Russian Missile Strikes : ರಷ್ಯಾದಿಂದ ಉಕ್ರೇನ್ ನಲ್ಲಿನ ಭಾರತೀಯ ಔಷಧಿ ಕಂಪನಿಯ ಗೋದಾಮಿನ ಮೇಲೆ ದಾಳಿ

ಕೀವ (ಉಕ್ರೇನ) – ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಉಕ್ರೇನ್ ನ ‘ಕುಸುಮ’ ಎಂಬ ಭಾರತೀಯ ಔಷಧ ತಯಾರಿಕಾ ಘಟಕದ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದೆ. ಭಾರತದಲ್ಲಿರುವ ಉಕ್ರೇನ ರಾಯಭಾರಿ ಕಚೇರಿಯು, ‘ಭಾರತದೊಂದಿಗೆ ವಿಶೇಷ ಸ್ನೇಹವಿದೆ ಎಂದು ಹೇಳಿಕೊಳ್ಳುವ ರಷ್ಯಾ ಉದ್ದೇಶಪೂರ್ವಕವಾಗಿ ಭಾರತೀಯ ಘಟಕಗಳ ಮೇಲೆ ದಾಳಿ ನಡೆಸುತ್ತಿದೆ’ ಎಂದು ಆರೋಪಿಸಿದೆ. ಈ ದಾಳಿಯ ಬಗ್ಗೆ ಭಾರತ ಮತ್ತು ರಷ್ಯಾ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.