ತ್ರಿಪುರಾ: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ: ಮತಾಂಧ ಮುಸ್ಲಿಮರಿಂದ ಪೊಲೀಸರ ಮೇಲೆ ದಾಳಿ

ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಕಾಂಗ್ರೆಸ್ಸಿನ ನಾಯಕ

ಉನಕೋಟಿ (ತ್ರಿಪುರ) – ಏಪ್ರಿಲ್ 12 ರಂದು, ಕೈಲಾಶ್ ಹೆದ್ದಾರಿಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿರುವಾಗ ಮತಾಂಧ ಮುಸ್ಲಿಮರು ಪೊಲೀಸರ ಮೇಲೆ ಹಲ್ಲೆ ಮಾಡಿದರು. ಈ ಹಲ್ಲೆಯಲ್ಲಿ ಓರ್ವ ಪೊಲೀಸ್ ಸಿಪಾಯಿ ಮತ್ತು ಓರ್ವ ಅಧಿಕಾರಿ ಗಾಯಗೊಂಡರು.

ಹಿಂಸಾಚಾರದಲ್ಲಿ ತೊಡಗಿದ್ದ 7 ಮುಸ್ಲಿಮರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನಾ ನಿರತ ಮುಸ್ಲಿಮರು ತಿಲ್ ಬಜಾರ್‌ನಿಂದ ಉಪವಿಭಾಗಾಧಿಕಾರಿಯ ಹಳೆಯ ಕಛೇರಿಯವರೆಗೆ ಮೆರವಣಿಗೆ ಮಾಡುವವರಿದ್ದರು. ಈ ಮೆರವಣಿಗೆಯನ್ನು ಪೊಲೀಸರು ತಡೆದಾಗ ಪ್ರತಿಭಟನಾಕಾರರು ಪೋಲಿಸರ ಮೇಲೆ ಹಲ್ಲೆ ನಡೆಸಿದರು. ಬಳಿಕ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಈ ಆಂದೋಲನದ ನೇತೃತ್ವವನ್ನು ಕಾಂಗ್ರೆಸ್ಸಿನ ನಾಯಕ ಬದ್ರೂಜ್ ಜಮಾನ್ ವಹಿಸಿದ್ದರು.

ಸಂಪಾದಕೀಯ ನಿಲುವು

  • ಪ್ರಜಾಪ್ರಭುತ್ವದ ಮೂಲಕ ಪ್ರತಿಭಟಿಸುವ ಹಕ್ಕು ಇರುವಾಗ, ಅದರ ದುರುಪಯೋಗ ಮಾಡಿಕೊಂಡು ಹಿಂಸಾಚಾರವನ್ನು ಮಾಡುವ ಮುಸ್ಲಿಮರನ್ನು ಈಗ ಎಲ್ಲಿಯೂ ಪ್ರತಿಭಟಿಸಲು ಅನುಮತಿ ನೀಡಬಾರದೆಂದು ದೇಶಭಕ್ತ ನಾಗರೀಕರು ಒತ್ತಾಯಿಸಬೇಕು!
  • ಗಾಂಧಿಯವರ ಕಟ್ಟಾ ಅಹಿಂಸಾ ವಾದವನ್ನು ಬೆಂಬಲಿಸುವ ಕಾಂಗ್ರೆಸ್ಸಿಗರ ಹಿಂಸಾತ್ಮಕ ಸ್ವಭಾವ ಈಗ ಬಹಿರಂಗಗೊಳ್ಳುತ್ತಿದೆ!