Nepal Muslims Attack Hanuman Jayanti Procession: ನೇಪಾಳದಲ್ಲಿ ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ

  • ಅನೇಕ ಪೊಲೀಸರ ಸಹಿತ ೫೦ ಜನರಿಗೆ ಗಾಯ

  • ನಿಷೇಧಾಜ್ಞೆ ಜಾರಿ

ಬೀರಗಂಜ (ಬಿಹಾರ) – ಬಿಹಾರದಲ್ಲಿನ ಪೂರ್ವ ಚಂಪಾರಣ್ಯ ಜಿಲ್ಲೆಯ ಭಾರತ-ನೇಪಾಳ ಗಡಿಯಲ್ಲಿರುವ ರಕ್ಸೌಲ ಪ್ರಾಂತಕ್ಕೆ ಹೊಂದಿಕೊಂಡಿರುವ ಬೀರಗಂಜ (ಬಿಹಾರ್) ಇಲ್ಲಿ ಏಪ್ರಿಲ್ ೧೨ ರಂದು ಹನುಮಾನ ಜಯಂತಿ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಮುಸಲ್ಮಾನರಿಂದ ವಿಧ್ವಂಸಕ ಕೃತ್ಯಗಳು ಮತ್ತು ಬೆಂಕಿ ಅವಘಡಗಳು ನಡೆಸಲಾದವು. ಇದರಿಂದ ಭಾರತ-ನೇಪಾಳದ ರಕ್ಸೌಲ ಬೀರಗಂಜ ಪ್ರದೇಶದಲ್ಲಿನ ಗಡಿ ಭಾಗ ಮುಚ್ಚಲಾಯಿತು.

೧. ಬೀರಗಂಜ ಮಹಾನಗರ ಕ್ಷೇತ್ರದಲ್ಲಿನ ಛಪಾಕಿಯ ಇಲ್ಲಿ ಹನುಮಾನ ಜಯಂತಿಯ ಪ್ರಯುಕ್ತ ಮೆರವಣಿಗೆ ನಡೆಸಲಾಯಿತು. ಅದರಲ್ಲಿ ಅನಿರೀಕ್ಷಿತವಾಗಿ ಛಾವಣಿಯಿಂದ ಮುಸಲ್ಮಾನರು ಇಟ್ಟಿಗೆ ಕಲ್ಲಗಳನ್ನು ತೂರಿದರು. ಇದರಿಂದ ಅನೇಕ ಹಿಂದುಗಳು ಗಾಯಗೊಂಡರು ಮತ್ತು ಪರಿಸ್ಥಿತಿ ಹದಗೆಟ್ಟಿತು. ಕೆಲವೇ ಕ್ಷಣದಲ್ಲಿ ಗುಂಪು ಹಿಂಸಾತ್ಮಕ ರೂಪ ತಾಳಿತು. ಅನೇಕ ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಈ ಹಿಂಸಾಚಾರದಲ್ಲಿ ಸುಮಾರು ೫೦ ಜನರು ಗಾಯಗೊಂಡರು. ಇದರಲ್ಲಿ ಅನೇಕ ಪೋಲಿಸರ ಸಮಾವೇಶ ಕೂಡ ಇದೆ .

೨. ಗಲಭೆ ಹಿಡಿತಕ್ಕೆ ತರುವುದಕ್ಕಾಗಿ ನೇಪಾಳ ಪೊಲೀಸರು ಅಶ್ರುವಾಯು ಕೂಡ ಉಪಯೋಗಿಸಿದರು. ಪರಿಸ್ಥಿತಿಯ ಗಾಂಭೀರ್ಯತೆ ಗಮನಿಸಿ ನೇಪಾಳ ಸರಕಾರವು ಬೀರಗಂಜದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತು.

೩. ಬಿಹಾರದ ರಕ್ಸೌಲಾದಲ್ಲಿನ ಅನೇಕ ಜನರು ಬೀರಗಂಚದಲ್ಲಿ ವಿವಿಧ ರೀತಿಯ ವ್ಯವಸಾಯ ಮಾಡುತ್ತಾರೆ; ಹಿಂಸಾಚಾರದಿಂದ ಅನೇಕ ವ್ಯಾಪಾರಿಗಳು ಬೀರಗಂಜದಲ್ಲಿ ಸಿಲುಕಿದ್ದಾರೆ. ಅವರು ತಮ್ಮ ಅಂಗಡಿಗಳನ್ನು ಮುಚ್ಚಿದ್ದಾರೆ ಮತ್ತು ಅಲ್ಲಿ ಇಲ್ಲಿ ಅಡಿಗಿ ಕುಳಿತಿದ್ದಾರೆ.

ಸಂಪಾದಕೀಯ ನಿಲುವು

ಭಾರತ-ನೇಪಾಳ ಗಡಿಯಲ್ಲಿ ಬೃಹತ್ ಪ್ರಮಾಣದಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಿದೆ ಮತ್ತು ಅವರು ಈಗ ಕಿರುಕುಳ ನೀಡಲು ಆರಂಭಿಸಿದ್ದಾರೆ. ಈಗ ಇದರ ವಿರುದ್ಧ ಭಾರತವೇ ಕಠಿಣ ಕ್ರಮ ಕೈಗೊಳ್ಳಬೇಕು !