ್ನು ಇಡಿ’’ ಎಂದು ಪ.ಪೂ. ಬಾಬಾರವರು ಹೇಳಿದರು. (‘ಪ್ರತ್ಯಕ್ಷದಲ್ಲಿಯೂ ವರ್ಷ ೨೦೦೫ ರಿಂದ ರಾಮನಾಥಿ (ಗೋವಾ) ಯಲ್ಲಿ ಸನಾತನದ ಮುಖ್ಯ ಆಶ್ರಮವಿದ್ದು, ಅಲ್ಲಿ ಈ ರಥವನ್ನು ಇಡಲಾಗಿದೆ.’ – ಸಂಕಲನಕಾರರು)
೬. ಡಾ. ಆಠವಲೆಯವರು ಗುರುಗಳ ಅನಾರೋಗ್ಯ ಮತ್ತು ದೇಹತ್ಯಾಗದ ಸಮಯದಲ್ಲಿ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸುವುದು
ವರ್ಷ ೧೯೯೫ ರಲ್ಲಿ ಡಾ. ಆಠವಲೆಯವರು ಪ.ಪೂ. ಬಾಬಾರವರ ಕೊನೆಯ ಅನಾರೋಗ್ಯದಲ್ಲಿ ಅವರ ೮ ತಿಂಗಳ ಸೇವೆ ಮಾಡಿದರು. ೧೭.೧೧.೧೯೯೫ ರಂದು ಪ.ಪೂ. ಬಾಬಾರವರು ಮಹಾನಿರ್ವಾಣ ಹೊಂದಿದರು. ಪ.ಪೂ. ಬಾಬಾರವರ ಕೊನೆಯ ಕ್ಷಣದಲ್ಲಿಯೂ ಡಾ. ಆಠವಲೆಯವರು ಇಂದೂರ್‌ನಲ್ಲಿ ಉಪಸ್ಥಿತರಿದ್ದರು. ಇಂದೂರ್‌ನಿಂದ ಹೊರಟ ಪ.ಪೂ. ಬಾಬಾರವರ ಅಂತಿಮಯಾತ್ರೆಯೊಂದಿಗೆ ಅವರು ಕಾಂದಳಿ (ಪುಣೆ, ಮಹಾರಾಷ್ಟ್ರ)ಗೆ ಬಂದು ಅಂತಿಮಸಂಸ್ಕಾರವಾಗುವ ವರೆಗಿನ ಎಲ್ಲಾ ಸೇವೆಗಳಲ್ಲಿ ಭಾಗವಹಿಸಿದರು.
ಇ. ಪ.ಪೂ. ರಾಮಾನಂದ ಮಹಾರಾಜರ ಡಾ. ಆಠವಲೆಯವರ ಮೇಲಿನ ಪ್ರೀತಿ ! : ‘ಪ.ಪೂ. ಬಾಬಾರವರ ನಿರ್ವಾಣದ ನಂತರ ಅವರ ಉತ್ತರಾಧಿಕಾರಿ ಪ.ಪೂ. ರಾಮಾನಂದ ಮಹಾರಾಜರ ಗುರುರೂಪದಲ್ಲಿ ನನಗೆ ಮಾರ್ಗದರ್ಶನ ಸಿಕ್ಕಿತು. ಅವರು ನನಗೆ ಪ.ಪೂ. ಬಾಬಾರವರ ಕೊರತೆಯನ್ನು ಎಂದಿಗೂ ಅನುಭವಿಸಲು ಬಿಡಲಿಲ್ಲ. ಅವರು ನನ್ನ ಮೇಲೆ ಪ.ಪೂ. ಬಾಬಾರವರಂತೆಯೇ ಅಪಾರ ಪ್ರೀತಿ ತೋರಿದರು. ನನ್ನ ಅನಾರೋಗ್ಯ ಮತ್ತು ಸನಾತನದ ಮೇಲಿನ ನಿಷೇಧದ ಬಿಕ್ಕಟ್ಟಿನ ಸಮಯದಲ್ಲಿ ಅವರು ಜಪ ಮತ್ತು ಅನುಷ್ಠಾನಗಳನ್ನು ಮಾಡಿ ನಮ್ಮನ್ನು ರಕ್ಷಿಸಿದರು.’ – ಡಾ. ಆಠವಲೆ
ಈ. ಆದರ್ಶ ಶಿಷ್ಯ: ‘ತಮ್ಮ ಗುರುಗಳ ಸೇವೆ ಹೇಗೆ ಮಾಡಬೇಕು?’, ಎಂಬುದರ ಆದರ್ಶವನ್ನು ಡಾ. ಆಠವಲೆಯವರು ತಮ್ಮ ಸ್ವಂತ ಉದಾಹರಣೆಯಿಂದ ಎಲ್ಲಾ ಸಾಧಕರ ಮುಂದೆ ಇಟ್ಟಿದ್ದಾರೆ. ಅದಕ್ಕಾಗಿ ಸನಾತನದ ‘ಶಿಷ್ಯ’ ಗ್ರಂಥವನ್ನು ಮನನ ಮಾಡಬೇಕು. ‘ಜನರಿಗೆ ಬ್ರಹ್ಮಜ್ಞಾನ ಹೇಳುವುದು, ತಾನು ಒಣ ಕಲ್ಲು’ ಅವರ ಬಗ್ಗೆ ಆಗಲಿಲ್ಲ, ಆದರೆ ‘ಮೊದಲು ಮಾಡಿದ್ದು ಮತ್ತು ನಂತರ ಹೇಳಿದ್ದು’ ಆಗಿದೆ. ವರ್ಷ ೧೯೮೭ ರಲ್ಲಿ ಗುರುಪ್ರಾಪ್ತಿಯಾದ ನಂತರ ಅವರು ಗುರುಗಳಿಗೆ ತನು, ಮನ ಮತ್ತು ಧನವನ್ನು ಅರ್ಪಿಸಿದರು. ಆಗ ಪ.ಪೂ. ಭಕ್ತರಾಜ ಮಹಾರಾಜರು, ”ಡಾಕ್ಟರ್, ನೀವು ನನಗೆ ತನು, ಮನ ಮತ್ತು ಧನವನ್ನು ಅರ್ಪಿಸಿದ್ದೀರಿ. ನಾನು ನಿಮಗೆ ಜ್ಞಾನ, ಭಕ್ತಿ ಮತ್ತು ವೈರಾಗ್ಯವನ್ನು ನೀಡುತ್ತೇನೆ !’’ ಎಂದರು. ಪ.ಪೂ. ಬಾಬಾರವರು ಆಗಾಗ ಅಧ್ಯಾತ್ಮದ ಬಗ್ಗೆ ಏನು ಕಲಿಸುತ್ತಿದ್ದರೋ, ಅವೆಲ್ಲವನ್ನೂ ಡಾ. ಆಠವಲೆಯವರು ಬರೆದಿಡುತ್ತಿದ್ದರು. ಪ.ಪೂ. ಬಾಬಾ ಅವರಿಗೆ, ”ಈ ಬರವಣಿಗೆ ನಿಮಗೆ ಉಪಯೋಗವಾಗುವುದಿಲ್ಲ (ಏಕೆಂದರೆ ಈಗ ನೀವು ಶಬ್ದಾತೀತ ಮಾಧ್ಯಮದಿಂದ ಕಲಿಯಬಹುದು); ಆದರೆ ಇತರರಿಗೆ ಉಪಯೋಗವಾಗುತ್ತದೆ !’’ಎಂದರು. ವರ್ಷ ೧೯೮೯ ರಲ್ಲಿ ಗುರುಗಳು ಡಾ. ಆಠವಲೆಯವರಿಗೆ ಇತರರಿಗೆ ‘ನಾಮ’ ನೀಡಲು ಹೇಳಿದರು, ಅಂದರೆ ಪರೋಕ್ಷವಾಗಿ ಅವರಿಗೆ ಗುರುಪದ ಪ್ರಾಪ್ತವಾಗಿದೆ ಎಂದು ಸೂಚಿಸಿದರು. ಮುಂದೆ ಅವರು ಪರಾತ್ಪರ ಗುರುಪದವಿಯನ್ನು ತಲುಪಿದರು. ಡಾ. ಆಠವಲೆಯವರಲ್ಲಿನ ‘ತೀವ್ರ ಮುಮುಕ್ಷುತ್ವ’, ‘ಜಿಜ್ಞಾಸು ವೃತ್ತಿ’, ‘ಲೀನತೆ’, ‘ಗುರುಸೇವೆಯ ಧ್ಯಾಸ’ ಮುಂತಾದ ಗುಣಗಳಿಂದ ಪ.ಪೂ. ಬಾಬಾರವರು ಅವರಿಗೆ ಎಲ್ಲವನ್ನೂ ತುಂಬಿ ನೀಡಿದರು.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಿತ್ರೆಯ ಮುಂಬರುವ ಗ್ರಂಥದ ಲೇಖನ
(ಮುಂದುವರಿಯುವುದು)
ಶಿಷ್ಯ ಡಾ. ಆಠವಲೆಯವರ ಬಗ್ಗೆ ಪೂಜ್ಯ ಭಕ್ತರಾಜ ಮಹಾರಾಜರು ಆಗಾಗ ವ್ಯಕ್ತಪಡಿಸಿದ ನುಡಿಗಳನ್ನು ಮುಂದೆ ನೀಡಲಾಗಿದೆ. ಈ ನುಡಿಗಳು ಡಾ. ಆಠವಲೆಯವರ ಆಧ್ಯಾತ್ಮಿಕ ಅಧಿಕಾರವನ್ನು ತೋರಿಸುತ್ತವೆ. ವರ್ಷ ೧೯೮೯ ಡಾಕ್ಟರೇ, ನೀವು ಇತರರಿಗಿಂತ ವಿಭಿನ್ನರಾಗಿದ್ದೀರಿ! ‘ಒಮ್ಮೆ ನಾನು ಊಟಕ್ಕೆ ಇತರರೊಂದಿಗೆ ಪಂಕ್ತಿಯಲ್ಲಿ ಕುಳಿತಿದ್ದಾಗ ಪೂಜ್ಯ ಭಕ್ತರಾಜ ಮಹಾರಾಜರು (ಪೂಜ್ಯ ಬಾಬಾ) ನನಗೆ ‘ನೀವು ಅಲ್ಲಿ ಕೂರಬೇಡಿ. ಬೇರೆಯಾಗಿಕೂತ್ಕೊಳ್ಳಿ. ನೀವು ಅವರಿಗಿಂತ ವಿಭಿನ್ನರಾಗಿದ್ದೀರಿ!’ ಎಂದರು. – ಡಾ. ಆಠವಲೆ ವರ್ಷ ೧೯೯೧ ಅವರು (ಡಾ. ಆಠವಲೆ) ಜೀವನಮುಕ್ತರಾಗಿದ್ದಾರೆ ! ‘ನನ್ನ ಮುಂದೆಯೇ ಅನೇಕ ಬಾರಿ ಪೂಜ್ಯ ಬಾಬಾರವರು ಇತರರಿಗೆ ‘ಅವರು (ಡಾ. ಆಠವಲೆ) ಜೀವನಮುಕ್ತರಾಗಿದ್ದಾರೆ’ ಎಂದರು. – ಡಾ. ಆಠವಲೆ |